Friday, Feb 28 2020 | Time 09:52 Hrs(IST)
 • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
 • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
 • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
 • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
 • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
 • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Special

ಈಶಾನ್ಯ ರಾಜ್ಯಗಳಲ್ಲಿ ಲಘು ಭೂಕಂಪ

08 Feb 2020 | 9:26 PM

ಗುವಾಹಟಿ, ಫೆ 8 (ಯುಎನ್ಐ) ಮೇಘಾಲಯ, ಅಸ್ಸಾಂ ಮತ್ತು ಇತರ ಈಶಾನ್ಯ ಭಾರತ ರಾಜ್ಯಗಳಲ್ಲಿ ಶನಿವಾರ ಲಘು ಭೂಕಂಪ ಸಂಭವಿಸಿದೆ ಶಿಲ್ಲಾಂಗ್, ತುರಾ, ಗುವಾಹಟಿ ಸೇರಿದಂತೆ ಈಶಾನ್ಯ ರಾಜ್ಯಗಳ ಪ್ರಮುಖ ನಗರಗಳಲ್ಲಿ ಶನಿವಾರ ಸಂಜೆ ಜನರಿಗೆ ಕಂಪನದ ಅನುಭವವಾಗಿದೆ.

 Sharesee more..
ಆಮ್ ಆದ್ಮಿ ಪಕ್ಷ  ಮತ್ತೊಮ್ಮೆ ದೆಹಲಿಯಲ್ಲಿ ಅಧಿಕಾರಕ್ಕೆ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ

ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ದೆಹಲಿಯಲ್ಲಿ ಅಧಿಕಾರಕ್ಕೆ ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ

08 Feb 2020 | 9:18 PM

ನವದೆಹಲಿ ಫೆ ೮(ಯುಎನ್ಐ) ದೆಹಲಿ ವಿಧಾನಸಭೆ ಚುನಾವಣೆ -೨೦೨೦ ಮುಗಿದಿದೆ. ಶನಿವಾರ ಬೆಳಿಗ್ಗೆ ೮ ಗಂಟೆಗೆ ಆರಂಭಗೊಂಡ ಮತದಾನ ಸಂಜೆ ೬ ಗಂಟೆಗೆ ಪೂರ್ಣಗೊಂಡಿತು. ಶೇ. ೫೮ ರಷ್ಟು ಮತದಾನವಾಗಿರುವ ಬಗ್ಗೆ ವರದಿಯಾಗಿದೆ. ಆದರೆ ಚುನಾವಣಾ ಆಯೋಗ ಮತದಾನದ ಪ್ರಮಾಣವನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ.

 Sharesee more..

ಪಶ್ಚಿಮ ಬಂಗಾಳದ ಉತ್ತರದ ಜಿಲ್ಲೆಗಳಲ್ಲಿ 5 ತೀವ್ರತೆಯ ಭೂಕಂಪ

08 Feb 2020 | 8:51 PM

ಕೋಲ್ಕತಾ, ಫೆ 8 (ಯುಎನ್ಐ) ಪಶ್ಚಿಮ ಬಂಗಾಳದ ಉತ್ತರದ ಜಿಲ್ಲೆಗಳಲ್ಲಿ ಶನಿವಾರ ಸಂಜೆ ಭೂಕಂಪ ಸಂಭವಿಸಿದೆ ಶನಿವಾರ ಸಂಜೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5 ರಷ್ಟು ದಾಖಲಾಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

 Sharesee more..

ರಾಜ್ಯಗಳ ತೆರಿಗೆ ಸಂಪನ್ಮೂಲ ಖೋತಾ ಗೊಳಿಸುವ ಯೋಚನೆ ಇಲ್ಲ; ನಿರ್ಮಲಾ ಸೀತಾರಾಮನ್

08 Feb 2020 | 7:39 PM

ಚೆನ್ನೈ, ಫೆ ೮ (ಯುಎನ್‌ಐ) ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡುವ ತೆರಿಗೆ ಸಂಪನ್ಮೂಲಗಳನ್ನು ಖೋತಾ ಗೊಳಿಸುವ ಯಾವುದೇ ಆಲೋಚನೆ ಕೇಂದ್ರ ಸರ್ಕಾರದಮುಂದಿಲ್ಲ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಸ್ಪಷ್ಟಪಡಿಸಿದ್ದಾರೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ೧೪ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ರಾಜ್ಯಗಳಿಗೆ ತೆರಿಗೆ ಸಂಪನ್ಮೂಲ ಹಂಚಿಕೆ ಮಾಡುತ್ತಿದ್ದು, ೧೫ ನೇ ಹಣಕಾಸು ಆಯೋಗದ ವರದಿಯನ್ನು ಸಂಪೂರ್ಣವಾಗಿ ಗೌರವಿಸಲಾಗುವುದು.

 Sharesee more..
ಪ್ರಸಾರ ಭಾರತಿ ಅಧ್ಯಕ್ಷ ಡಾ. ಎ. ಸೂರ್ಯಪ್ರಕಾಶ್ ಗೆ ಬೀಳ್ಕೊಡುಗೆ

ಪ್ರಸಾರ ಭಾರತಿ ಅಧ್ಯಕ್ಷ ಡಾ. ಎ. ಸೂರ್ಯಪ್ರಕಾಶ್ ಗೆ ಬೀಳ್ಕೊಡುಗೆ

08 Feb 2020 | 7:24 PM

ನವದೆಹಲಿ, ಫೆ ೮ (ಯುಎನ್ಐ) ಪ್ರಸಾರ ಭಾರತಿ ಅಧ್ಯಕ್ಷರಾಗಿ ಕನ್ನಡಿಗ ಡಾ.ಅರಕಲಗೂಡು ಸೂರ್ಯ ಪ್ರಕಾಶ್ ಅವರು ಶನಿವಾರ ತಮ್ಮ ಎರಡನೆಯ ಅವಧಿಯನ್ನು ಪೂರ್ಣಗೊಳಿಸಿದರು. ಈ ಹಿನ್ನಲೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡ್ಕೇರ್ ನೇತೃತ್ವದಲ್ಲಿ ಪ್ರಸಾರ ಭಾರತಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಬಿಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಂಡು ಗೌರವಿಸಿದರು.

 Sharesee more..

ತಿಂಗಳಾಂತ್ಯದಲ್ಲಿ 18 ದಿಶಾ ಪೊಲೀಸ್ ಠಾಣೆ ಕಾರ್ಯಾರಂಭ; ಜಗನ್ ಮೋಹನ್ ರೆಡ್ಡಿ

08 Feb 2020 | 6:51 PM

ಕಾಕಿನಾಡ, ಫೆ 8 (ಯುಎನ್ಐ) ಆಂಧ್ರಪ್ರದೇಶದಲ್ಲಿ ತಿಂಗಳಾಂತ್ಯದಲ್ಲಿ 18 ದಿಶಾ ಪೊಲೀಸ್ ಠಾಣೆಗಳು ಸಂಪೂರ್ಣವಾಗಿ ಕಾರ್ಯಾರಂಭಗೊಳ್ಳಲಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ ರಾಜಮುಂಡ್ರಿಯಲ್ಲಿ ಮೊದಲ ದಿಶಾ ಮಹಿಳಾ ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಅವರು, ಈ ಪೊಲೀಸ್ ಠಾಣೆಗಳ ಪ್ರಮುಖ ಉದ್ದೇಶವೆಂದರೆ ಮಹಿಳೆಯರು, ಹೆಣ್ಣು ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ದಿಶಾ ಕಾಯ್ದೆಯನುಸಾರ ಕಟ್ಟುನಿಟ್ಟಾಗಿ ವಿಚಾರಣೆ ನಡೆಸುವುದಾಗಿದೆ ಎಂದರು.

 Sharesee more..

ಪಿ ಎನ್ ಬಿ, ಒಬಿಸಿ ವಿಲೀನ ಬ್ಯಾಂಕ್ ಗೆ ಸದ್ಯದಲ್ಲಿಯೇ ಹೊಸ ಹೆಸರು, ಲೋಗೋ

08 Feb 2020 | 5:20 PM

ಕೋಲ್ಕತಾ, ಫೆ ೮(ಯುಎನ್‌ಐ) ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿ ಎನ್ ಬಿ), ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯು ಬಿ ಐ) ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒ ಬಿ ಸಿ) ಬ್ಯಾಂಕ್ ಗಳನ್ನು ವಿಲೀನಗೊಳಿಸಲಾಗುತ್ತಿದೆ.

 Sharesee more..

ಸಿಎಎ ವಿರುದ್ಧ ಕೇರಳದಲ್ಲಿ ಮಾವೋವಾದಿಗಳ ಮಿಂಚಿನ ಪ್ರದರ್ಶನ

08 Feb 2020 | 5:18 PM

ವೈನಾಡು , ಫೆ 8 (ಯುಎನ್‌ಐ) ಶಸ್ತ್ರಸಜ್ಜಿತ ಮಾವೋವಾದಿಗಳ ಗುಂಪು ಶನಿವಾರ ವೈನಾಡಿನ ಮನಂತವಡಿ ಬಳಿಯ ತಲಪುಳದಲ್ಲಿರುವ ಕಂಬಮಲದಲ್ಲಿ ಹಠಾತ್ ಪ್ರತಿಭಟನಾ ಪ್ರದರ್ಶನ ನಡೆಸಿರುವ ಬಗ್ಗೆ ವರದಿಯಾಗಿದೆ ಮೂವರು ಮಹಿಳೆಯರು ಸೇರಿದಂತೆ ಪ್ರತ್ಯೇಕತಾವಾದಿ ಗುಂಪಿನ ಏಳು ಮಾವೋವಾದಿಗಳು ಶಸ್ತ್ರಸಜ್ಜಿತರಾಗಿ ಸಿಎಎ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಊರಿನ ಹಲವು ಕಡೆ ಶರವೇಗದಲ್ಲಿ ಪೋಸ್ಟರ್‌ಗಳನ್ನು ಅಂಟಿಸಿ ಪರಾರಿಯಾದರು ಎಂದೂ ಮೂಲಗಳು ತಿಳಿಸಿವೆ.

 Sharesee more..

ಧೂಮಪಾನ ತ್ಯಜಿಸಿದರೆ, ಹಾನಿ ಸರಿಪಡಿಸುವ ಸಾಮರ್ಥ್ಯ ಶ್ವಾಸಕೋಶಗಳಿಗಿದೆ !

08 Feb 2020 | 4:40 PM

ನವದೆಹಲಿ, ಫೆ ೮ (ಯುಎನ್‌ಐ) ಧೂಮಪಾನದಿಂದ ಉಂಟಾಗುವ ಹಾನಿಯನ್ನು ಸರಿಪಡಿಸುವ ಸಾಮರ್ಥ್ಯ ಶ್ವಾಸಕೋಶಗಳಿಗಿದೆ ಎಂದು ಸಂಶೋಧಕರು ಹೇಳಿದ್ದಾರೆ ಆದರೆ, ಧೂಮಪಾನವನ್ನು ತ್ಯಜಿಸಿದಾಗ ಮಾತ್ರ ಅದು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ ಶ್ವಾಸಕೋಶ ಕ್ಯಾನ್ಸರ್ ಗೆ ಕಾರಣವಾಗುವ ಕೋಶಗಳ ಬದಲಾವಣೆಗಳು ಶಾಶ್ವತ, ಧೂಮಪಾನ ತ್ಯಜಿಸಿದ ನಂತರ ಅವು ಅದೇ ರೀತಿಯಲ್ಲಿರುತ್ತವೆ ಎಂದು ಸಂಶೋಧಕರು ಈ ವರೆಗೆ ಭಾವಿಸಿದ್ದರು.

 Sharesee more..
ದೇಶದ ಆರ್ಥಿಕತೆ ಅಪಾಯದಲ್ಲಿದೆ; ಪಿ. ಚಿದಂಬರಂ

ದೇಶದ ಆರ್ಥಿಕತೆ ಅಪಾಯದಲ್ಲಿದೆ; ಪಿ. ಚಿದಂಬರಂ

08 Feb 2020 | 4:26 PM

ಹೈದ್ರಾಬಾದ್, ಫೆ ೮ (ಯುಎನ್ಐ) ದೇಶದ ಜಿಡಿಪಿ (ಒಟ್ಟು ದೇಶಿಯ ಉತ್ಪಾದನೆ) ಈ ಪ್ರಮಾಣದಲ್ಲಿ ಹಿಂದೆಂದೂ ಕುಸಿತ ಕಂಡಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

 Sharesee more..
ದೇಶದಲ್ಲಿ ಪೆಟ್ರೋಲ್, ಡೀಸಲ್ ದರಗಳು ಕುಸಿತ

ದೇಶದಲ್ಲಿ ಪೆಟ್ರೋಲ್, ಡೀಸಲ್ ದರಗಳು ಕುಸಿತ

08 Feb 2020 | 4:00 PM

ನವದೆಹಲಿ, ಫೆ ೮(ಯುಎನ್‌ಐ) ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಕುಸಿಯುತ್ತಿದೆ.

 Sharesee more..
ಆಯೋಧ್ಯೆಯ ಹನುಮಾನ್ ಗರ್ಹಿ ದೇಗಲದಲ್ಲಿ ಪೂಜೆ ಸಲ್ಲಿಸಿದ  ಚಿನ್ಮಯಾನಂದ

ಆಯೋಧ್ಯೆಯ ಹನುಮಾನ್ ಗರ್ಹಿ ದೇಗಲದಲ್ಲಿ ಪೂಜೆ ಸಲ್ಲಿಸಿದ ಚಿನ್ಮಯಾನಂದ

08 Feb 2020 | 3:55 PM

ಆಯೋಧ್ಯಾ, ಫೆ 8 (ಯುಎನ್ಐ) ಕಾನೂನು ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದ ಆರೋಪಿಯಾಗಿ, ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ಶನಿವಾರ ಹನುಮಾನ್ ಗರ್ಹಿ ದೇಗುಲಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು.

 Sharesee more..

ಬೆಳಗಾವಿ; ಟ್ರಾಕ್ಟರ್ ಉರುಳಿ ಆರು ಮಂದಿ ಕೂಲಿ ಕಾರ್ಮಿಕರ ಸಾವು

08 Feb 2020 | 1:51 PM

ಬೆಳಗಾವಿ, ಫೆ ೮(ಯುಎನ್‌ಐ) ಕಬ್ಬಿನ ಕಟಾವಿಗೆ ಕೂಲಿ ಕಾರ್ಮಿಕರನ್ನು ಹೊತ್ತೊಯ್ಯತ್ತಿದ್ದ ಟ್ರ್ಯಾಕ್ಟರ್ ವೊಂದು ಸೇತುವೆ ಮೇಲಿಂದ ಉರುಳಿ ಬಿದ್ದ ಪರಿಣಾಮ ಕನಿಷ್ಟ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ದುರ್ಘಟನೆ ಜಿಲ್ಲೆ ಖಾನಾಪುರ ತಾಲೊಕಿನ ಬೋಗೂರ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದೆ.

 Sharesee more..

ಹವಾಮಾನ ಸುಧಾರಣೆ, ಕಾಶ್ಮೀರ ಹೆದ್ದಾರಿಯಲ್ಲಿ ಇನ್ನೂ ಏಕಮುಖ ಸಂಚಾರ

08 Feb 2020 | 12:31 PM

ಶ್ರೀನಗರ, ಫೆಬ್ರವರಿ 8 (ಯುಎನ್‌ಐ) ಹವಾಮಾನ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಯ ನಂತರವೂ 270 ಕಿ ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇವಲ ಏಕ ಮುಖ ಸಂಚಾರವೇ ಇನ್ನೂ ಮುಂದುವರೆದಿದೆ.

 Sharesee more..

ಮತದಾರರಿಗೆ ಬಂಪರ್ ಆಫರ್.. ಬಸ್ ನಿಂದ ವಿಮಾನದವರೆಗೆ ಎಲ್ಲವೂ ಫ್ರೀ !

08 Feb 2020 | 11:50 AM

ನವದೆಹಲಿ, ಫೆ ೮(ಯುಎನ್‌ಐ) ದೆಹಲಿ ವಿಧಾನಸಭೆಗೆ ಇಂದು ಚುನಾವಣೆ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿಯೇ ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

 Sharesee more..