Monday, Sep 16 2019 | Time 06:10 Hrs(IST)
Sports

ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಜಂತಾ ಮೆಂಡಿಸ್

29 Aug 2019 | 7:57 PM

ಕೊಲಂಬೊ, ಆ 29 (ಯುಎನ್ಐ)- ಶ್ರೀಲಂಕಾದ ಖ್ಯಾತ ಸ್ಪಿನ್ ಬೌಲರ್ ಅಜಂತಾ ಮೆಂಡಿಸ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ ಮೆಂಡಿಸ್ ಅವರು ಶ್ರೀಲಂಕಾ ಪರ 19 ಟೆಸ್ಟ್, 87 ಏಕದಿನ, 39 ಟಿ-20 ಪಂದ್ಯ ಆಡಿದ್ದು, ಒಟ್ಟಾರೆಯಾಗಿ 288 ವಿಕೆಟ್ ಪಡೆದಿದ್ದಾರೆ.

 Sharesee more..

ದುಲೀಪ್ ಟ್ರೋಫಿ: ಅಕ್ಷತ್ ರೆಡ್ಡಿ ಶತಕ, ಗ್ರೀನ್ ಗೆ ದಿನದ ಗೌರವ

29 Aug 2019 | 7:25 PM

ಬೆಂಗಳೂರು, ಆ 29, (ಯುಎನ್ಐ)- ಆರಂಭಿಕ ಅಕ್ಷತ್ ರೆಡ್ಡಿ (146 ರನ್) ಶತಕ ಹಾಗೂ ಮಧ್ಯಮ ಕ್ರಮಾಂಕದ ಸಿದ್ಧಾರ್ಥ್ ಲಾಡ್ (64 ರನ್) ಅರ್ಧಶತಕದ ನೆರವಿನಿಂದ ಭಾರತ ಗ್ರೀನ್ ತಂಡ ಇಲ್ಲಿ ನಡೆದಿರುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ರೆಡ್ ವಿರುದ್ಧ ಮೊದಲ ದಿನದಾಟದ ಗೌರವವನ್ನು ತನ್ನದಾಗಿಸಿಕೊಂಡಿದೆ.

 Sharesee more..
ಪ್ಯಾರಾ ಅಥ್ಲೀಟ್ ದೀಪಾ ಮಲಿಕ್‌ಗೆ 'ಖೇಲ್ ರತ್ನ' ಪ್ರದಾನ

ಪ್ಯಾರಾ ಅಥ್ಲೀಟ್ ದೀಪಾ ಮಲಿಕ್‌ಗೆ 'ಖೇಲ್ ರತ್ನ' ಪ್ರದಾನ

29 Aug 2019 | 6:38 PM

ನವದೆಹಲಿ, ಆ 29 (ಯುಎನ್ಐ) ರಾಷ್ಟ್ರಪತಿ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಿಯೋ ಪ್ಯಾರಾ ಒಲಂಪಿಕ್ ಸಿಲ್ವರ್ ಪದಕ ವಿಜೇತೆ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರಿಗೆ ಕ್ರೀಡಾ ವಿಭಾಗದಲ್ಲಿ ದೇಶದ ಅತ್ಯುನ್ನತ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರದಾನ ಮಾಡಿದರು.

 Sharesee more..
ರಾಹುಲ್ ದ್ರಾವಿಡ್   ಇನ್ನೂ  ಎನ್ ಸಿ ಎ  ಮುಖ್ಯಸ್ಥ ಮಾತ್ರ

ರಾಹುಲ್ ದ್ರಾವಿಡ್ ಇನ್ನೂ ಎನ್ ಸಿ ಎ ಮುಖ್ಯಸ್ಥ ಮಾತ್ರ

29 Aug 2019 | 4:22 PM

ಮುಂಬೈ ಆಗಸ್ಟ್ 29(ಯುಎನ್ಐ) ಸುಮಾರು ನಾಲ್ಕು ವರ್ಷಗಳಿಂದ ಭಾರತ- ಎ ಹಾಗೂ ಅಂಡರ್ - 19 ತಂಡಗಳ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್, ಇನ್ನು ಮುಂದೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥರಾಗಿ ಮಾತ್ರವೇ ಮುಂದುವರಿಯಲಿದ್ದಾರೆ.

 Sharesee more..

ಯುಎಸ್‌ ಓಪನ್‌: ಸೇರೆನಾ ಇನ್‌- ವೀನಸ್‌ ಔಟ್‌

29 Aug 2019 | 3:09 PM

ನ್ಯೂಯಾರ್ಕ್‌, ಆ 29 (ಕ್ಸಿನ್ಹುವಾ) ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಟೂರ್ನಿಯಲ್ಲಿ ಸೇರೆನಾ ವಿಲಿಯಮ್ಸ್ ಮೂರನೇ ಸುತ್ತಿಗೆ ಪ್ರವೇಶ ಮಾಡಿದರೆ ತಂಗಿ ವೀನಸ್‌ ವಿಲಿಯಮ್ಸ್‌ ಎರಡನೇ ಸುತ್ತಿನಲ್ಲಿ ಸೋತು ಸ್ಪರ್ಧೆಯಿಂದ ಹೊರ ನಡೆದಿದ್ದಾರೆ ಅಮೆರಿಕದ ವೀನಸ್‌ ವಿಲಿಯಮ್ಸ್ ಅವರು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಎರಡನೇ ಸುತ್ತಿನಲ್ಲಿ ಉಕ್ರೈನ್‌ನ ಐದನೇ ಶ್ರೇಯಾಂಕಿತೆ ಎಲೀನಾ ಸ್ವಿಟೋಲಿನಾ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದಾರೆ.

 Sharesee more..

ಟೆಸ್ಟ್‌ ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವತ್ತ ಭಾರತ ಚಿತ್ತ

29 Aug 2019 | 2:52 PM

ಜಮೈಕಾ, ಆ 29 (ಯುಎನ್‌ಐ) ಮೊದಲ ಪಂದ್ಯದಲ್ಲಿ ದಾಖಲೆಯ ಜಯ ಸಾಧಿಸಿ ವಿಶ್ವಾಸದಲ್ಲಿ ಬೀಗುತ್ತಿರುವ ಭಾರತ ತಂಡ ನಾಳೆಯಿಂದ ವೆಸ್ಟ್‌ ಇಂಡೀಸ್‌ ವಿರುದ್ಧ ಆರಂಭವಾಗುವ ಎರಡನೇ ಟೆಸ್ಟ್‌ ಪಂದ್ಯ ಗೆದ್ದು ಸರಣಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ತುಡಿತದಲ್ಲಿದೆ.

 Sharesee more..

ಯುಎಸ್‌ ಓಪನ್‌: ಮೂರನೇ ಸುತ್ತಿಗೆ ನೊವಾಕ್‌ ಜೊಕೊವಿಚ್‌

29 Aug 2019 | 9:54 AM

ನ್ಯೂಯಾರ್ಕ್‌, ಆ 29 (ಕ್ಸಿನ್ಹುವಾ) ಹಾಲಿ ಚಾಂಪಿಯನ್‌ ಹಾಗೂ ವಿಶ್ವ ಅಗ್ರ ಶ್ರೇಯಾಂಕಿತ ನೊವಾಕ್‌ ಜೊಕೊವಿಚ್‌ ಅವರು ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಟೂರ್ನಿಯಲ್ಲಿ ಮುರನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ ಅರ್ಥರ್‌ ಅಂಗಳದಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಅವರು ಜ್ಯೂನ್‌ ಇಗ್ನೇಶಿಯೊ ಲೊಂಡೆರೊ ವಿರುದ್ಧ 6-4, 7-6, 6-1 ಅಂತರದಲ್ಲಿ ಸುಲಭ ಜಯ ಸಾಧಿಸಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

 Sharesee more..

ಶೂಟಿಂಗ್‌ ವಿಶ್ವಕಪ್‌: ಎಲವೆನಿಲ್‌ ವಲಾರಿವನ್‌ಗೆ ಚಿನ್ನದ ಪದಕ

29 Aug 2019 | 9:33 AM

ನವದೆಹಲಿ, ಆ 29 (ಯುಎನ್‌ಐ) ಭಾರತದ ಉದಯೋನ್ಮುಖ ಶೂಟರ್‌ ಎಲವೆನಿಲ್‌ ವಲಾರಿವನ್‌ ಅವರು ರಿಯೋ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್ಎಫ್‌ ವಿಶ್ವಕಪ್‌ ನಲ್ಲಿ 10 ಮೀ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.

 Sharesee more..

ಯುಎಸ್‌ ಓಪನ್‌: ಮೂರನೇ ಸುತ್ತಿಗೆ ರೋಜರ್‌ ಫೆಡರರ್‌

29 Aug 2019 | 9:09 AM

ನ್ಯೂಯಾರ್ಕ್‌, ಆ 29 (ಕ್ಸಿನ್ಹುವಾ ) ವಿಶ್ವದ ಮೂರನೇ ಶ್ರೇಯಾಂಕಿತ ರೋಜರ್‌ ಫೆಡರರ್‌ ಇಲ್ಲಿ ನಡೆಯುತ್ತಿರುವ ಯುಎಸ್‌ ಓಪನ್‌ ಮೂರನೇ ಸುತ್ತಿಗೆ ಪ್ರವೇಶಿಸಿದ್ದಾರೆ ಬುಧವಾರ ನಡೆದ ಪುರುಷರ ಸಿಂಗಲ್ಸ್‌ ಎರಡನೇ ಸುತ್ತಿನ ಪಂದ್ಯದಲ್ಲಿ ಬೋಸ್ನಿಯಾದ ಡಾಮೀರ್ ಡುಮ್ಹೂರ್ ಅವರ ವಿರುದ್ಧ 3-6, 6-2, 6-3, 6-4 ಅಂತರದಲ್ಲಿ ಗೆದ್ದು ಸ್ವಿಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

 Sharesee more..

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್ ಗೆ ಭರ್ಜರಿ ಜಯ

28 Aug 2019 | 9:03 PM

ನವದೆಹಲಿ, ಆ 28 (ಯುಎನ್ಐ)- ಆರಂಭದಿಂದ ಸಾಧಿಸಿದ್ದ ಹಿಡಿತವನ್ನು ಕೊನೆಯವರೆಗೂ ಬಿಟ್ಟುಕೊಡದೆ ಆಡಿದ ಹರಿಯಾಣ ಸ್ಟೀಲರ್ಸ್ ಪ್ರೊ ಕಬಡ್ಡಿ ಲೀಗ್ ಟೂರ್ನಿಯ 62ನೇ ಪಂದ್ಯದಲ್ಲಿ 41-25 ರಿಂದ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡವನ್ನು ಮಣಿಸಿತು.

 Sharesee more..

ಕೆಪಿಎಲ್: ಪ್ಯಾಂಥರ್ಸ್ ಗೆ ಸವಾಲಿನ ಮೊತ್ತ ನೀಡಿದ ಟಸ್ಕರ್ಸ್

28 Aug 2019 | 9:01 PM

ಮೈಸೂರು, ಆ 28 (ಯುಎನ್ಐ)- ನಾಯಕ ಸಿ ಎಂ ಗೌತಮ್ (96 ರನ್) ಅವರ ಭರ್ಜರಿ ಆಟದ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ಇಲ್ಲಿ ನಡೆಯುತ್ತಿರುವ ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಗೆ ಸವಾಲಿನ ಮೊತ್ತ ನೀಡಿದೆ.

 Sharesee more..

ಭಾರತೀಯಯುವತಿ ಜೊತೆ ಆಸೀಸ್ ತಂಡದ ಸಿಕ್ಸರ್ ವೀರ ಮ್ಯಾಕ್ಸ್ ವೆಲ್ “ಲವ್”

28 Aug 2019 | 8:31 PM

ಮುಂಬೈ, ಆಗಸ್ಟ್ 28( ಯುಎನ್ಐ) ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸಿಕ್ಸರ್ ಗಳ ವೀರ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಯುವತಿಯೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಾರೆ ಎಂದು ವರದಿ ಆಕೆಯೊಂದಿಗೆ ಆಸ್ಟ್ರೇಲಿಯಾದ ಬೀದಿಗಳಲ್ಲಿ ಸುತ್ತಾಟ, ಸಿನಿಮಾ ಮತ್ತು ಮನರಂಜನೆಯಲ್ಲಿ ಮುಳುಗಿ ತೇಲುತ್ತಿದ್ದಾನೆ ಎಂಬ ಸುದ್ದಿಗಳ ಬಹಳ ದಿನಗಳಿಂದ ಕೇಳಿ ಬರುತ್ತಿವೆ.

 Sharesee more..

ಭಜರಂಗ್, ದೀಪಾಗೆ ಖೇಲ್ ರತ್ನ ಹಾಗೂ 19 ಆಟಗಾರರಿಗೆ ಅರ್ಜುನ್ ಪ್ರಶಸ್ತಿ

28 Aug 2019 | 7:31 PM

ನವದೆಹಲಿ, ಆ 28 (ಯುಎನ್ಐ)- ವಿಶ್ವದ ನಂಬರ್ ಒನ್ ಕುಸ್ತಿಪಟು ಭಜರಂಗ್ ಪುನಿಯಾ ಮತ್ತು ರಿಯೊ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ವಿಜೇತ ಪ್ಯಾರಾ ಅಥ್ಲೀಟ್ ದೀಪಾ ಮಲಿಕ್ ಅವರು ರಾಷ್ಟ್ರದ ಅತ್ಯುನ್ನತ ಕ್ರೀಡಾ ಗೌರವ 'ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಬಾಜನರಾಗಿದ್ದಾರೆ.

 Sharesee more..

ಕಮ್ಮಿನ್ಸ್ ಬದಲಿಗೆ ಕೀಮೊ ಪಾಲ್ ಗೆ ವೆಸ್ಟ್ ಇಂಡೀಸ್ ತಂಡದಲ್ಲಿ ಅವಕಾಶ

28 Aug 2019 | 5:39 PM

ನವದೆಹಲಿ, ಆ 28 (ಯುಎನ್ಐ) ಭಾರತ ವಿರುದ್ಧ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ 13 ಜನರ ತಂಡವನ್ನು ಪ್ರಕಟಿಸಿದ್ದು, ಸ್ನಾಯು ಸೆಳೆತದಿಂದ ಮೊದಲ ಟೆಸ್ಟ್ ನಿಂದ ಹೊರಗಿದ್ದ ಆಲ್ ರೌಂಡರ್ ಕೀಮೊ ಪಾಲ್ ಅವರಿಗೆ ಅವಕಾಶ ನೀಡಲಾಗಿದೆ.

 Sharesee more..

ಕೆಪಿಎಲ್: ಎಲಿಮಿನೇಟರ್ ನಲ್ಲಿ ಟೈಗರ್ಸ್ ಗೆ ಲಯನ್ಸ್ ಸವಾಲು

28 Aug 2019 | 5:24 PM

ಮೈಸೂರು, ಆ 28 (ಯುಎನ್ಐ)- ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್ ಲೀಗ್ ನ ಎಲಿಮಿನೇಟರ್ ಪಂದ್ಯ ಹುಬ್ಬಳ್ಳಿ ಟೈಗರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳ ನಡುವೆ ಗುರುವಾರ ನಡೆಯಲಿದ್ದು, ಕುತೂಹಲ ಹೆಚ್ಚಿಸಿದೆ ಹುಬ್ಬಳ್ಳಿ ಟೈಗರ್ಸ್ ಆರು ಪಂದ್ಯಗಳಿಂದ ಆರು ಅಂಕ ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

 Sharesee more..