Wednesday, Sep 29 2021 | Time 04:50 Hrs(IST)
Special

ಮಂಗಳೂರಿನಲ್ಲಿ ಯುವ ಕಾಂಗ್ರೆಸ್‌ ಪ್ರತಿಭಟನೆ.. "ಪಕೋಡ ಪ್ರಧಾನಿ ಬೇಡ" ಘೋಷಣೆ

17 Sep 2021 | 7:05 PM

ಮಂಗಳೂರು, ಸೆ 17 ( ಯುಎನ್‌ ಐ) ಯುವ ಕಾಂಗ್ರೆಸ್‌ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವನ್ನು "ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ" ಆಚರಿಸುವ ಮೂಲಕ ವಿಶೇಷ ಪ್ರತಿಭಟನೆ ನಡೆಸಿ ನಗರದಲ್ಲಿ ಜನರ ಗಮನ ಸೆಳೆಯಿತು.

 Sharesee more..

ಪಟೇಲ್ ಪರಾಕ್ರಮದಿಂದ ಹೈದರಾಬಾದ್ ವಿಮೋಚನೆ ಸಾಧ್ಯವಾಯಿತು: ಅಮಿತ್ ಶಾ

17 Sep 2021 | 5:24 PM

ಹೈದರಾಬಾದ್‌, ಸೆ 17(ಯುಎನ್‌ ಐ) ದೇಶದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭ ಬಾಯ್‌ ಪಟೇಲರ ಪರಾಕ್ರಮದಿಂದಾಗಿ ಹೈದರಾಬಾದ್‌ ಪ್ರದೇಶದ ವಿಮೋಚನೆ ಸಾಧ್ಯವಾಯಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

 Sharesee more..

ಕೇರಳದ ಆ ಕ್ರೈಸ್ತ್ರ ಪಾದ್ರಿಯನ್ನು ನನ್‌ ಗಳು ಏಕೆ ವಿರೋಧಿಸುತ್ತಿದ್ದಾರೆ ?

17 Sep 2021 | 4:37 PM

ತಿರುವನಂತಪುರಂ, ಸೆ 17 (ಯುಎನ್‌ ಐ) ಕೇರಳದಲ್ಲಿ ಬಿಷಪ್ ವೊಬ್ಬರು ನಿರ್ದಿಷ್ಟ ಧರ್ಮಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆಗಳ ವಿರುದ್ಧ ಕೆಲವು ಮಂದಿ ಕ್ರೈಸ್ತ ಸನ್ಯಾಸಿನಿಯರು ಕೈಗೊಂಡಿರುವ ಪ್ರತಿಭಟನೆಗೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ ಈ ಪ್ರತಿಭಟನೆ ಧಾರ್ಮಿಕ ಸೇವೆಗಳನ್ನು ಕಲ್ಪಿಸುತ್ತಿರುವ ಮಹಿಳೆಯರು ಹಾಗೂ ಧರ್ಮಬೋಧನೆ ಮಾಡುವ ಪಾದ್ರಿಗಳ ನಡುವಣ ಹೋರಾಟವಾಗಿ ಪರಿವರ್ತನೆಗೊಂಡಿದೆ.

 Sharesee more..

ಸತೀಶ್ ಚಂದ್ರ ಶರ್ಮ ತೆಲಂಗಾಣ ಹೈಕೋರ್ಟ್‌ ಸಿಜೆ

17 Sep 2021 | 3:38 PM

ನವದೆಹಲಿ, ಸೆ 17(ಯುಎನ್‌ ಐ) ತೆಲಂಗಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಸತೀಶ್ ಚಂದ್ರಶರ್ಮಾ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದೆ ಅವರು ಪ್ರಸ್ತುತ ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 Sharesee more..

ಈ ಬಾರಿಯೂ ತಿರುಪತಿ ತಿಮ್ಮಪ್ಪನಿಗೆ ಏಕಾಂತ ಬ್ರಹ್ಮೋತ್ಸವ !

17 Sep 2021 | 3:21 PM

ತಿರುಮಲ, ಸೆ 17(ಯುಎನ್‌ ಐ) - ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿ ಹಿನ್ನೆಲೆಯಲ್ಲಿ, ಈ ವರ್ಷವೂ ತಿರುಪತಿ ತಿಮ್ಮಪ್ಪನ ವಾರ್ಷಿಕ ಬ್ರಹ್ಮೋತ್ಸವಗಳನ್ನು ಏಕಾಂತದಲ್ಲಿ ನಡೆಸಲು ತಿರುಪತಿ ತಿರುಮಲ ದೇವಸ್ಥಾನಂ ನಿರ್ಧರಿಸಿದೆ ಈ ಸಂಬಂಧ ಟಿಟಿಡಿ ಅಧ್ಯಕ್ಷ ವೈ.

 Sharesee more..

ಮೋದಿ ಜನ್ಮ ದಿನ ಸಂಭ್ರಮ ಭಾರಿ ಕೇಕ್‌ ಗಳು ಮರಳು ಶಿಲ್ಪ

17 Sep 2021 | 3:02 PM

ನವದೆಹಲಿ, ಸೆ 17(ಯುಎನ್‌ ಐ)- ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮ ದಿನದ ಅಂಗವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಹಲವರು ಕೇಂದ್ರ ಸಚಿವರು, ಇತರ ರಾಜಕೀಯ ಪಕ್ಷಗಳು ಶುಭಾಶಯ ಕೋರಿದ್ದಾರೆ ಅದೇ ರೀತಿ ಸಿನಿಮಾ, ಕ್ರೀಡಾ ದಿಗ್ಗಜರು ಕೂಡ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮ ಆವರಿಸಿಕೊಂಡಿದೆ.

 Sharesee more..

ಕರ್ನಾಟಕ ಪೊಲೀಸ್‌ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

17 Sep 2021 | 2:30 PM

ಬೆಂಗಳೂರು, ಸೆ 17(ಯುಎನ್‌ ಐ) -ರಾಜ್ಯ ವಿಧಾನಸಭೆ ಇಂದು ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಿದೆ ಆನ್ ಲೈನ್ ಜೂಜಾಟ, ಬೆಟ್ಟಿಂಗ್ ನಡೆಸುವವರಿಗೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, 1 ಲಕ್ಷ ರೂಪಾಯಿ ದಂಡ ವಿಧಿಸಲು ವಿಧೇಯಕ ಅವಕಾಶ ನೀಡಲಿದೆ.

 Sharesee more..

ಕಾರ್ಯಾದೇಶ ನೀಡಿದ ತಿಂಗಳೊಳಗೆ ಕೆಲಸ ಆರಂಭಿಸಲು ಕ್ರಮ; ಗೋವಿಂದ ಕಾರಜೋಳ

17 Sep 2021 | 11:59 AM

ಬೆಂಗಳೂರು, ಸೆ 17(ಯು ಎನ್‌ ಐ) - ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಕಾರ್ಯಾದೇಶ ಹೊರಡಿಸಿದ ತಿಂಗಳೊಳಗೆ ಕೆಲಸ ಆರಂಭಗೊಳ್ಳುವಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಜರುಗಿಸಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಧಾನಸಭೆಗೆ ಶುಕ್ರವಾರ ಭರವಸೆ ನೀಡಿದ್ದಾರೆ.

 Sharesee more..

ಸರ್ಕಾರಿ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಬೇಕು; ಅನುರಾಗ್‌ ಠಾಕೂರ್

16 Sep 2021 | 5:07 PM

ಹಮೀರ್‌ಪುರ (ಹಿಮಾಚಲಪ್ರದೇಶ), ಸೆ 16 (ಯುಎನ್ಐ) ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಾಯೋಜಿಸುವ ವಿವಿಧ ಇಲಾಖಾ ಯೋಜನೆಗಳ ಮಾಹಿತಿಯನ್ನು ಪ್ರತಿಯೊಬ್ಬ ವ್ಯಕ್ತಿಗೂ ಆದ್ಯತೆಯ ಮೇರೆಗೆ ತಲುಪುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರು ಗುರುವಾರ ನಿರ್ದೇಶನ ನೀಡಿದ್ದಾರೆ.

 Sharesee more..

ರಾಹುಲ್‌ ಓರ್ವ 'ಇಚ್ಛಾಧಾರಿ' ಹಿಂದೂ: ನರೋತ್ತಮ್‌ ಮಿಶ್ರಾ

16 Sep 2021 | 5:00 PM

ಭೂಪಾಲ್‌, ಸೆ 16 (ಯುಎನ್ಐ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ 'ಇಚ್ಛಾಧಾರಿ' ಹಿಂದೂ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಲೇವಡಿ ಮಾಡಿದ್ದಾರೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವ ರಾಹುಲ್‌ ಹೇಳಿಕೆಯ ವಿರುದ್ಧ ಕಿಡಿಕಾರಿರುವ ಮಿಶರ್ರಾ, ಈ ಸಂಬಂಧ ಎಫ್ಐಆರ್‌ ದಾಖಲಿಸಬಹುದೇ ಎಂಬ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವುದಾಗಿ ತಿಳಿಸಿದರು.

 Sharesee more..

ಮೋದಿ ಜನ್ಮದಿನ "ರಾಷ್ಟ್ರೀಯ ನಿರುದ್ಯೋಗ ದಿನ" ಆಚರಿಸಲು ಕಾಂಗ್ರೆಸ್‌ ನಿರ್ಧಾರ

15 Sep 2021 | 10:08 PM

ನವದೆಹಲಿ, ಸೆ 15(ಯುಎನ್‌ ಐ) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟಂಬರ್‌ 17 ಅನ್ನು ಅದ್ದೂರಿಯಾಗಿ ಆಚರಿಸಲು ಬಿಜೆಪಿ ಕಾರ್ಯಕರ್ತರು ಸಜ್ಜುಗೊಂಡಿದ್ದಾರೆ ಜೊತೆಗೆ ದೇಶಾದ್ಯಂತ ಬೃಹತ್‌ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದಾರೆ.

 Sharesee more..

ಸೋನು ಸೂದ್ ನಿವಾಸದ ಮೇಲೆ ಐಟಿ ದಾಳಿ

15 Sep 2021 | 9:30 PM

ಮುಂಬೈ, ಸೆ 15(ಯುಎನ್‌ ಐ) ಬಾಲಿವುಡ್‌ ನಟ ಹಾಗೂ ದಾನಿ ಸೋನು ಸೂದ್ ಅವರ ಮುಂಬೈ ನಿವಾಸ ಹಾಗೂ ಕಚೇರಿಗಳ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧನೆ ನಡೆಸಿದ್ದಾರೆ ಒಟ್ಟು ಆರು ಪ್ರದೇಶಗಳ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಯಿತು ಎಂದು ವರದಿಯಾಗಿದೆ.

 Sharesee more..

ಭಾರತ ಪ್ರಜಾಪ್ರಭುತ್ವದ ತಾಯಿ: ಪ್ರಧಾನಿ ಮೋದಿ

15 Sep 2021 | 8:33 PM

ನವದೆಹಲಿ, ಸೆ 15 (ಯುಎನ್‌ ಐ) - ಭಾರತ ಪ್ರಜಾಪ್ರಭುತ್ವದ ತಾಯಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಕೊಂಡಾಡಿದ್ದಾರೆ ನಮಗೆ ಪ್ರಜಾಪ್ರಭುತ್ವ ಎಂಬುದು ಸಂವಿಧಾನ ರಚನೆಯಿಂದ ಮಾತ್ರ ಬಂದಿಲ್ಲ.

 Sharesee more..

ಕ್ರಿಮಿನಲ್‌ ಪ್ರಕರಣ ಹಿನ್ನೆಲೆ; ಮಮತಾ ಬ್ಯಾನರ್ಜಿ ನಾಮನಿರ್ದೇಶನ ರದ್ದುಗೊಳಿಸಲು ಬಿಜೆಪಿ ಒತ್ತಾಯ

14 Sep 2021 | 6:32 PM

ಕೋಲ್ಕತಾ, ಸೆ 14 (ಯುಎನ್ಐ) ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ, ಅವರ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ನಾಮನಿರ್ದೇಶನವನ್ನು ರದ್ದುಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.

 Sharesee more..

ಅಖ್ತರ್‌ ಪ್ರಕರಣ; ವಿಚಾರಣೆಗೆ ಗೈರು ಹಾಜರಾದ ಕಂಗನಾಗೆ ಕೋರ್ಟ್‌ ಎಚ್ಚರಿಕೆ

14 Sep 2021 | 6:01 PM

ಮುಂಬೈ, ಸೆ 14 (ಯುಎನ್ಐ) ಸಾಹಿತಿ ಜಾವೇದ್ ಅಖ್ತರ್ ಅವರ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ವಿಚಾರಣೆಗೆ ಹಾಜರಾಗದ ನಟಿ ಕಂಗನಾ ರನೌತ್ ವಿರುದ್ಧ ಇಲ್ಲಿನ ಸ್ಥಳೀಯ ನ್ಯಾಯಾಲಯ ಮಂಗಳವಾರ ಎಚ್ಚರಿಕೆ ನೀಡಿದೆ ಅಖ್ತರ್ ಪರವಾಗಿ ವಾದ ಮಂಡಿಸಿದ ವಕೀಲ ಜಯ್ ಭಾರದ್ವಾಜ್, ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಂಗನಾ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್‌ ಜಾರಿಗೊಳಿಸುವಂತೆ ನನವಿ ಮಾಡಿದರು.

 Sharesee more..