Monday, Jun 1 2020 | Time 02:42 Hrs(IST)
National Share

ಅಗತ್ಯ ಮೂಲಸೌಕರ್ಯಗಳ ಪುನರ್‍ ಸ್ಥಾಪನೆಗೆ ಕೊಲ್ಕತಾ ಮತ್ತು ನೆರೆಯ ಜಿಲ್ಲೆಗಳಲ್ಲಿ ಸೇನೆ ನಿಯೋಜನೆ

ಕೋಲ್ಕತಾ, ಮೇ 23 (ಯುಎನ್‌ಐ) ಅಂಫಾನ್ ಚಂಡಮಾರುತದಿಂದ ಉಂಟಾದ ಹಾನಿಯ ಹಿನ್ನೆಲೆಯಲ್ಲಿ ಅಗತ್ಯ ಚಂಡಮಾರುತ ನಂತರ ಮೂಲಸೌಕರ್ಯಗಳ ಪುನರ್‍ ಸ್ಥಾಪನೆ ಕಾರ್ಯಗಳನ್ನು ಕೈಗೊಳ್ಳಲು ಪಶ್ಚಿಮ ಬಂಗಾಳ ಸರ್ಕಾರದ ಮನವಿ ಯಂತೆ ಭಾರತೀಯ ಸೇನೆ, ಕೋಲ್ಕತಾ ನಗರ ಆಡಳಿತಕ್ಕೆ ಸಹಾಯ ಮಾಡಲು ಶನಿವಾರ ಮೂರು ತುಕಡಿಗಳನ್ನು ಕಳುಹಿಸಿದೆ.
ರಸ್ತೆಗಳಲ್ಲಿ ಉರುಳಿಬಿದ್ದ ಮರಗಳನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಮತ್ತು ವಿದ್ಯುತ್ ಪೂರೈಕೆ ಸಹಜ ಸ್ಥಿತಿಗೆ ತರಲು ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ಪಶ್ಚಿಮ ಬಂಗಾಳ ಗೃಹ ಇಲಾಖೆಯು ಕೇಂದ್ರಕ್ಕೆ ಪತ್ರ ಬರೆದು, ರಾಜ್ಯದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಪುನರ್ ಸ್ಥಾಪಿಸಲು ಸೇನೆಯ ನೆರವನ್ನು ಕೋರಿತ್ತು.
ಪರಿಹಾರ ಕಾರ್ಯಗಳಿಗೆ ಎನ್‍ಡಿಆರ್‍ಎಫ್‍ ಮತ್ತು ಎಸ್‍ಡಿಎಆರ್‍ ಎಫ್‍ ತಂಡಗಳನ್ನು ನಿಯೋಜಿಸಲಾಗಿದೆ.ರೈಲ್ವೆ, ಬಂದರು ಮತ್ತು ಖಾಸಗಿ ವಲಯಗಳಿಗೂ ಅಗತ್ಯ ತಂಡಗಳನ್ನು ಮತ್ತು ಸಾಧನಗಳನ್ನು ಪೂರೈಸಲು ವಿನಂತಿಸಲಾಗಿದೆ ಎಂದು ಪಶ್ಚಿಮ ಬಂಗಾಳ ಗೃಹ ಇಲಾಖೆ ಹೇಳಿದೆ.
ಈ ಮಧ್ಯೆ, ರಾಜ್ಯಕ್ಕೆ ನೆರವು ನೀಡಲು ಹೆಚ್ಚುವರಿ 10 ತಂಡಗಳನ್ನು ನಿಯೋಜಿಸುತ್ತಿರುವುದಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಹೇಳಿದೆ. ರಾಜ್ಯದಲ್ಲಿ ಸದ್ಯ 26 ಎನ್‍ಡಿಆರ್‍ಎಫ್‍ ತಂಡಗಳು ಚಂಡಮಾರುತ ಪೀಡಿತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಯುಎನ್‍ಐ ಎಸ್‍ಎಲ್‍ಎಸ್ 2120
More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..