Monday, Sep 16 2019 | Time 06:16 Hrs(IST)
Sports
ಬೆನ್‌ ಸ್ಟೋಕ್ಸ್‌ ನಿಯಂತ್ರಿಸಲು ಲಿಯಾನ್‌ ಪ್ರಮುಖ ಅಸ್ತ್ರ: ಟಿಮ್‌ ಪೈನ್‌

ಬೆನ್‌ ಸ್ಟೋಕ್ಸ್‌ ನಿಯಂತ್ರಿಸಲು ಲಿಯಾನ್‌ ಪ್ರಮುಖ ಅಸ್ತ್ರ: ಟಿಮ್‌ ಪೈನ್‌

30 Aug 2019 | 4:04 PM

ಮ್ಯಾಂಚೆಸ್ಟರ್‌, ಆ 30 (ಯುಎನ್‌ಐ) ಹೇಡಿಂಗ್ಲೆ ಅಂಗಳದಲ್ಲಿ ನಥಾನ್‌ ಲಿಯಾನ್‌ ಸುಲಭ ರನೌಟ್ ಮಾಡುವಲ್ಲಿ ವಿಫಲವಾಗಿದ್ದರಿಂದ ಆಸ್ಟ್ರೇಲಿಯಾ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ ಒಂದು ವಿಕೆಟ್‌ನಿಂದ ಸೋಲು ಅನುಭವಿಸಿತ್ತು.

 Sharesee more..

ದುಲೀಪ್‌ ಟ್ರೋಫಿ: ಉತ್ತಮ ಮೊತ್ತ ದಾಖಲಿಸಿದ ಭಾರತ ಗ್ರೀನ್‌

30 Aug 2019 | 1:22 PM

ಬೆಂಗಳೂರು, ಆ 30 (ಯುಎನ್‌ಐ) ಅಭಿಷೇಕ್‌ ರೆಡ್ಡಿ ಶತಕದ ಜತೆಗೆ ಎರಡನೇ ದಿನ ಪ್ರಿಯಮ್‌ ಗಾರ್ಜ್‌ (53 ರನ್‌) ಅರ್ಧ ಶತಕದ ಬಲದಿಂದ ಭಾರತ ಗ್ರೀನ್‌ ತಂಡ ದುಲೀಪ್‌ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ ರೆಡ್‌ ವಿರುದ್ಧ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿದೆ.

 Sharesee more..

ಶೂಟಿಂಗ್‌ ವಿಶ್ವಕಪ್‌: ಸಂಜೀವ್‌ ರಜಪೂತ್‌ಗೆ ಬೆಳ್ಳಿ

30 Aug 2019 | 12:43 PM

ರಿಯೋ ಡಿ ಜನೈರೊ, ಆ 30 (ಯುಎನ್‌ಐ) ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತದ ಸಂಜೀವ್‌ ರಜಪೂತ್‌ ಅವರು 50 ಮೀ ರೈಫಲ್‌ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

 Sharesee more..

ವೇಗಗಳೇ ವೆಸ್ಟ್‌ ಇಂಡೀಸ್‌ ತಂಡದ ಬೆನ್ನೆಲುಬು: ಹೋಲ್ಡರ್‌

30 Aug 2019 | 12:20 PM

ಜಮೈಕಾ, ಆ 30 (ಯುಎನ್‌ಐ) ಅತ್ಯುತ್ತಮ ಬೌಲಿಂಗ್‌ ಮಾಡುತ್ತಿರುವ ವೇಗಿಗಳೇ ತಂಡಕ್ಕೆ ಬೆನ್ನೆಲುಬು ಎಂದು ವೆಸ್ಟ್‌ ಇಂಡೀಸ್‌ ತಂಡದ ನಾಯಕ ಜೇಸನ್‌ ಹೋಲ್ಡರ್‌ ತಿಳಿಸಿದ್ದಾರೆ,ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದಲ್ಲಿ ಭಾರತ 318 ರನ್‌ ಗಳಿಂದ ಭರ್ಜರಿ ಜಯ ಸಾಧಿಸಿತ್ತು.

 Sharesee more..

ವರ್ಗಿಲ್‌ ವಾನ್‌ ದಿಜ್ಕ್‌ಗೆ 'ಯುಎಎಫ್‌ಎ ವರ್ಷದ ಆಟಗಾರ' ಗರಿ

30 Aug 2019 | 11:22 AM

ಲಂಡನ್‌, ಆ 30 (ಕ್ಸಿನ್ಹುವಾ) ಲಿವರ್ಪೂಲ್ ಡಚ್‌ ಡಿಫೆಂಡರ್‌ ವರ್ಗಿಲ್‌ ವಾನ್‌ ಡಿಜ್ಕ್‌ ಅವರು ಯುಎಎಫ್‌ಎ 2018/19ರ ಆವೃತ್ತಿಯ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಯುರೋಪಿಯನ್‌ ಫುಟ್ಬಾಲ್‌ ಒಕ್ಕೂಟ ಗುರುವಾರ ಪ್ರಕಟಿಸಿದೆ ಡಚ್‌ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಟಗಾರ ವರ್ಗಿಲ್‌ ಅವರು ಮೂರು ಬಾರಿ 'ಯುಎಎಫ್‌ಎ ವರ್ಷದ ಆಟಗಾರ' ಪ್ರಶಸ್ತಿ ಗೆದ್ದಿದ್ದ ಕ್ರಿಸ್ಟಿಯಾನೊ ರಿನಾಲ್ಡೊ ಹಾಗೂ ಎರಡು ಬಾರಿ ವಿಜೇತ ಲಿಯೊನೆಲ್‌ ಮೆಸ್ಸಿ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

 Sharesee more..

ಮೆಸ್ಸಿಗೆ 'ಆವೃತ್ತಿಯ ಮುಂಚೂಣಿ ಆಟಗಾರ' ಗರಿ

30 Aug 2019 | 11:01 AM

ನ್ಯೂನ್‌ (ಸ್ವಿಜರ್‌ಲೆಂಡ್‌) ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಲಿಯೊನೆಲ್‌ ಮೆಸ್ಸಿ ಅವರು ಯುಇಎಫ್‌ಎ ಚಾಂಪಿಯನ್ಸ್‌ ಲೀಗ್‌ 2018/19ರ ಆವೃತ್ತಿಯ "ಋತುವಿನ ಮುಂಚೂಣಿ ಆಟಗಾರ" ಪ್ರಶಸ್ತಿಗೆ ಭಾಜನರಾಗಿದ್ದಾರೆ ಪ್ರಸಕ್ತ ಆವೃತ್ತಿಯಲ್ಲಿ ಬಾರ್ಸಿಲೋನಾ ತಂಡದ ನಾಯಕ ಮೆಸ್ಸಿ 285 ಅಂಕಗಳನ್ನು ಕಲೆ ಹಾಕಿದ್ದಾರೆ.

 Sharesee more..

ನಿವೃತ್ತಿ ನಿರ್ದಾರದ ಬಗ್ಗೆ ಯೂ ಟರ್ನ್‌ ಹೊಡೆದ ಅಂಬಾಟಿ ರಾಯುಡು

30 Aug 2019 | 10:47 AM

ನವದೆಹಲಿ, ಆ 30 (ಯುಎನ್‌ಐ) ಐಸಿಸಿ ವಿಶ್ವಕಪ್‌ ತಂಡದಲ್ಲಿ ಸ್ಥಾನ ನೀಡಲಿಲ್ಲವೆಂದು ಬೇಸತ್ತು ಅಂಬಾಟಿ ರಾಯುಡು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು ಇದೀಗ ಬಲಗೈ ಬ್ಯಾಟ್ಸ್‌ಮನ್‌ ಯೂ ಟರ್ನ್‌ ಹೊಡೆದಿದ್ದು ತಮ್ಮ ನಿವೃತ್ತಿ ನಿರ್ಧಾರವನ್ನು ಹಿಂದಕ್ಕೆ ಪಡೆದಿದ್ದಾರೆ.

 Sharesee more..

ಎರಡು ವರ್ಷಗಳ ಬಳಿಕ ಸಿಡಿಸಿದ ಶತಕದ ಬಗ್ಗೆ ಭಾವುಕರಾದ ಅಜಿಂಕ್ಯಾ ರಹಾನೆ

30 Aug 2019 | 10:23 AM

ಕಿಂಗ್ಸ್‌ಸ್ಟನ್‌ (ಜಮೈಕಾ), ಆ 30 (ಯುಎನ್ಐ) ಎರಡು ವರ್ಷಗಳ ಬಳಿಕ ಪಂದ್ಯದ ಗೆಲುವಿನ ಶತಕ ಸಿಡಿಸಿದ್ದರಿಂದ ಸ್ವಲ್ಪ ಭಾವುಕನಾಗಿದ್ದೆ ಎಂದು ಭಾರತ ತಂಡದ ಉಪ ನಾಯಕ ಅಜಿಂಕ್ಯಾ ರಹಾನೆ ಬಹಿರಂಗ ಪಡಿಸಿದ್ದಾರೆ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅಜಿಂಕ್ಯಾ ರಹಾನೆ ಪ್ರಥಮ ಇನಿಂಗ್ಸ್‌ನಲ್ಲಿ 81 ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ 102 ರನ್‌ ಸಿಡಿಸಿದ್ದರು.

 Sharesee more..

ಯುಎಸ್‌ ಓಪನ್‌: ರಫೆಲ್‌ ನಡಾಲ್‌ಗೆ ವಾಕ್‌ ಓವರ್‌, ಹಲೆಪ್‌ಗೆ ಆಘಾತ

30 Aug 2019 | 9:54 AM

ನ್ಯೂಯಾರ್ಕ್‌, ಆ 30 (ಕ್ಸಿನ್ಹುವಾ) ಮೂರು ಬಾರಿ ಚಾಂಪಿಯನ್‌ ರಫೆಲ್‌ ನಡಾಲ್‌ ಅವರು ಯುಎಸ್‌ ಓಪನ್‌ ಎರಡನೇ ಸುತ್ತಿನ ಪಂದ್ಯದಲ್ಲಿ ವಾಕ್‌ ಓವರ್‌ ಸಿಕ್ಕಿದ್ದು, ಮಾಜಿ ವಿಶ್ವ ಅಗ್ರ ಶ್ರೇಯಾಂಕಿತೆ ಸಿಮೋನಾ ಹಲೆಪ್‌ ಅವರು 116ನೇ ಸ್ಥಾನದ ಆಟಗಾರ್ತಿ ಎದುರು ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

 Sharesee more..

ಯುಎಸ್‌ ಓಪನ್‌: ಡಿವಿಜ್‌ ಶರಣ್ ಜೋಡಿಗೆ ಮೊದಲನೇ ಸುತ್ತಿನಲ್ಲೇ ಸೋಲು

30 Aug 2019 | 8:55 AM

ನ್ಯೂಯಾರ್ಕ್‌, ಆ 30 (ಕ್ಸಿನ್ಹುವಾ) ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ನಲ್ಲಿ ಭಾರತದ ಡಿವಿಜ್‌ ಶರಣ್‌ ಹಾಗೂ ಮಂಗೋಲಿಯಾದ ಹ್ಯೂಗೋ ನೀಸ್ ಜೋಡಿಯು ಮೊದಲನೇ ಸುತ್ತಿನ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ನಡೆದಿದೆ ಯುಎಸ್‌ಟಿಎ ಬಿಲ್ಲಿ ಜೀನ್‌ ಕಿಂಗ್‌ ನ್ಯಾಷನಲ್‌ ಟೆನಿಸ್‌ ಸೆಂಟರ್‌ನಲ್ಲಿ ಒಂದು ಗಂಟೆ 12 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್‌ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ ಸ್ಪೇನ್‌ನ ರಾಬರ್ಟೊ ಕಾರ್ಬಲ್ಸ್ ಬೇನಾ ಹಾಗೂ ಜತೆಗಾರ ಅರ್ಜೆಂಟೀನಾದ ಫೆಡ್ರಿಕೊ ಡೆಲ್ಬೊನಿಸ್ ಜೋಡಿಯು 6-4, 6-4 ಅಂತರದಲ್ಲಿ ನೇರ ಸೆಟ್‌ಗಳಿಂದ ಡಿವಿಜ್‌ ಶರಣ್‌ ಹಾಗೂ ಹ್ಯೂಗೋ ನೀಸ್ ಜೋಡಿಯನ್ನು ಮಣಿಸಿತು.

 Sharesee more..

ಕೆಪಿಎಲ್: ‍ಹುಬ್ಬಳ್ಳಿ ಟೈಗರ್ಸ್ ಕ್ವಾಲಿಫೈಯರ್ ಗೆ 'ಕ್ವಾಲಿಫೈ'

29 Aug 2019 | 11:22 PM

ಮೈಸೂರು, ಆ 29 (ಯುಎನ್ಐ)- ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಟಿ-20 ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಲಯನ್ಸ್ ತಂಡವನ್ನು ಮಣಿಸಿ, ಎರಡನೇ ಕ್ವಾಲಿಫೈಯರ್ ಗೆ ಅರ್ಹತೆ ಪಡೆದು ಕೊಂಡಿದೆ.

 Sharesee more..

ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಗೆ ಭಾರತ ತಂಡ ಪ್ರಕಟ, ಧೋನಿಗಿಲ್ಲ ಅವಕಾಶ

29 Aug 2019 | 10:03 PM

ಮುಂಬೈ, ಆ 29 (ಯುಎನ್ಐ)- ಸೆಪ್ಟಂಬರ್ ನಲ್ಲಿ ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೂರು ಟಿ-20 ಪಂದ್ಯಗಳ ಸರಣಿಗೆ ತಂಡ ಪ್ರಕಟಿಸಲಾಗಿದ್ದು, ಹಿರಿಯ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರಿಗೆ ಸ್ಥಾನ ಲಭಿಸಿಲ್ಲ, ಉಳಿದಂತೆ ವೇಗಿ ಭುವನೇಶ್ವರ್ ಕುಮಾರ್ ಅವರ ಸ್ಥಾನಕ್ಕೆ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆ ಆಗಿದ್ದಾರೆ.

 Sharesee more..

ಕ್ರೀಡಾ ಸಾಧಕರಿಗೆ ಕ್ರೀಡಾ ದಿನಾಚರಣೆಯಂದು ಗೌರವ

29 Aug 2019 | 9:05 PM

ನವದೆಹಲಿ, ಆ 29 (ಯುಎನ್ಐ) ರಾಷ್ಟ್ರಪತಿ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಿಯೋ ಪ್ಯಾರಾ ಒಲಂಪಿಕ್ ಸಿಲ್ವರ್ ಪದಕ ವಿಜೇತೆ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರಿಗೆ ಕ್ರೀಡಾ ವಿಭಾಗದಲ್ಲಿ ದೇಶದ ಅತ್ಯುನ್ನತ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದರು.

 Sharesee more..

ಪ್ರೊ ಕಬಡ್ಡಿ: ಬೆಂಗಾಲ್ ಗೆ ಮಣಿದ ತಲೈವಾಸ್

29 Aug 2019 | 8:48 PM

ನವದೆಹಲಿ, ಆ 29 (ಯುಎನ್ಐ)- ಸ್ಟಾರ್ ಆಟಗಾರ ಕೆ ಪ್ರಬಂಜನ್ ಹಾಗೂ ಮಹೇಂದ್ರ ಸಿಂಗ್ ಅವರ ಭರ್ಜರಿ ಆಟದ ಪ್ರದರ್ಶನದಿಂದ ಬೆಂಗಾಲ್ ವಾರಿಯರ್ಸ್ ಪ್ರೊ ಕಬಡ್ಡಿ ಟೂರ್ನಿಯ 64ನೇ ಪಂದ್ಯದಲ್ಲಿ 35-26 ರಿಂದ ತಮಿಳು ತಲೈವಾಸ್ ತಂಡವನ್ನು ಮಣಿಸಿತು.

 Sharesee more..

ಭಾರತ 'ಎ'ಗೆ 69 ರನ್ ಗೆಲುವು

29 Aug 2019 | 7:58 PM

ತಿರುವನಂತಪುರ್, ಆ 29 (ಯುಎನ್ಐ)- ಆಲ್ ರೌಂಡರ್ ಅಕ್ಷರ್ ಪಟೇಲ್ (60 ರನ್ ಹಾಗೂ 2 ವಿಕೆಟ್) ಅವರ ಭರ್ಜರಿ ಪ್ರದರ್ಶನದಿಂದ ಭಾರತ 'ಎ' 69 ರನ್ ಗಳಿಂದ ದಕ್ಷಿಣ ಆಫ್ರಿಕಾ 'ಎ' ತಂಡವನ್ನು ಮಣಿಸಿ, ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

 Sharesee more..