Sunday, Sep 19 2021 | Time 22:15 Hrs(IST)
Special

2ನೇ ಅಲೆ ಮಧ್ಯದಲ್ಲಿದ್ದೇವೆ ಮುಂದಿನ 2 ತಿಂಗಳು ಅತ್ಯಂತ ನಿರ್ಣಾಯಕ; ಕೇಂದ್ರ ಸರ್ಕಾರ

26 Aug 2021 | 5:59 PM

ನವದೆಹಲಿ, ಆಗಸ್ಟ್‌ 26(ಯುಎನ್‌ ಐ) ದೇಶದಲ್ಲಿ ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಎರಡನೇ ಅಲೆ ಮುಂದುವರಿದಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ ಸೆಪ್ಟೆಂಬರ್ , ಅಕ್ಟೋಬರ್ ತಿಂಗಳಲ್ಲಿ ಹಲವು ಹಬ್ಬಗಳು ಇರುವುದರಿಂದ, ಆ ಎರಡು ತಿಂಗಳುಗಳು ಅತ್ಯಂತ ನಿರ್ಣಾಯಕ ಎಂದು ಹೇಳಿದೆ.

 Sharesee more..

ಹೊಸ ಡ್ರೋನ್‌ ನಿಯಮಗಳಿಂದ ಹೆಚ್ಚಿನ ಪ್ರಯೋಜನ; ಮೋದಿ

26 Aug 2021 | 5:12 PM

ನವದೆಹಲಿ, ಆಗಸ್ಟ್‌ 26(ಯು ಎನ್‌ ಐ) ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹೊರಡಿಸಿರುವ ಹೊಸ ಡ್ರೋನ್ ನಿಯಮಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಶ್ಲಾಘಿಸಿದ್ದಾರೆ ಈ ನಿಯಮಗಳಿಂದ ನವೋದ್ಯಮ ಸಂಸ್ಥೆಗಳು ಹೆಚ್ಚಿನ ಪ್ರಯೋಜನ ಪಡೆಯಲಿವೆ ಎಂದು ಹೇಳಿದ್ದಾರೆ.

 Sharesee more..

ಗಂಡು ಮಗುವಿಗೆ ಜನ್ಮನೀಡಿದ ನಟಿ, ಸಂಸದೆ ನುಸ್ರತ್‌ ಜಹಾನ್ ಗೆ ಶುಭಕೋರಿದ ಮಾಜಿ ಪತಿ

26 Aug 2021 | 4:00 PM

ಕೊಲ್ಕತ್ತಾ, ಆಗಸ್ಟ್‌ 26 (ಯು ಎನ್‌ ಐ) ಬಂಗಾಳಿ ನಟಿ, ತೃಣ ಮೂಲ ಕಾಂಗ್ರೆಸ್‌ ಸಂಸದೆ ನುಸ್ರತ್‌ ಜಹಾನ್‌ ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಪ್ರಸವಕ್ಕಾಗಿ ಬುಧವಾರ ರಾತ್ರಿ ಕೊಲ್ಕತ್ತಾದ ಪಾರ್ಕ್‌ ಸ್ಟ್ರೀಟ್‌ ನಲ್ಲಿರುವ ಭಗಿರಥಿ ಆಸ್ಪತ್ರೆಗೆ ದಾಖಲಾಗಿದ್ದರು.

 Sharesee more..

ಅಫ್ಘನ್‌ ನಲ್ಲಿ ಉದ್ವಿಗ್ನ ಪರಿಸ್ಥಿತಿ .. ಸರ್ವಪಕ್ಷ ಸಭೆಗೆ ಕೇಂದ್ರ ಮಾಹಿತಿ

26 Aug 2021 | 3:23 PM

ನವದೆಹಲಿ, ಆಗಸ್ಟ್‌ 26 (ಯುಎನ್‌ ಐ) ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವ ಅಫ್ಘಾನಿಸ್ತಾನದಲ್ಲಿ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ ಎಂದು ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿದ ರಾಜಕೀಯ ಪಕ್ಷಗಳ ನಾಯಕರಿಗೆ ಗುರುವಾರ ಮನವರಿಕೆಮಾಡಿಕೊಟ್ಟಿದೆ.

 Sharesee more..

ಸುಪ್ರೀಂ ಕೋರ್ಟ್‌ ಜಡ್ಜ್‌ ಗಳ ನೇಮಕ ಆದೇಶಕ್ಕೆ ರಾಷ್ಟ್ರಪತಿಗಳ ಅಂಕಿತ

26 Aug 2021 | 2:47 PM

ನವದೆಹಲಿ, ಆಗಸ್ಟ್‌ 26(ಯುಎನ್‌ ಐ) ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದ 9 ಮಂದಿ ನ್ಯಾಯಮೂರ್ತಿಗಳ ನೇಮಕಾತಿ ಅಂತಿಮಗೊಂಡಿದೆ ಇದಕ್ಕೆ ಸಂಬಂಧಿಸಿದಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳ ನೇಮಕ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗುರುವಾರ ಸಹಿ ಹಾಕಿದ್ದಾರೆ.

 Sharesee more..

ಯಾಹೂ ನ್ಯೂಸ್; ಭಾರತದಲ್ಲಿ 20 ವರ್ಷಗಳ ಸೇವೆ ಅಂತ್ಯ ..

26 Aug 2021 | 2:24 PM

ನವದೆಹಲಿ, ಆಗಸ್ಟ್‌ 26(ಯುಎನ್‌ ಐ)- ವೆಬ್ ಸೇವೆಗಳ ಪೂರೈಕೆದಾರ ಯಾಹೂ .

 Sharesee more..

ದೇಶದಲ್ಲಿ 46, 164 ಹೊಸ ಪ್ರಕರಣ, 607 ಸಾವು

26 Aug 2021 | 10:51 AM

ನವದೆಹಲಿ, ಆಗಸ್ಟ್ 26 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 46 ಸಾವಿರದ 164 ಮಂದಿಗೆ ಸೊಂಕು ತಗುಲಿರುವುದು ಧೃಡಪಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 Sharesee more..

ಯುಪಿ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್

26 Aug 2021 | 9:15 AM

ಲಕ್ನೋ ,ಆಗಸ್ಟ್ 26 (ಯುಎನ್ಐ) ರಾಷ್ಟ್ರಪತಿ ರಾಮನಾಥ ಕೋವಿಂದ್ ನಾಲ್ಕುದಿನಗಳ ಅಧಿಕೃತ ಭೇಟಿಗಾಗಿ ಇಂದು ಮಧ್ಯಾಹ್ನ ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ಆಗಮಿಸಲಿದ್ದಾರೆ ನಾಲ್ಕುದಿನಗಳ ವಾಸ್ತವ್ಯದಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ .

 Sharesee more..

ಅಪರಾಧ ನಿಯಂತ್ರಣಕ್ಕೆ ಬೊಮ್ಮಾಯಿ ಗಮನ ಹರಿಸಲಿ; ಸಿದ್ದರಾಮಯ್ಯ

25 Aug 2021 | 9:05 PM

ಬೆಂಗಳೂರು, ಆಗಸ್ಟ್‌ 25(ಯುಎನ್‌ ಐ) ಮೈಸೂರು ಸೇರಿದಂತೆ ಇಡೀ ರಾಜ್ಯದಲ್ಲಿ ಅಪರಾಧಗಳ‌ ಸಂಖ್ಯೆ‌ ಹೆಚ್ಚಾಗುತ್ತಿವೆ ಎಂದು ಬುಧವಾರ ಕಳವಳ ವ್ಯಕ್ತಪಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆದಷ್ಟು ಬೇಗ ಸಂಪುಟ ವಿಸ್ತರಣೆಯ ಸಂಕಟದಿಂದ‌ ಪಾರಾಗಿ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧಗಳ ನಿಯಂತ್ರಣಕ್ಕೆ ಗಮನ ಹರಿಸಲಿ ಎಂದು ಹೇಳಿದ್ದಾರೆ.

 Sharesee more..

ಸಾಮಾಜಿಕ ಕಾರ್ಯಕರ್ತೆ, ಸಂಶೋಧಕಿ ಡಾ ಗೇಯಲ್‌ ಓಂ ವೇದ್‌ ವಿಧಿ ವಶ, ಗಣ್ಯರ ಕಂಬನಿ

25 Aug 2021 | 8:40 PM

ಮುಂಬಯಿ, ಆಗಸ್ಟ್‌ 25 (ಯುಎನ್‌ ಐ) - ಸಾಮಾಜಿಕ ಕಾರ್ಯಕರ್ತೆ, ಸಂಶೋಧಕಿ, ಲೇಖಕಿ ಡಾ ಗೇಯಲ್‌ ಓಂ ವೇದ್‌ (81) ವಿಧಿವಶರಾಗಿದ್ದಾರೆ.

 Sharesee more..

ದೇಶದ ಆಸ್ತಿಗಳು ಮೋದಿ, ಬಿಜೆಪಿಯ ಸ್ವತ್ತಲ್ಲ: ಮಮತಾ ಬ್ಯಾನರ್ಜಿ ಆಕ್ರೋಶ

25 Aug 2021 | 7:58 PM

ಕೋಲ್ಕತ್ತಾ, ಆಗಸ್ಟ್‌ 25(ಯುಎನ್‌ ಐ) ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪಲೈನ್( ಎನ್‌ಎಂಪಿ- ರಾಷ್ಟ್ರೀಯ ನಗದೀಕರಣ ಯೋಜನೆ) ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ ದೇಶದಲ್ಲಿರುವ ಆಸ್ತಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಈ ಯೋಜನೆ ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.

 Sharesee more..

ರಾಜಸ್ತಾನದ ಬಾರ್ಮರ್‌ನಲ್ಲಿ ಮಿಗ್‌21 ಪತನ

25 Aug 2021 | 7:26 PM

ನವದೆಹಲಿ, ಆ 25 (ಯುಎನ್ಐ) ರಾಜಸ್ತಾನದ ಬಾರ್ಮರ್‌ ಪ್ರದೇಶದಲ್ಲಿ ಬುಧವಾರ ಭಾರತೀಯ ವಾಯುಪಡೆಯ ಮಿಗ್ 21 ಬೈಸನ್‌ ವಿಮಾನ ಪತನಗೊಂಡಿದೆ ಇಲ್ಲಿನ ಪೂರ್ವ ವಲಯದ ಬಳಿ ಈ ಘಟನೆ ಸಂಭವಿಸಿದ್ದು, ಪೈಲೆಟ್‌ ಸುರಕ್ಷಿತವಾಗಿ ಹೊರಗೆ ಜಿಗಿದಿದ್ದಾರೆ ಎಂದು ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 Sharesee more..
ಸಾಮೂಹಿಕ ಅತ್ಯಾಚಾರಿಗಳ ಬಂಧನಕ್ಕೆ ಡಿಜಿಪಿಗೆ ಸೂಚನೆ

ಸಾಮೂಹಿಕ ಅತ್ಯಾಚಾರಿಗಳ ಬಂಧನಕ್ಕೆ ಡಿಜಿಪಿಗೆ ಸೂಚನೆ

25 Aug 2021 | 6:27 PM

ತ್ಯಾಚಾರ ಪ್ರಕರಣ ಸಂಬಂಧ ಆಲನಹಳ್ಳಿ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

 Sharesee more..

ಸೆ 17ರವರೆಗೆ ರಾಣೆ ಅವರನ್ನು ಬಂಧಿಸುವಂತಿಲ್ಲ; ಬಾಂಬೆ ಹೈಕೋರ್ಟ್

25 Aug 2021 | 6:23 PM

ಮುಂಬೈ, ಆ 25 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಸೆಪ್ಟೆಂಬರ್ 17ರವರೆಗೆ ಬಂಧಿಸುವುದಿಲ್ಲ ಎಂದು ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ಗೆ ಬುಧವಾರ ನಿರ್ದೇಶನ ನೀಡಿದೆ.

 Sharesee more..

ಶೀಘ್ರದಲ್ಲಿ 'ಜನಾಶಿರ್ವಾದ ಯಾತ್ರೆ'ಗೆ ಮರಳಲಿರುವ ರಾಣೆ

25 Aug 2021 | 5:38 PM

ಮುಂಬೈ, ಆ 25 (ಯುಎನ್ಐ) ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಕೇಂದ್ರ ಸಚಿವ ನಾರಾಯಣ್‌ ರಾಣೆ ಅವರು ಇನ್ನೆರಡು ದಿನಗಳಲ್ಲಿಯೇ 'ಜನಾಶಿರ್ವಾದ ಯಾತ್ರೆ'ಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

 Sharesee more..