Friday, Feb 28 2020 | Time 09:40 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports

ರಣಜಿ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಡಿಆರ್ ಎಸ್

25 Feb 2020 | 6:23 PM

ನವದೆಹಲಿ, ಫೆ 25 (ಯುಎನ್ಐ)- ದೇಶಿಯ ಕ್ರಿಕೆಟ್ ಟೂರ್ನಿ ರಣಜಿ ಟ್ರೋಫಿಯ ಸೆಮಿಫೈನಲ್ಸ್ ಮತ್ತು ಅಂತಿಮ ಪಂದ್ಯಗಳಲ್ಲಿ ಅಂಪೈರ್ ನಿರ್ಧಾರದ ಬಗ್ಗೆ ಮೇಲ್ಮನವಿ ಸಲ್ಲಿಸುವ (ಡಿಆರ್ಎಸ್) ಅವಕಾಶವನ್ನು ಮೊದಲ ಬಾರಿಗೆ ಬಳಸಲಾಗುತ್ತದೆ.

 Sharesee more..

ಕೊರೋನಾ ವೈರಸ್ ಹಿನ್ನೆಲೆ: ವಿಶ್ವ ತಂಡ ಟೆಬಲ್ ಟೆನಿಸ್ ಸ್ಥಗಿತ

25 Feb 2020 | 6:23 PM

ನವದೆಹಲಿ, ಫೆ 25 (ಯುಎನ್ಐ)- ಕೊರೋನಾ ವೈರಸ್‌ನಿಂದಾಗಿ ದಕ್ಷಿಣ ಕೊರಿಯಾದ ಬುಸಾನ್ ಸಿಟಿಯಲ್ಲಿ ಮಾರ್ಚ್ 22 ರಿಂದ ನಡೆಯಲಿರುವ ವಿಶ್ವ ತಂಡ ಟೇಬಲ್ ಟೆನಿಸ್ ಚಾಂಪಿಯನ್‌ಶಿಪ್ ಅನ್ನು ಮುಂದೂಡುವುದಾಗಿ ಅಂತಾರಾಷ್ಟ್ರೀಯ ಟೇಬಲ್ ಟೆನಿಸ್ ಫೆಡರೇಶನ್ (ಐಟಿಟಿಎಫ್) ಮಂಗಳವಾರ ಪ್ರಕಟಿಸಿದೆ.

 Sharesee more..
ಮೋದಿ  ಪ್ರಧಾನಿಯಾಗಿರುವರೆಗೆ  ಭಾರತ- ಪಾಕ್  ನಡುವೆ ಕ್ರಿಕೆಟ್  ಪಂದ್ಯ ನಡೆಯುವುದಿಲ್ಲ; ಆಫ್ರಿದಿ

ಮೋದಿ ಪ್ರಧಾನಿಯಾಗಿರುವರೆಗೆ ಭಾರತ- ಪಾಕ್ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ; ಆಫ್ರಿದಿ

25 Feb 2020 | 6:05 PM

ಕರಾಚಿ, ಫೆ ೨೫(ಯುಎನ್‌ಐ) ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮತ್ತೊಮ್ಮೆ ಸಂಚಲನ ಹೇಳಿಕೆ ನೀಡಿದ್ದಾರೆ.

 Sharesee more..

ಫೆ.27 ರಿಂದ 29ರವರೆಗೆ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ತರಬೇತಿ ಶಿಬಿರ

25 Feb 2020 | 5:03 PM

ನವದೆಹಲಿ, ಫೆ 25 (ಯುಎನ್ಐ) ಗುವಾಹಟಿಯಲ್ಲಿ ಎರಡು ಐಪಿಎಲ್ ಪಂದ್ಯಗಳನ್ನು ಆಯೋಜಿಸುವ ರಾಜಸ್ಥಾನ್ ರಾಯಲ್ಸ್ ನಿರ್ಧಾರದ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ರಾಜಸ್ಥಾನ್ ಹೈಕೋರ್ಟ್ ವಿಚಾರಣೆ ನಡೆಸಲಿದೆ ಇದರ ನಡುವೆ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೂರು ದಿನಗಳ ತರಬೇತಿ ಶಿಬಿರವನ್ನು ರಾಜಸ್ಥಾನ ರಾಯಲ್ಸ್ ತಂಡ ನಡೆಸುವ ಮೂಲಕ ಇಲ್ಲಿನ ಪರಿಸ್ಥಿತಿಗಳಿಗೆ ಹೊದಿಕೊಳ್ಳಲು ಮುಂದಾಗಿದೆ.

 Sharesee more..

ಏಕೈಕ ಟೆಸ್ಟ್ ಪಂದ್ಯ: ಬಾಂಗ್ಲಾದೇಶಕ್ಕೆ ಇನಿಂಗ್ಸ್, 106 ರನ್ ಗಳ ಭರ್ಜರಿ ಜಯ

25 Feb 2020 | 3:13 PM

ಢಾಕಾ, ಫೆ 25 (ಯುಎನ್ಐ) ದ್ವಿತೀಯ ಇನಿಂಗ್ಸ್‌ನಲ್ಲಿ ಜಿಂಬಾಬ್ವೆ ತಂಡದ ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ ಬಾಂಗ್ಲಾದೇಶ ಸ್ಪಿನ್ನರ್ ಗಳು ಆತಿಥೇಯರಿಗೆ ಇನಿಂಗ್ಸ್ ಹಾಗೂ 106 ರನ್ ಗೆಲುವು ತಂದುಕೊಟ್ಟರು ಮಂಗಳವಾರ ಇಲ್ಲಿನ ಶೇರ್ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಎರಡು ವಿಕೆಟ್ ಕಳೆದುಕೊಂಡು 9 ರನ್ ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಜಿಂಬಾಬ್ವೆ ತಂಡ, ಬಹುಬೇಗ ಕೆವಿನ್ ಕಸುಝಾ(10) ಹಾಗೂ ಬ್ರೆಂಡನ್ ಟೇಲರ್ (17) ಅವರ ವಿಕೆಟ್ ಗಳನ್ನು ಕಳೆದುಕೊಂಡಿತು.

 Sharesee more..

ಭಯರಹಿತ ಕ್ರಿಕೆಟ್ ಆಡುವಂತೆ ಶಫಾಲಿ ವರ್ಮಾಗೆ ಲೈಸನ್ಸ್ ಕೊಟ್ಟಿದ್ದೇವೆ: ಶಿಖಾ ಪಾಂಡೆ

25 Feb 2020 | 12:39 PM

ಪರ್ತ್, ಫೆ 25 (ಯುಎನ್ಐ) ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ 16ರ ಪ್ರಾಯದ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ನಿಂದ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ ಭಾರತ ತಂಡದ ಹಿರಿಯ ವೇಗಿ ಶಿಖಾ ಪಾಂಡೆ ಅವರು ಶಫಾಲಿ ವರ್ಮಾ ಅವರ ಭಯರಹಿತ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ.

 Sharesee more..

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶಿಷ್ಠ ದಾಖಲೆ ಬರೆದ ಮುಷ್ಫಿಕರ್ ರಹೀಮ್

25 Feb 2020 | 11:42 AM

ಢಾಕಾ, ಫೆ 25 (ಯುಎನ್‌ಐ) ಬಾಂಗ್ಲಾದೇಶದ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಸಾಧನೆಗೆ ಹಿರಿಯ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್‌ ಮುಷ್ಫಿಕರ್ ರಹೀಮ್ ಭಾಜನರಾಗಿದ್ದಾರೆ ಇಲ್ಲಿನ ಶೆರ್ ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಂಬಾಬ್ವೆ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದ ಮೂರನೇ ದಿನ ಮುಷ್ಫಿಕರ್ ಈ ದಾಖಲೆ ಮಾಡಿದರು.

 Sharesee more..

ದುಬೈ ಚಾಂಪಿಯನ್‌ಶಿಪ್ : ಎರಡನೇ ಸುತ್ತಿಗೆ ಜೊಕೊವಿಚ್

25 Feb 2020 | 11:22 AM

ದುಬೈ, ಫೆ 25 (ಯುಎನ್‌ಐ) ವಿಶ್ವದ ಅಗ್ರ ಶ್ರೇಯಾಂಕಿತ ಸರ್ಬಿಯಾದ ನೊವಾಕ್ ಜೊಕೊವಿಚ್ ಅವರು ಇಲ್ಲಿ ನಡೆಯುತ್ತಿರುವ ದುಬೈ ಚಾಂಪಿಯನ್‌ಶಿಪ್ ಟೆನಿಸ್ ಟೂರ್ನಿಯಲ್ಲಿ ಎರಡನೇ ಸುತ್ತಿಗೆ ಪ್ರವೇಶ ಮಾಡಿದ್ದಾರೆ ಸರಿಯಾಗಿ ಒಂದು ಗಂಟೆ ಕಾಲ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ ಪಾರಮ್ಯ ಮೆರೆದ ಜೊಕೊವಿಚ್ 6-1, 6-2 ಅಂತರದಲ್ಲಿ ಟುನೀಶಿಯನ್ ವೈಲ್ಡ್ ಕಾರ್ಡ್ ವಿಜೇತ ಮಲೆಕ್ ಜಾಝರಿ ವಿರುದ್ಧ ಗೆದ್ದು ಶುಭಾರಂಭ ಕಂಡಿದ್ದಾರೆ.

 Sharesee more..

ಮುಂದಿನ ಪಂದ್ಯದಲ್ಲಿ ಸ್ಮೃತಿ ಕಣಕ್ಕೆ ಇಳಿಯುವ ಸಾಧ್ಯತೆ: ಹರ್ಮನ್ ಪ್ರೀತ್

24 Feb 2020 | 10:20 PM

ಪರ್ಥ್, ಫೆ 24 (ಯುಎನ್ಐ)- ಗಾಯದಿಂದ ಚೇತರಿಸಿಕೊಂಡಿರುವ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಮುಂದಿನ ಪಂದ್ಯಗಳಲ್ಲಿ ತಂಡಕ್ಕೆ ಸೇರುವ ಸಾಧ್ಯತೆ ಇದೆ ಎಂದು ಟೀಮ್ ಇಂಡಿಯಾದ ನಾಯಕಿ ಹರ್ಮನ್ ಪ್ರೀತ್ ಕೌರ್ ತಿಳಿಸಿದ್ದಾರೆ.

 Sharesee more..

ಗೌರವ ಕಾಯ್ದುಕೊಳ್ಳಲು ನಾರ್ಥ್ ಈಸ್ಟ್ ಗೆ ಅವಕಾಶ

24 Feb 2020 | 9:36 PM

ಗುವಾಹಟಿ, ಫೆ 24 (ಯುಎನ್ಐ)- ಸೆಮಿಫೈನಲ್ ತಲಪುವಲ್ಲಿ ವಿಫಲವಾಗಿರುವ ನಾರ್ಥ್ ಈಸ್ ಯುನೈಟೆಡ್ ಹಾಗೂ ಈಗಾಗಲೇ ಸೆಮಿಫೈನಲ್ಸ್ ತಲುಪಿರುವ ಚೆನ್ನೈಯಿನ್ ಎಫ್ ಸಿ ತಂಡಗಳ ನಡುವೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ನೀಗ್ ಹಂತದ ಕೊನೆಯ ಪಂದ್ಯ ನಡೆಯಲಿದೆ.

 Sharesee more..

ಮಹಿಳಾ ಟಿ 20 ವಿಶ್ವಕಪ್‌: ಶ್ರೀಲಂಕಾ ಮಣಿಸಿ ಶುಭಾರಂಭ ಮಾಡಿದ ಆಸೀಸ್

24 Feb 2020 | 9:35 PM

ಪರ್ಥ್, ಫೆ 24 (ಯುಎನ್ಐ)- ಸೋಮವಾರ ನಡೆದ ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ನ ಗ್ರೂಪ್ ಎ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಐದು ವಿಕೆಟ್ ಗಳಿಂದ ಶ್ರೀಲಂಕಾವನ್ನು ಮಣಿಸಿತು.

 Sharesee more..
ಮಹಿಳಾ ವಿಶ್ವಕಪ್ ಟಿ-20: ಶಫಾಲಿ, ಪೂನಂ ಮಿಂಚು- ಭಾರತಕ್ಕೆ ಎರಡನೇ ಜಯ

ಮಹಿಳಾ ವಿಶ್ವಕಪ್ ಟಿ-20: ಶಫಾಲಿ, ಪೂನಂ ಮಿಂಚು- ಭಾರತಕ್ಕೆ ಎರಡನೇ ಜಯ

24 Feb 2020 | 8:50 PM

ಪರ್ಥ್, ಫೆ.24 (ಯುಎನ್ಐ)- ಇಲ್ಲಿ ನಡೆಯುತ್ತಿರುವ ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸಂಘಟಿತ ಆಟದ ಪ್ರದರ್ಶನ ಮುಂದುವರಿಸಿರುವ ಭಾರತ ವನಿತೆಯರ ತಂಡ “ಎ” ಗುಂಪಿನ ಪಂದ್ಯದಲ್ಲಿ 18 ರನ್ ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿತು.

 Sharesee more..

ಮುಷ್ಫೀಕರ್ ದ್ವಿಶತಕ, ಮೊಮಿನುಲ್ ಶತಕ, ಬಾಂಗ್ಲಾ ಬೃಹತ್ ಮೊತ್ತ

24 Feb 2020 | 7:29 PM

ಢಾಕಾ, ಫೆ 24 (ಯುಎನ್ಐ)- ಭರವಸೆಯ ಆಟಗಾರ ಮುಷ್ಫೀಕರ್ ರಹೀಮ್ (ಅಜೇಯ 203) ಹಾಗೂ ಮೊಮಿನುಲ್ ಹಕ್ (132) ಭರ್ಜರಿ ಆಟದ ನೆರವಿನಿಂದ ಏಕೈಕ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ, ಜಿಂಬಾಬ್ವೆ ವಿರುದ್ಧ ಬೃಹತ್ ಮೊತ್ತ ಕಲೆ ಹಾಕಿದೆ.

 Sharesee more..

ಆಸೀಸ್ ಮಣಿಸಿದ ದಕ್ಷಿಣ ಆಫ್ರಿಕಾ ಸರಣಿ ಸಮ

24 Feb 2020 | 7:28 PM

ಪೋರ್ಟ್ ಎಲ್ಜಿಬೇತ್, ಫೆ 24 (ಯುಎನ್ಐ)- ನಾಯಕ ಕ್ವಿಂಟನ್ ಡಿ ಕಾಕ್ (70) ಅರ್ಧಶತಕ ಇನ್ನಿಂಗ್ ಮತ್ತು ವೇಗದ ಬೌಲರ್ ಲುಂಗಿ ಗಿಡಿ (41 ಕ್ಕೆ 3) ಅದ್ಭುತ ಬೌಲಿಂಗ್ ನೆರವಿನಿಂದ ಭಾನುವಾರ ನಡೆದ ಎರಡನೇ ಟಿ 20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 12 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-1 ಸಮನಬಲ ಸಾಧಿಸಿದೆ.

 Sharesee more..

ಸೆಮೀಸ್ ಗೆ ಸೌರಾಷ್ಟ್ರ, ಬಂಗಾಳ

24 Feb 2020 | 6:42 PM

ನವದೆಹಲಿ, ಫೆ 24 (ಯುಎನ್ಐ)- 86ನೇ ರಣಜಿ ಟೂರ್ನಿಯ ಸೆಮಿಫೈನಲ್ಸ್ ಪಂದ್ಯಕ್ಕೆ ಸೌರಾಷ್ಟ್ರ ಹಾಗೂ ಬಂಗಾಳ ತಂಡಗಳು ಮೊದಲ ಮುನ್ನಡೆಯ ಆಧಾರದ ಮೇಲೆ ಅರ್ಹತೆ ಪಡೆದಿವೆ.

 Sharesee more..