Monday, Sep 16 2019 | Time 06:50 Hrs(IST)
Sports

ಅಕ್ಟೋಬರ್ 4ರಿಂದ 10ರವರೆಗೆ ಶಿಮ್ಲಾದಲ್ಲಿ 4ನೇ ಪುರುಷರ ರಾಷ್ಟ್ರೀಯ ಬಾಕ್ಸಿಂಗ್

07 Sep 2019 | 8:09 PM

ಶಿಮ್ಲಾ, ಸೆಪ್ಟೆಂಬರ್ 7 (ಯುಎನ್‌ಐ) ಅಕ್ಟೋಬರ್ 4ರಿಂದ ಪ್ರಾರಂಭವಾಗಲಿರುವ 4ನೇ ಎಲೈಟ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಆಶಿಶ್ ಕುಮಾರ್ (75 ಕೆಜಿ) ಮತ್ತು ಸ್ಥಳೀಯ ಹಲವು ಆಟಗಾರರು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

 Sharesee more..
ಯುಎಸ್‌ ಓಪನ್‌: ಫೈನಲ್‌ನಲ್ಲಿ ನಡಾಲ್‌-ಮೆಡ್ವೆಡೆವ್‌ ಕಾದಾಟ

ಯುಎಸ್‌ ಓಪನ್‌: ಫೈನಲ್‌ನಲ್ಲಿ ನಡಾಲ್‌-ಮೆಡ್ವೆಡೆವ್‌ ಕಾದಾಟ

07 Sep 2019 | 4:47 PM

ನ್ಯೂಯಾರ್ಕ್, ಸೆ 7 (ಯುಎನ್‌ಐ) ಗೆಲುವಿನ ಓಟ ಮುಂದುವರಿಸಿರುವ ವಿಶ್ವದ ಶ್ರೇಷ್ಠ ಟೆನಿಸ್‌ ಆಟಗಾರ ರಫೆಲ್‌ ನಡಾಲ್‌ ಅವರು ಯುಎಸ್‌ ಓಪನ್‌ ಐದನೇ ಬಾರಿ ಫೈನಲ್‌ಗೆ ಪ್ರವೇಶ ಮಾಡಿದ್ದಾರೆ.

 Sharesee more..

ಸೆ.9 ರಿಂದ ಭಾರತ ರಾಷ್ಟ್ರೀಯ ಕಿರಿಯರ ಹಾಕಿ ತರಬೇತಿ ಶಿಬಿರ

07 Sep 2019 | 1:20 PM

ನವದೆಹಲಿ, ಸೆ 7 (ಯುಎನ್‌ಐ) ಇದೇ 9 ರಿಂದ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಆರಂಭವಾಗುವ ಭಾರತ ಕಿರಿಯರ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ 33 ಆಟಗಾರರ ಸಂಬಾವ್ಯಪಟ್ಟಿಯನ್ನು ಹಾಕಿ ಇಂಡಿಯಾ ಇಂದು ಪ್ರಕಟಿಸಿದೆ.

 Sharesee more..

ದಿನೇಶ್‌ ಕಾರ್ತಿಕ್‌ಗೆ ನೋಟಿಸ್‌ ನೀಡಿದ ಬಿಸಿಸಿಐ

07 Sep 2019 | 12:58 PM

ಲಂಡನ್‌, ಸೆ 7 (ಯುಎನ್‌ಐ) ಗುತ್ತಿಗೆ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ ಭಾರತ ತಂಡದ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ ಅವರಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ನೋಟಿಸ್‌ ನೀಡಿದೆ ಕೆರಿಬಿಯನ್ ಪ್ರೀಮಿಯರ್‌ ಲೀಗ್‌ನ ಸೇಂಟ್‌ ಕಿಸ್ಟ್‌ ಹಾಗೂ ನೆವಿಸ್‌ ಪ್ಯಾಟ್ರಿಯಟ್ಸ್‌ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ವೇಳೆ ದಿನೇಶ್‌ ಕಾರ್ತಿಕ್‌ ಟ್ರಿಬ್ಯಾಂಗೊ ನೈಟ್‌ ರೈಡರ್ಸ್‌ ಡ್ರೆಸ್ಸಿಂಗ್‌ ಕೋಣೆಯಲ್ಲಿ ಕಾಣಿಸಿಕೊಂಡಿದ್ದರು.

 Sharesee more..

ಫಿಯಾ ವಿಶ್ವ ರ‌್ಯಾಲಿ ಚಾಂಪಿಯನ್‌ಶಿಪ್‌ಗೆ ಗೌರವ್‌ ಗಿಲ್‌

07 Sep 2019 | 11:23 AM

ಬೆಂಗಳೂರು, ಸೆ 7 (ಯುಎನ್‌ಐ) ಅರ್ಜುನ ಪ್ರಶಸ್ತಿ ವಿಜೇತ ಮೊದಲ ಹಾಗೂ ಏಕೈಕ ರ‌್ಯಾಲಿ ಪಟು ಗೌರವ್ ಗಿಲ್ ಅವರು ಟರ್ಕಿಯಲ್ಲಿ ಇದೇ ತಿಂಗಳ 12 ರಿಂದ 15ರವರೆಗೆ ನಡೆಯಲಿರುವ ರ‌್ಯಾಲಿ ಆಫ್ ಟರ್ಕಿಯಲ್ಲಿ ಪಾಲ್ಗೊಳ್ಳುವ ಮೂಲಕ ಫಿಯಾ ವಿಶ್ವ ರ‌್ಯಾಲಿ ಚಾಂಪಿಯನ್‌ಶಿಪ್ 2ರಲ್ಲಿ ತಮ್ಮ ಛಾಪು ಮೂಡಿಸಲಿದ್ದಾರೆಮೂರು ಬಾರಿ ಎಪಿಆರ್ ಸಿ ಹಾಗೂ ಆರು ಬಾರಿ ಐಎನ್ಆರ್‌ಸಿ ಚಾಂಪಿಯನ್ ಪಟ್ಟ ಗೆದ್ದಿರುವ ಗಿಲ್, ಎಂ-ಸ್ಪೋರ್ಟ್ ಅಭಿವೃದ್ಧಿಪಡಿಸಿರುವ, ಜೆಕೆ ಟಯರ್ಸ್ ಮೋಟೋ ಸ್ಪೋರ್ಟ್ ಪ್ರೋತ್ಸಾಹಿಸಿರುವ 1.

 Sharesee more..

ಕೊಲಂಬಿಯಾ ಜೋಡಿಗೆ ಯುಎಸ್‌ ಪುರುಷರ ಡಬಲ್ಸ್‌ ಕಿರೀಟ

07 Sep 2019 | 11:04 AM

ನ್ಯೂಯಾರ್ಕ್‌, ಸೆ 7 (ಕ್ಸಿನ್ಹುವಾ) ಜ್ಯೂನ್‌ ಸೆಬಾಸ್ಟಿಯನ್‌ ಕಬಲ್‌ ಹಾಗೂ ರಾಬರ್ಟ್‌ ಫರಾಹ್‌ ಕೊಲಂಬಿಯಾ ಜೋಡಿಯು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಮಹತ್ವದ ಟೆನಿಸ್‌ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು ಆ ಮೂಲಕ ಸತತ ಎರಡನೇ ಗ್ರ್ಯಾನ್‌ ಸ್ಲ್ಯಾಮ್‌ ಗೆಲುವಿನ ನಗೆ ಬೀರಿತು.

 Sharesee more..

ಎಟಿಪಿ ಚಾಲೆಂಜರ್‌: ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಪ್ರಜ್ಞೇಶ್‌ ಗುಣೇಶ್ವರನ್‌

07 Sep 2019 | 10:48 AM

ಚಂಡೀಗಢ, ಸೆ 7 (ಯುಎನ್‌ಐ) ಭಾರತದ ಅಗ್ರ ಕ್ರಮಾಂಕದ ಟೆನಿಸ್‌ ಆಟಗಾರ ಪ್ರಜ್ಞೇಶ್‌ ಗುಣೇಶ್ವರನ್‌ ಅವರು ಚೀನಾದಲ್ಲಿ ನಡೆಯುತ್ತಿರುವ ಎಟಿಪಿ ಚಾಲೆಂಜರ್‌ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಸೋತು ನಿರಾಸೆ ಅನುಭವಿಸಿದರು ಎರಡು ಗಂಡೆ 15 ನಿಮಿಷಗಳ ಕಾಲ ನಡೆದ ಅಂತಿಮ ಎಂಟರ ಘಟ್ಟದ ಪಂದ್ಯದಲ್ಲಿ ಕಠಿಣ ಹೋರಾಟದ ನಡುವೆಯೂ 29ರ ಪ್ರಾಯದ ಪ್ರಜ್ಞೇಶ್‌ ಗುಣೇಶ್ವರನ್ ಅವರು ಜಪಾನ್‌ನ ಏಳನೇ ಶ್ರೇಯಾಂಕದ ಗೋ ಸೊಯೆಡಾ ಅವರ ವಿರುದ್ಧ 6-7 (2), 3-6, 6-3 ಅಂತರದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದರು.

 Sharesee more..
ಬಿಸಿಸಿಐ ರಾಜ್ಯ ಸಂಸ್ಥೆಯ ಚುನಾವಣೆಯ ಗಡುವು ವಿಸ್ತರಿಸಿದ ಸಿಒಎ

ಬಿಸಿಸಿಐ ರಾಜ್ಯ ಸಂಸ್ಥೆಯ ಚುನಾವಣೆಯ ಗಡುವು ವಿಸ್ತರಿಸಿದ ಸಿಒಎ

06 Sep 2019 | 8:23 PM

ಮುಂಬೈ, ಸೆಪ್ಟೆಂಬರ್ 6 (ಯುಎನ್‌ಐ) ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತಾತ್ಮಕ ಸಮಿತಿ(ಸಿಒಎ), ಬಿಸಿಸಿಐನ ರಾಜ್ಯ ಸಂಸ್ಥೆಗಳ ಚುನಾವಣೆ ನಡೆಸುವ ಗಡುವನ್ನು ಶುಕ್ರವಾರ ಸೆಪ್ಟೆಂಬರ್ 14ರಿಂದ 28ಕ್ಕೆ ವಿಸ್ತರಿಸಿದೆ.

 Sharesee more..
ಐಎಸ್ಎಸ್ಎಫ್ ಚಾಂಪಿಯನ್‌ ತಂಡವನ್ನು ಅಭಿನಂದಿಸಿದ  ರಿಜಿಜು

ಐಎಸ್ಎಸ್ಎಫ್ ಚಾಂಪಿಯನ್‌ ತಂಡವನ್ನು ಅಭಿನಂದಿಸಿದ ರಿಜಿಜು

06 Sep 2019 | 6:25 PM

ನವದೆಹಲಿ, ಸೆಪ್ಟೆಂಬರ್ 6 (ಯುಎನ್‌ಐ): ರಿಯೊ ಡಿ ಜನೈರೊದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಐಎಸ್ಎಸ್ಎಫ್ ರೈಫಲ್ ಮತ್ತು ಪಿಸ್ತೂಲ್ ವಿಶ್ವಕಪ್‌ನಿಂದ ಹಿಂದಿರುಗಿದ ಭಾರತೀಯ ಶೂಟಿಂಗ್ ತಂಡದ ಸದಸ್ಯರನ್ನು ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು ಶುಕ್ರವಾರ ಭೇಟಿ ಮಾಡಿ, ಅಭಿನಂದಿಸಿದರು.

 Sharesee more..
ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್‌ ನಬಿ ವಿದಾಯ

ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್‌ ನಬಿ ವಿದಾಯ

06 Sep 2019 | 5:05 PM

ಚಿತ್ತಗಾಂಗ್‌, ಸೆ 6 (ಯುಎನ್‌ಐ) ಅಫ್ಘಾನಿಸ್ತಾನ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಮೊಹಮ್ಮದ್‌ ನಬಿ ಅವರು ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.

 Sharesee more..

ಮಧ್ಯಮ ಕ್ರಮಾಂಕದ ಸಮಸ್ಯೆ ಬಗೆಹರಿಸುವತ್ತ ಗಮನ: ವಿಕ್ರಮ್‌ ರಾಥೋಡ್

06 Sep 2019 | 3:13 PM

ನವದೆಹಲಿ, ಸೆ 6 (ಯುಎನ್‌ಐ) ಟೀಮ್‌ ಇಂಡಿಯಾಗೆ ನೂತನವಾಗಿ ಆಯ್ಕೆಯಾಗಿರುವ ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌ ಅವರು ಮುಂಬರುವ ದಿನಗಳಲ್ಲಿ ಸೀಮಿತ ಓವರ್‌ಗಳ ತಂಡದ ಮಧ್ಯಮ ಬ್ಯಾಟಿಂಗ್‌ ಕ್ರಮಾಂಕದ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

 Sharesee more..

ಆಫ್ಘನ್‌ ಉತ್ತಮ ಮೊತ್ತ: ಬಾಂಗ್ಲಾದೇಶಕ್ಕೆ ಆರಂಭಿಕ ಆಘಾತ

06 Sep 2019 | 2:40 PM

ಚಿತ್ತಗಾಂಗ್, ಸೆ 6 (ಯುಎನ್‌ಐ) ಎರಡನೇ ದಿನ ನಾಯಕ ರಶೀದ್‌ ಖಾನ್‌ (51 ರನ್‌) ಹಾಗೂ ಅಫ್ಸರ್‌ ಝಝೈ (41 ರನ್‌) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಸಹಾಯದಿಂದ ಅಫ್ಘಾನಿಸ್ತಾನ ಏಕೈಕ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಗೌರವ ಮೊತ್ತ ಕಲೆಹಾಕಿದೆ.

 Sharesee more..

ವಿಶ್ವಕಪ್‌ ವಿಜೇತ ಕಾಫು ಅವರ ಪುತ್ರ ಹೃದಯಾಘಾತದಿಂದ ಸಾವು

06 Sep 2019 | 2:04 PM

ಅಟ್ಲಾಂಟ ಸೆ 6 (ಯುಎನ್‌ಐ) ಬ್ರೆಜಿಲ್‌ ಫುಟ್ಬಾಲ್‌ ತಂಡದ ಮಾಜಿ ನಾಯಕ ಹಾಗೂ ಎರಡು ಬಾರಿ ವಿಶ್ವಕಪ್‌ ವಿಜೇತ ಕಾಫು ಅವರ ಪುತ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

 Sharesee more..

ಅಭಿಮನ್ಯು ಈಶ್ವರನ್‌ ಭರ್ಜರಿ ಬ್ಯಾಟಿಂಗ್‌: ಭಾರತ ರೆಡ್‌ಗೆ ಮುನ್ನಡೆ

06 Sep 2019 | 1:35 PM

ಬೆಂಗಳೂರು, ಸೆ 6 (ಯುಎನ್‌ಐ) ಅಭಿಮನ್ಯು ಈಶ್ವರನ್‌ (ಔಟಾಗದೆ 150 ರನ್‌) ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಭಾರತ ರೆಡ್‌ ತಂಡ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಭಾರತ ಗ್ರೀನ್‌ ವಿರುದ್ಧ ಮುನ್ನಡೆ ಸಾಧಿಸಿದೆ.

 Sharesee more..
ಯುಎಸ್‌ ಓಪನ್‌: ಫೈನಲ್‌ನಲ್ಲಿ ಬಿಯಾಂಕ-ಸೆರೇನಾ ಮುಖಾಮುಖಿ

ಯುಎಸ್‌ ಓಪನ್‌: ಫೈನಲ್‌ನಲ್ಲಿ ಬಿಯಾಂಕ-ಸೆರೇನಾ ಮುಖಾಮುಖಿ

06 Sep 2019 | 1:28 PM

ನ್ಯೂಯಾರ್ಕ್‌, ಸೆ 6 (ಯುಎನ್‌ಐ) ಯುವ ಆಟಗಾರ್ತಿ ಬಿಯಾಂಕ ಆ್ಯಂಡ್ರೀಸ್ಕು ಅವರು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಟೆನಿಸ್‌ ಟೂರ್ನಿಯ ಫೈನಲ್‌ಗೆ ಪ್ರವೇಶ ಮಾಡಿದ್ದಾರೆ.

 Sharesee more..