Tuesday, Nov 19 2019 | Time 06:27 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
Special

ಶ್ರೀನಗರ-ಜಮ್ಮು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭ

17 Nov 2019 | 3:54 PM

ಶ್ರೀನಗರ, ನವೆಂಬರ್ 17 (ಯುಎನ್‌ಐ) ಭೂಕುಸಿತ ಮತ್ತು ಬಂಡೆಗಳ ಉರುಳುವಿಕೆಯಿಂದಾಗಿ ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ಕಾಶ್ಮೀರ ಕಣಿವೆಯನ್ನು ದೇಶದ ಉಳಿದ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಮುಖ ಸಂಚಾರ ಆರಂಭಗೊಂಡಿದೆ ಈ ಮಧ್ಯೆ, ಲಡಾಖ್‌ನ ಕೇಂದ್ರಾಡಳಿತ ಪ್ರದೇಶವನ್ನು (ಯುಟಿ) ಕಾಶ್ಮೀರ ಕಣಿವೆಯೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಭಾನುವಾರವೂ ಸತತ ನಾಲ್ಕನೇ ದಿನವೂ ಬಂದ್ ಆಗಿದೆ.

 Sharesee more..

ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಬೆಲೆ ಹೆಚ್ಚಿಸುವುದಿಲ್ಲ ಟಿಟಿಡಿ ಅಧ್ಯಕ್ಷರ ಸ್ಪಷ್ಟನೆ

17 Nov 2019 | 2:38 PM

ಚೆನ್ನೈ,ನ 17 (ಯುಎನ್ಐ) ತಿರುಪತಿ- ತಿರುಮಲದಲ್ಲಿ ಲಡ್ಡು ಪ್ರಸಾದದ ಬೆಲೆ ಹೆಚ್ಚಿಸಲಾಗುತ್ತದೆ ಎಂಬ ವದಂತಿ ಹಬ್ಬಿಸುತ್ತಿರುವುದನ್ನು ತಿರುಪತಿ ತಿರುಮಲ ದೇವಸ್ಥಾನಮಂಡಳಿ ಅಧ್ಯಕ್ಷ ವೈ ವಿ.

 Sharesee more..

ಬಾಳಾ ಠಾಕ್ರೆಯನ್ನು ಹಾಡಿಹೊಗಳಿದ ದೇವೆಂದ್ರ ಫಡ್ನವೀಸ್

17 Nov 2019 | 1:32 PM

ಮುಂಬೈ, ನ 17 (ಯುಎನ್ಐ) ಮಹಾರಾಷ್ಟ್ರದಲ್ಲಿ ಸೇನಾ ಮತ್ತು ಬಿಜೆಪಿ ನಡುವಿನ ಸಂಬಂಧ ಹದಗೆಟ್ಟು ವಿಭಿನ್ನ ದಿಕ್ಕಿಗೆ ಸಾಗಿರುವಾಗಲೇ ಇತ್ತ ಕಡೆ, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೆಂದ್ರ ಫಡ್ನವೀಸ್ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ ಅವರನ್ನು ಹಾಡಿಹೊಗಳಿದ್ದಾರೆ.

 Sharesee more..

ಮುಖ್ಯಮಂತ್ರಿ ವಿರುದ್ಧವೇ ತೋಳು ಮಡಿಚಿದ ಸಚಿವ ಸರಯೂ ರೈ

17 Nov 2019 | 1:02 PM

ಜೆಮ್ ಶೆಡ್ ಪುರ, ನ 17 (ಯುಎನ್ಐ) ಮುಖ್ಯಮಂತ್ರಿ ರಘುಬರ ದಾಸ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಸರಯು ರೈ ಘೋಷಿಸಿದ್ದಾರೆ ಮುಖ್ಯಮಂತ್ರಿ ವಿರುದ್ಧ ಸೆಡ್ಡು ಹೊಡೆದು ಜೆಮ್ ಶೆಡ್ ಪುರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವುದಲ್ಲದೇ ಜೆಮ್ ಶೆಡ್ ಪುರ ಪಶ್ಚಿಮ ಕ್ಷೇತ್ರದಿಂದಲೂ ಸ್ಪರ್ಧಿಸುವುದಾಗಿ ರೈ ತಿಳಿಸಿದ್ದಾರೆ.

 Sharesee more..

ಶಬರಿಮಲೆಗೆ ತೃಪ್ತಿ ದೇಸಾಯಿ ಭೇಟಿ, ಬಿಗಿಭದ್ರತೆ

17 Nov 2019 | 12:45 PM

ಶಬರಿಮಲೆ , ನ 17(ಯುಎನ್ಐ ) ಮಂಡಲ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯದ ಬಾಗಿಲು ಶನಿವಾರದಿಂದ ತೆರೆಯಲಾಗಿದೆ ಇಂದು ಸಾಮಾಜಿಕ ಕಾರ್ಯಕರ್ತೆ ತೃಪ್ತಿ ದೇಸಾಯಿ ದೇಗುಲಕ್ಕೆ ಭೇಟಿ ನೀಡಲಿದ್ದು, ಬಿಗಿಭದ್ರತೆ ಏರ್ಪಡಿಸಲಾಗಿದೆ ಕಳದೆ ಭಾರಿಯಂತೆ ಈ ಬಾರಿಯೂ ತೃಪ್ತಿ ದೇಸಾಯಿ ಭೇಟಿಗೆ ಭಾರೀ ವಿರೋಧ ವ್ಯಕ್ತವಾಗಲಿದೆ ಎನ್ನಲಾಗಿದೆ.

 Sharesee more..

ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಕೂಡಲೇ ರಾಜಕೀಯ ನಿವೃತ್ತಿ; ಕೇಂದ್ರ ಸಚಿವ ಗಿರಿರಾಜ್ ಕಿಶೋರ್ ಸಿಂಗ್

17 Nov 2019 | 12:08 PM

ಕತಿಹಾರ್, ನ 17( ಯುಎನ್ಐ) ರಾಜಕೀಯದಿಂದ ನಿವೃತ್ತಿ ಹೊಂದುವ ತಮ್ಮ ಆಲೋಚನೆಯನ್ನು ಕೇಂದ್ರ ಪಶುಸಂಗೋಪನಾ ಖಾತೆ ಸಚಿವ ಗಿರಿರಾಜ್ ಸಿಂಗ್ ಅವರು ಪುನರುಚ್ಚರಿಸಿದ್ದಾರೆ ದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ಬಂದ ಕೂಡಲೇ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ.

 Sharesee more..

ಎನ್ ಡಿ ಎ ಸಭೆಗೆ ಶಿವಸೇನೆ ಗೈರು : ಸಂಜಯ್ ರಾವತ್

17 Nov 2019 | 11:46 AM

ಮುಂಬೈ, ನ 17 (ಯುಎನ್ಐ) ಬಿಜೆಪಿ ನೇತೃತ್ವದ ಎನ್ ಡಿ ಎ ಸಭೆಗೆ ಹಾಜರಾಗುವುದಿಲ್ಲ ಎಂದು ಶಿವಸೇನೆ ಹೇಳಿಕೊಂಡಿದೆ ಸಂಸತ್ತಿನ ಸುಗಮ ಕಲಾಪ ಕುರಿತಂತೆ ಬಿಜೆಪಿ – ಎನ್ ಡಿ ಎ ನಾಯಕರ ಸಭೆ ಆಯೋಜಿಸಲಾಗಿದೆ.

 Sharesee more..

ಮಹಾ ಸರ್ಕಾರ : ಸೋನಿಯಾ – ಪವಾರ್ ಭೇಟಿ ಅನುಮಾನ

17 Nov 2019 | 11:41 AM

ಮುಂಬೈ, ನ 17 (ಯುಎನ್ಐ) ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡು ಮೈತ್ರಿ ಸರ್ಕಾರ ರಚನೆ ಸಂಬಂಧ ಭಾನುವಾರ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎನ್ ಸಿ ಪಿ ಮುಖ್ಯಸ್ಥ ಶರದ್ ಪವಾರ್ ನಡುವೆ ಮಾತುಕತೆ ನಡೆಯುವುದು ಅನುಮಾನವಾಗಿದೆ.

 Sharesee more..

ಜಾರ್ಖಂಡ್ ವಿಧಾನಸಭಾ ಚುನಾವಣೆ; ಪ್ರಧಾನಿ ಮೋದಿ ಎಂಟು , 20 ಕಡೆ ಅಮಿತ್ ಶಾ ಪ್ರಚಾರ ಸಭೆ ನಿಗಧಿ

17 Nov 2019 | 11:12 AM

ನವದೆಹಲಿ, ನ 17 (ಯುಎನ್ಐ) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 21 ರಿಂದ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರವನ್ನು ಆರಂಭಿಸಲಿದ್ದಾರೆ ಐದು ಹಂತಗಳಲ್ಲಿ ನಡೆಯಲಿರುವ ಚುನಾವಣೆಯ ಭಾಗವಾಗಿ ರಾಜ್ಯಾದ್ಯಂತ 50 ಕ್ಕೂ ಹೆಚ್ಚು ಚುನಾವಣಾ ಪ್ರಚಾರಸಭೆಗಳನ್ನು ಆಯೋಜಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದು, ಅಮಿತ್ ಶಾ ಅವರು 20 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

 Sharesee more..

ರಸ್ತೆ ಅಪಘಾತ: ಕೇರಳದಲ್ಲಿ ಮೂವರ ಸಾವು

17 Nov 2019 | 10:49 AM

ಮಲ್ಲಪುರಂ, ನವೆಂಬರ್ 17 (ಯುಎನ್‌ಐ) ಇಲ್ಲಿನ ಪೊನ್ನಾನಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಲಾರಿ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಇತರೆ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಮೃತರನ್ನು ತಿರುವೂರಿನ ಅಹ್ಮದ್ ಫೈಸಲ್, ಸುಬೈದಾ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ.

 Sharesee more..

ಮೇಲ್ಮೈಯಿಂದ ಮೇಲ್ಮೈ ಚಿಮ್ಮುವ ಅಗ್ನಿ 2 ಕ್ಷಿಪಣಿಯ ರಾತ್ರಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

17 Nov 2019 | 9:54 AM

ಭುವನೇಶ್ವರ, ನ 17 (ಯುಎನ್ಐ) ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಅಗ್ನಿ 2 ಕ್ಷಿಪಣಿಯ ರಾತ್ರಿ ಪರೀಕ್ಷೆ ಯಶಸ್ವಿಯಾಗಿದೆ ಇದೇ ಮೊದಲ ಬಾರಿಗೆ ಭಾರತ ಒಡಿಶಾ ಕರಾವಳಿಯಲ್ಲಿ ಡಾ ಅಬ್ದುಲ್ ಕಲಾಂ ದ್ವೀಪದಲ್ಲಿ ಈ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.

 Sharesee more..

ರಾಯ್ ಬರೇಲಿ ಶಾಸಕಿ – ಪಂಜಾಬ್ ಶಾಸಕನ ಜೊತೆ ನ 21 ರಂದು ಮದುವೆ

17 Nov 2019 | 9:47 AM

ಲಕ್ನೋ, ನ 17 (ಯುಎನ್ಐ) ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಅದಿತಿ ಸಿಂಗ್ ಅವರು ಇದೇ 21 ರಂದು ಪಂಜಾಬ್ ಶಾಸಕ ಅಂಗದ್ ಸೈನಿ ಅವರನ್ನು ವಿವಾಹವಾಗಲು ನಿರ್ಧರಿಸಿದ್ದಾರೆ ತಂದೆಯ ನಿಧನಕ್ಕೂ ಮೊದಲು ನಿರ್ಧಾರವಾದಂತೆ ಮದುವೆ ನಡೆಯುತ್ತಿದೆ.

 Sharesee more..

ಕೊನೆಘಳಿಗೆಯಲ್ಲಿ ಸಿಗದ ರಾಜ್ಯಪಾಲರ ಭೇಟಿ: ಭಾನುವಾರ ಮಾತುಕತೆ

16 Nov 2019 | 11:11 PM

ಮುಂಬೈ ನ 16(ಯುಎನ್ಐ) ಹೊಸ ಸರಕಾರ ರಚನೆ ಕುರಿತು ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿ ಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡುವ ಕಾರ್ಯಕ್ರಮ ಕೊನೆ ಘಳಿಗೆಯಲ್ಲಿ ರದ್ದಾದ ಕಾರಣ ಮಾತುಕತೆ ಭಾನುವಾರ ನಡೆಯಲಿದೆ.

 Sharesee more..

ಸಂಗ್ರೂರ್ ದಲಿತನ ಹತ್ಯೆ: ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು: ತರುಣ್ ಚುಗ್

16 Nov 2019 | 9:16 PM

ಚಂಡೀಗಡ, ನ 16 (ಯುಎನ್ಐ) ಸಂಗ್ರೂರ್ ದಲಿತರ ಕ್ರೂರ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ಈ ಬಗ್ಗೆ ದೂರು ಸಲ್ಲಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸುವುದಾಗಿ ಹೇಳಿದೆ.

 Sharesee more..
ರಾಹುಲ್ ದೇಶದ ಕ್ಷಮೆಯಾಚಿಸಬೇಕು: ಯೋಗಿ ಆದಿತ್ಯನಾಥ್

ರಾಹುಲ್ ದೇಶದ ಕ್ಷಮೆಯಾಚಿಸಬೇಕು: ಯೋಗಿ ಆದಿತ್ಯನಾಥ್

16 Nov 2019 | 9:14 PM

ಗೋರಖ್‌ಪುರ, ನವೆಂಬರ್ 16 (ಯುಎನ್‌ಐ) ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ದೇಶಕ್ಕೆ ಕ್ಷಮೆಯಾಚಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಒತ್ತಾಯಿಸಿದ್ದಾರೆ.

 Sharesee more..