Monday, Sep 16 2019 | Time 06:37 Hrs(IST)
Sports

ರಾಜಧಾನಿ ದೆಹಲಿಯಲ್ಲಿ "ಗ್ರೇಟ್‌ ಗಂಗಾ ರನ್‌" ಮ್ಯಾರಥಾನ್‌

15 Sep 2019 | 9:47 AM

ನವದೆಹಲಿ, ಸೆ 15 (ಯುಎನ್ಐ) ರಾಜಧಾನಿಯ ಜವಹಾರ್‌ ಲಾಲ್‌ ನೆಹರು ಕ್ರೀಡಾಂಗಣದಲ್ಲಿ ಗಂಗಾ ನದಿಯ ಬಗ್ಗೆ ಅರಿವು ಮೂಡಿಸಲು "ಗ್ರೇಟ್‌ ಗಂಗಾ ರನ್‌" ಮ್ಯಾರಥಾನ್‌ ಓಟಕ್ಕೆ ಇಂದು ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜುಜು ಹಾಗೂ ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹಸಿರು ನಿಶಾನೆ ತೋರಿದರು.

 Sharesee more..

ಲಕ್ಷ್ಯಸೇನ್‌ ಮುಡಿಗೆ ಬೆಲ್ಜಿಯಂ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಕಿರೀಟ

15 Sep 2019 | 9:23 AM

ಲ್ಯುವೆನ್, ಸೆ 15 (ಯುಎನ್‌ಐ) ಭಾರತದ ಬ್ಯಾಡ್ಮಿಂಟನ್‌ ಆಟಗಾರ ಲಕ್ಷ್ಯಸೇನ್‌ ಅವರು ಬೆಲ್ಜಿಯಂ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ 34 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್‌ ಫೈನಲ್‌ ಹಣಾಹಣಿಯಲ್ಲಿ ಪಾರಮ್ಯ ಮೆರೆದ ಭಾರತದ ಆಟಗಾರ, 21-14, 21-15 ಅಂತರದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಸ್ವೆಂಡ್ಸೆನ್ ವಿರುದ್ಧ ಗೆದ್ದು ಚಾಂಪಿಯನ್‌ ಆದರು.

 Sharesee more..

ಆ್ಯಷಸ್ ಟೆಸ್ಟ್: ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್

14 Sep 2019 | 11:13 PM

ಲಂಡನ್, ಸೆ 14 (ಯುಎನ್ಐ)- ಸ್ಟಾರ್ ಬ್ಯಾಟ್ಸ್ ಮನ್ ಗಳಾದ ಜೊ ಡೆನ್ಲಿ (94 ರನ್) ಹಾಗೂ ಆಲ್ ರೌಂಡರ್ ಬೆನ್ ಸ್ಟೋಕ್ಸ್ (67 ರನ್) ಅವರ ಭರ್ಜರಿ ಆಟದ ನೆರವಿನಿಂದ ಇಂಗ್ಲೆಂಡ್, ಆ್ಯಷಸ್ ಟೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಮೊತ್ತದತ್ತ ದಾಪು ಗಾಲು ಇಟ್ಟಿದೆ.

 Sharesee more..

ಫೈನಲ್ ಗೆ ಪಂಕಜ್ ಅಡ್ವಾಣಿ

14 Sep 2019 | 11:01 PM

ನವದೆಹಲಿ, ಸೆ 14 (ಯುಎನ್ಐ)- ಭಾರತದ ಸ್ಟಾರ್ ಸ್ನೂಕರ್ ಆಟಗಾರ ಪಂಕಜ್ ಅಡ್ವಾಣಿ ಅವರು ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಸ್ಪರ್ಧೆಯ ಪ್ರಶಸ್ತಿಯ ಸುತ್ತು ಪ್ರವೇಶಿಸಿದ್ದಾರೆ ಸೆಮಿಫೈನಲ್ಸ್ ಪಂದ್ಯದಲ್ಲಿ ಅಡ್ವಾಣಿ ಅವರು 150(114)-117 (59), 142(142)-150(150), 152(118)-122(122), 45-151(74), 152(63)-142(85), 151(123)-96(66), 151-61 ರಿಂದ ಇಂಗ್ಲೆಂಡ್ ನ ಮೈಕ್ ರಸೆಲ್ ಅವರನ್ನು ಮಣಿಸಿದರು.

 Sharesee more..

ಪ್ರೊ ಕಬಡ್ಡಿ: ಪುಣೇರಿ, ಹರಿಯಾಣಗೆ ಜಯ

14 Sep 2019 | 9:59 PM

ಪುಣೇ, ಸೆ 14 (ಯುಎನ್ಐ)- ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ನ 89ನೇ ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ 43-33 ರಿಂದ ಗುಜರಾತ್ ಫಾರ್ಚುನ್ ಜೇಂಟ್ಸ್ ತಂಡವನ್ನು ಮಣಿಸಿ, ಅಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದೆ.

 Sharesee more..

ವಿಶ್ವ ಕುಸ್ತಿ ಚಾಂಪಿಯನ್ ಶಿಪ್: ಅಮಿತ್ ಪಂಗಲ್ ಪ್ರಿ ಕ್ವಾರ್ಟರ್ ಫೈನಲ್ಸ್ ಗೆ

14 Sep 2019 | 9:38 PM

ನವದೆಹಲಿ, ಸೆ 14 (ಯುಎನ್ಐ)- ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಅಮಿತ್ ಪಂಗಲ್ ಅವರು ರಷ್ಯಾದಲ್ಲಿ ನಡೆಯುತ್ತಿರುವ ಎಐಬಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭರ್ಜರಿಯಾಗಿ ತಮ್ಮ ಅಭಿಯಾನವನ್ನು ಆರಂಭಿಸಿದ್ದು, ಶನಿವಾರ 52 ಕೆ.

 Sharesee more..

19 ವರ್ಷದೊಳಗಿನ ಏಷ್ಯಾ ಕಪ್: ಭಾರತ ಚಾಂಪಿಯನ್

14 Sep 2019 | 9:05 PM

ಕೊಲಂಬೊ, ಸೆ 14 (ಯುಎನ್ಐ)- ಯುವ ಬೌಲರ್ ಅಥರ್ವ್ ಅಂಕೋಲೇಕರ್ ಅವರ ಶಿಸ್ತು ಬದ್ಧ ದಾಳಿಯ ಪರಿಣಾಮ ಭಾರತ ಅಲ್ಪ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದ್ದು, ಇಲ್ಲಿ ನಡೆದ 19 ವರ್ಷದೊಳಗಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ನಲ್ಲಿ ಬಾಂಗ್ಲಾ ದೇಶವನ್ನು ಐದು ರನ್ ಗಳಿಂದ ಮಣಿಸಿದೆ.

 Sharesee more..

ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಪಿಲ್ ದೇವ್ ನೇಮಕ

14 Sep 2019 | 8:49 PM

ಚಂಡೀಗಢ, ಸೆಪ್ಟೆಂಬರ್ 14 (ಯುಎನ್‌ಐ) ಹರಿಯಾಣದ ಸೋನಿಪತ್ ಜಿಲ್ಲೆಯ ರಾಯ್‌ನಲ್ಲಿರುವ ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಕುಲಪತಿಯಾಗಿ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ನೇಮಕಗೊಂಡಿದ್ದಾರೆ "ಕಪಿಲ್ ದೇವ್ ಸೋನಿಪತ್‌ನ ರಾಯ್‌ನಲ್ಲಿರುವ ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಲಿದ್ದಾರೆ" ಎಂದು ಹರಿಯಾಣ ಕ್ರೀಡಾ ಸಚಿವ ಅನಿಲ್ ವಿಜ್ ಶನಿವಾರ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 Sharesee more..

ಯೋಚನೆ ಮಾಡಿ ಪೋಸ್ಟ್ ಹಾಕುವೆ: ವಿರಾಟ್

14 Sep 2019 | 7:55 PM

ಧರ್ಮಾಶಾಲಾ, ಸೆ 14 (ಯುಎನ್ಐ)- ಟ್ವೀಟರ್ ನಲ್ಲಿ ಇತ್ತೀಚಿಗೆ ಮಹೇಂದ್ರ ಸಿಂಗ್ ಧೋನಿ ಅವರ ಭಾವಚಿತ್ರ ಹಾಕಿಕೊಂಡು ಕೆಲವು ಸಾಲು ಬರೆದಿದ್ದ ವಿರಾಟ್ ಕೊಹ್ಲಿ, ಸ್ಪಷ್ಟನೆ ನೀಡಿದ್ದು, ಇನ್ನು ಮುಂದೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡುವುದಕ್ಕೂ ಮುನ್ನ ಯೋಚನೆ ಮಾಡುವೆ ಎಂದಿದ್ದಾರೆ.

 Sharesee more..

ಧರ್ಮಾಶಾಲಾದಲ್ಲಿ ಎಷ್ಟು ಟಿ-20 ಪಂದ್ಯ ನಡೆದಿವೆ ಗೊತ್ತಾ..?

14 Sep 2019 | 7:47 PM

ಧರ್ಮಶಾಲಾ, ಸೆ 14 (ಯುಎನ್ಎ) ಹಿಮಾಚಲ ಪ್ರದೇಶದ ನಿತ್ಯಹರಿದ್ವರ್ಣ ಧೌಲಾಧರ್ ಬೆಟ್ಟಗಳಲ್ಲಿರುವ ಧರ್ಮಶಾಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿರುವ ಮೊದಲ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾದೊಂದಿಗೆ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ.

 Sharesee more..

ಟಿ-20: ಹರಿಣಗಳನ್ನು ಹಣಿಯುವ ಕನಸಿನಲ್ಲಿ ವಿರಾಟ್ ಬಾಯ್ಸ್

14 Sep 2019 | 6:53 PM

ಧರ್ಮಶಾಲಾ, ಸೆ 14 (ಯುಎನ್ಐ)- ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ (ಸೆ 15)ರಿಂದ ಆರಂಭವಾಗಲಿರುವ ಟಿ-20 ಸರಣಿಯಲ್ಲಿ ಟೀಮ್ ಇಂಡಿಯಾ ಅಖಾಡಕ್ಕೆ ಇಳಿಯಲಿದ್ದು, ವಿರಾಟ್ ಪಡೆಯ ಯುವ ಆಟಗಾರರಾದ ದೀಪಕ್ ಚಹಾರ್, ಖಲೀಲ್ ಅಹ್ಮದ್ ಹಾಗೂ ನವದೀಪ್ ಸೈನಿ ಅವರ ಪ್ರದರ್ಶನದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

 Sharesee more..

ಭಾರತ ವಿರುದ್ಧ ಜಯ ಸಾಧಿಸಲಿದ್ದೇವೆ: ಡೇವಿಡ್‌ ವಾರ್ನರ್‌

14 Sep 2019 | 2:25 PM

ಧರ್ಮಾಶಾಲಾ, ಸೆ 14 (ಯುಎನ್‌ಐ) ಮೂರು ಪಂದ್ಯಗಳ ಟಿ-20 ಸರಣಿ ಆರಂಭಿಸಲು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸಜ್ಜಾಗಿವೆ ಯುವ ಆಟಗಾರರ ತಂಡದೊಂದಿಗೆ ಆಗಮಿಸಿರುವ ದಕ್ಷಿಣ ಆಫ್ರಿಕಾ ಕಠಿಣ ಸ್ಪರ್ಧೆ ನೀಡಿ ಜಯ ಸಾಧಿಸುವುದನ್ನು ಎದುರು ನೋಡುತ್ತಿದೆ ಎಂದು ಹರಿಣಗಳ ಬ್ಯಾಟ್ಸ್‌ಮನ್‌ ಡೇವಿಡ್‌ ಮಿಲ್ಲರ್ ತಿಳಿಸಿದ್ದಾರೆ.

 Sharesee more..

ಎಟಿಪಿ ಕಪ್‌ ಆಡಲು ಗ್ರೀನ್‌ ಸಿಗ್ನಲ್‌ ಕೊಟ್ಟ ರೋಜರ್‌, ರಫ, ಜೊಕೊ

14 Sep 2019 | 1:48 PM

ಲಂಡನ್‌, ಸೆ 14 (ಯುಎನ್‌ಐ) ಮುಂದಿನ ವರ್ಷ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯುವ ಎಟಿಪಿ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಆಡಲು ವಿಶ್ವ ಸ್ಟಾರ್‌ ಆಟಗಾರರಾದ ರೋಜರ್‌ ಫೆಡರರ್‌, ರಫೆಲ್‌ ನಡಾಲ್‌ ಹಾಗೂ ನೊವಾಕ್‌ ಜೊಕೊವಿಚ್‌ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆಂದು ಟೂರ್ನಿಯ ಆಯೋಜಕರು ಶನಿವಾರ ತಿಳಿಸಿದ್ದಾರೆ.

 Sharesee more..

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಸಾಧ್ಯವಾದ ಗುರಿ ಮುಟ್ಟಲು ರೋಹಿತ್‌ ನೆರವಾಗಬಲ್ಲರು: ಬಾಂಗರ್‌

14 Sep 2019 | 11:55 AM

ನವದೆಹಲಿ, ಸೆ 14 (ಯುಎನ್‌ಐ) ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲೇ ಹಿಂದೆಂದೂ ಮುಟ್ಟಿರದ ಅತಿ ದೊಡ್ಡ ಮೊತ್ತದ ಗುರಿ ತಲುಪಲು ತಂಡಕ್ಕೆ ಹಿಟ್‌ಮನ್‌ ರೋಹಿತ್‌ ಶರ್ಮಾ ನೆರವಾಗಲಿದ್ದಾರೆಂದು ಟೀಮ್‌ ಇಂಡಿಯಾ ಮಾಜಿ ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಾಂಗರ್‌ ಬಲವಾಗಿ ನಂಬಿದ್ದಾರೆ.

 Sharesee more..

ಇಂಜಾಮಾಮ್‌ ದಾಖಲೆ ಮುರಿದ ಆಸೀಸ್‌ ರನ್‌ ಮಿಷನ್‌ ಸ್ಟೀವನ್‌ ಸ್ಮಿತ್‌

14 Sep 2019 | 11:10 AM

ಲಂಡನ್‌, ಸೆ 14 (ಯುಎನ್‌ಐ) ಇಂಗ್ಲೆಂಡ್‌ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಆ್ಯಶಸ್‌ ಟೆಸ್ಟ್ ಸರಣಿಯಲ್ಲಿ ರನ್‌ ಹೊಳೆ ಹರಿಸುತ್ತಿರುವ ಆಸ್ಟ್ರೇಲಿಯಾದ ರನ್‌ ಮಿಷನ್‌ ಸ್ಟೀವನ್‌ ಸ್ಮಿತ್‌ ಅವರು ದೀರ್ಘ ಅವಧಿಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದ್ದಾರೆ.

 Sharesee more..