Friday, Feb 28 2020 | Time 09:44 Hrs(IST)
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
 • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
 • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
 • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
 • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
 • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports Share

ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಅಗರ್ಕರ್ ಪೈಪೋಟಿ

ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಅಗರ್ಕರ್ ಪೈಪೋಟಿ
ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಜಿತ್ ಅಗರ್ಕರ್ ಪೈಪೋಟಿ

ಮುಂಬೈ, ಜ ೨೪( ಯುಎನ್‌ಐ) ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರಜ್ವಲಿಸಿದ್ದ ಮಾಜಿ ಪೇಸರ್ ಅಜಿತ್ ಅಗರ್ಕರ್ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ.

ಶುಕ್ರವಾರ (ಜನವರಿ ೨೪) ಅರ್ಜಿಸಲ್ಲಿಕೆಗೆ ಅಂತಿಮ ದಿನವಾಗಿತ್ತು ಕೊನೆಗಳಿಗೆಯಲ್ಲಿ ಅರ್ಗಕರ್ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಸೃಷ್ಟಿಯಾಗಿದೆ.

ಈವರೆಗೆ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದವರ ಪೈಕಿ ಅಗರ್ಕರ್ ಪ್ರಸಿದ್ಧ ಕ್ರಿಕೆಟಿಗರಾಗಿದ್ದು, ಅಧ್ಯಕ್ಷರಾಗುವ ಸಾಧ್ಯತೆಗಳು ಹೆಚ್ಚು. ಮುಂಬೈ ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅಗರ್ಕರ್, ಸೆಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿರುವುದನ್ನು ದೃಢ ಪಡಿಸಿದ್ದಾರೆ.

ಭಾರತ ಪರವಾಗಿ ೨೬ ಟೆಸ್ಟ್, ೧೯೧ ಏಕದಿನ ಮತ್ತು ಮೂರು ಟಿ -೨೦ ಪಂದ್ಯ ಆಡಿರುವ ಅನುಭವ ಹೊಂದಿದ್ದಾರೆ. ಎಲ್ಲಾ ನಮೂನೆಯ ಕ್ರಿಕೆಟ್ ಸೇರಿ ಒಟ್ಟು ೩೪೯ ವಿಕೆಟ್ ಗಳು ಅಗರ್ಕರ್ ಅವರ ಖಾತೆಯಲ್ಲಿವೆ ಎಕದಿನ ಪಂದ್ಯಗಳಲ್ಲಿ ೨೮೮ ವಿಕೆಟ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಗರ್ಕರ್ ತಮ್ಮ ಆಟದ ಸಮಯದಲ್ಲಿ ಅತಿ ವೇಗವಾಗಿ ೫೦ ಏಕದಿನ ವಿಕೆಟ್ ಗಳಿಸಿದ ದಾಖಲೆ ಕೂಡ ಹೊಂದಿದ್ದಾರೆ. ಅವರು ೨೩ ಎಕದಿನ ಪಂದ್ಯಗಳಲ್ಲಿ ೫೦ ವಿಕೆಟ್ ಪಡೆದಿದ್ದಾರೆ. ನಂತರ ಅಗರ್ಕರ್ ಶ್ರೀಲಂಕಾದ ಬೌಲರ್ ಮೆಂಡಿಸ್ (೧೯ ಪಂದ್ಯಗಳು) ದಾಖಲೆಯನ್ನು ಮುರಿದಿದ್ದಾರೆ.

ಸೆಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ ಗಣ್ಯರೆಂದರೆ

ಅಜಿತ್ ಅಗರ್ಕರ್ (ಮುಂಬೈ), ಚೇತನ್ ಶರ್ಮಾ (ಹರಿಯಾಣ), ನಯನ್ ಮೊಂಗಿಯಾ (ಬರೋಡಾ), ಲಕ್ಷ್ಮಣ ಶಿವರಾಮಕೃಷ್ಣನ್ (ತಮಿಳುನಾಡು), ರಾಜೇಶ್ ಚೌಹಾನ್ (ಮಧ್ಯಪ್ರದೇಶ), ಅಮೆ ಖುರೇಷಿಯಾ (ಮಧ್ಯಪ್ರದೇಶ), ಗಾಯೇಂದ್ರ ಪಾಂಡೆ (ಯುಪಿ) ಸೇರಿದ್ದಾರೆ.

ಯುಎನ್‌ಐ ಕೆವಿಆರ್ ೧೯೪೭

More News
ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

27 Feb 2020 | 8:25 PM

ನವದೆಹಲಿ, ಫೆ.27 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡು ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಬೌಲರ್ ಇಶಾಂತ್ ಶರ್ಮಾ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದರು. ಶನಿವಾರದಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಮತ್ತೊಂದು ಮೈಲುಗಲ್ಲು ತಲುಪುವ ಕನಸಿನಲ್ಲಿದ್ದಾರೆ.

 Sharesee more..

ತಂಡದ ಲಯ ಮುಂದುವರೆಸುವ ಅವಶ್ಯಕತೆ ಇದೆ: ತಾನಿಯಾ

27 Feb 2020 | 7:26 PM

 Sharesee more..

ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಜೊಕೊವಿಚ್

27 Feb 2020 | 7:08 PM

 Sharesee more..