Tuesday, Jul 23 2019 | Time 12:52 Hrs(IST)
 • ಶೀಘ್ರ ವಿಶ್ವಾಸಮತ ನಿರ್ಣಯ ಕೋರಿ ಸಲ್ಲಿಸಿದ್ದ ಅರ್ಜಿ ನಾಳೆಗೆ ಮುಂದೂಡಿದ ಸುಪ್ರೀಂಕೋರ್ಟ್
 • ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ಮಹತ್ವದ ಬದಲಾವಣೆ: ರಾಯ್
 • ವಿಧಾನಸಭೆಯಲ್ಲಿ ಗದ್ದಲ, ಮೂವರು ಟಿಡಿಪಿ ಸದಸ್ಯರ ಅಮಾನತು
 • ಕಾಶ್ಮೀರ ಕುರಿತು ಟ್ರಂಪ್ ಹೇಳಿಕೆ: ರಾಜ್ಯಸಭೆಯಲ್ಲಿ ವಿಪಕ್ಷ ಗದ್ದಲ, ಕಲಾಪ ಮುಂದೂಡಿಕೆ
 • ಜಪಾನ್‌ ಓಪನ್‌: ಎರಡನೇ ಸುತ್ತಿಗೆ ಪ್ರವೇಶಿಸಿದ ಅಶ್ವಿನಿ-ರಂಕಿರೆಡ್ಡಿ ಜೋಡಿ
 • ಕಾಶ್ಮೀರ ಸಂಧಾನ ವಿಷಯ : ಭಾರತ ತಲೆಬಾಗಲು ಸಾಧ್ಯವಿಲ್ಲ ಅಧೀರ್
 • ನಮ್ಮ ಮೌನ ವಿಜಯದ ಸಂಕೇತ: ಆರ್ ಅಶೋಕ್
 • ವಿಧಾನಸಭೆ ಕಲಾಪ ಆರಂಭದಲ್ಲಿ ಆಡಳಿತ ಪಕ್ಷಗಳ ಸದಸ್ಯರ ಗೈರು: ಸ್ಪೀಕರ್ ಅಸಮಾಧಾನ
 • ಜಮ್ಮುವಿನಿಂದ ಅಮರನಾಥಕ್ಕೆ ಹೊರಟ 3060 ಯಾತ್ರಾರ್ಥಿಗಳು
 • ಪುಲ್ವಾಮದಲ್ಲಿ ಕಾಶ್ಮೀರಿ ಉದ್ಯಮಿಯ ಮನೆ ಮೇಲೆ ಎನ್‌ಐಎ ದಾಳಿ
 • ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ
 • ಅಯೋಧ್ಯೆಯಲ್ಲಿ ವಿಶ್ವದಲ್ಲೇ ಅತಿದೊಡ್ಡ ರಾಮನ ಪ್ರತಿಮೆ ನಿರ್ಮಾಣ: ಯೋಗಿ ಆದಿತ್ಯನಾಥ್
 • ಅಮರನಾಥ ಯಾತ್ರೆಗೆ ಹೊರಟ ಹೊಸ ತಂಡ; ಇದುವರೆಗೆ 2 86 ಲಕ್ಷ ಯಾತ್ರಾರ್ಥಿಗಳಿಂದ ದರ್ಶನ
 • ರೊನಾಲ್ಡೊ ಅತ್ಯಾಚಾರದ ಆರೋಪ ಎದುರಿಸುವುದಿಲ್ಲ: ಯುಎಸ್ ಪ್ರಾಸಿಕ್ಯೂಟರ್‌
 • ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳು: ರೇಣುಕಾಚಾರ್ಯ
Health -Lifestyle Share

ಅಮೆರಿಕದ ಹಸಿರು ಕಟ್ಟಡ ಪರಿಷತ್ತಿನ ‘ಲೀಡ್ ‘ ಯೋಜನೆ: ಭಾರತದ ಪ್ರಮುಖ 10 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 2ನೇ ಶ್ರೇಯಾಂಕ

ಬೆಂಗಳೂರು, ಜೂ 19 [ಯುಎನ್ಐ] ಅಮೆರಿಕದ ಹಸಿರು ಕಟ್ಟಡ ಪರಿಷತ್ತು (ಯುಎಸ್ ಜಿಬಿಸಿ) ಹಾಗೂ ‘ಲೀಡ್’ (ಇಂಧನ ಹಾಗೂ ಪರಿಸರದ ವಿನ್ಯಾಸ) ಸಂಸ್ಥೆಗಳು ವಿಶ್ವದ ಅತ್ಯಂತ ಪ್ರಮುಖ ಹಸಿರು ಕಟ್ಟಡ ಬಳಕೆ ಕುರಿತು ಭಾರತದ ಹತ್ತು ಪ್ರಮುಖ ರಾಜ್ಯಗಳ ರೇಟಿಂಗ್ ವ್ಯವಸ್ಥೆ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ, ಮೂರನೇ ಸ್ಥಾನದಲ್ಲಿ ತಮಿಳುನಾಡು, ಬಳಿಕ ಹರಿಯಾಣ, ಉತ್ತರಪ್ರದೇಶ, ತೆಲಂಗಾಣ, ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ತಾನ ರಾಜ್ಯಗಳಿವೆ.
ಈ ಕುರಿತು ವಿವರಣೆ ನೀಡಿರುವ ಯುಎಸ್ ಜಿಬಿಸಿ ಹಾಗೂ ಗ್ರೀನ್ ಬ್ಯುಸಿನೆಸ್ ಸರ್ಟಿಫಿಕೇಷನ್ ಐಎನ್ ಸಿ (ಜಿಬಿಸಿಐ) ಆಗ್ನೇಯ ಏಷಿಯಾ ಹಾಗೂ ಮಧ್ಯಪೂರ್ವ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಕೃಷ್ಣನ್ ಪದ್ಮನಾಭನ್, ‘ಭಾರತ ಹಸಿರು ಕಟ್ಟಡ ವಲಯದಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿ ವರ್ಷ ನಿರಂತರ ಪ್ರಗತಿ ಕಾಣುತ್ತಿದೆ’ ಎಂದು ಹೇಳಿದ್ದಾರೆ.
‘ಹಲವು ಸರ್ಕಾರಿ ಏಜೆನ್ಸಿಗಳು ಹಾಗೂ ರಾಜ್ಯ ಸರ್ಕಾರಗಳು ಲೀಡ್ ಯೋಜನೆ ಅಡಿಯಲ್ಲಿ ಹಸಿರು ಕಟ್ಟಡ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡಲು ಆರಂಭಿಸಿವೆ. ವ್ಯಾಪಾರ ವಲಯ, ಶಿಕ್ಷಣ ಸಂಸ್ಥೆಗಳು ಹಾಗೂ ದೇಶದ ಎಲ್ಲಾ ವಲಯದ ಲಾಭರಹಿತಗಳು ಸಂಸ್ಥೆಗಳು (ಎನ್ ಜಿಒ) ಲೀಡ್ ಗೆ ಬದ್ಧವಾಗಿವೆ. ಈ ವಲಯ ಆರೋಗ್ಯ, ಪರಿಸರ ಸ್ನೇಹಿ ಕಟ್ಟಡಗಳು ಹಾಗೂ ಸಮುದಾಯದ ಜನರ ಜೀವನ ಗುಣಮಟ್ಟ ಸುಧಾರಣೆಯತ್ತ ಕೆಲಸ ಮಾಡುವ ಬಗ್ಗೆ ಆಸಕ್ತಿ ತೋರುತ್ತಿವೆ ಎಂದಿದ್ದಾರೆ.
ಕಟ್ಟಡಗಳ ಒಳಾಂಗಣದಲ್ಲಿ ಸ್ವಚ್ಛ ಗಾಳಿ ಒದಗಿಸುವ ಮೂಲಕ ಜನರಿಗೆ ಆರೋಗ್ಯ ರಕ್ಷಣೆ ಜತೆಗೆ ಕುಟುಂಬಗಳ ಹಣ ಉಳಿಕೆಗೆ ಆದ್ಯತೆ ನೀಡಲಾಗಿದೆ. ಈ ಕಟ್ಟಡಗಳು ಸಾಂಪ್ರದಾಯಿಕ ಕಟ್ಟಡಗಳಿಗೆ ಹೋಲಿಸಿದರೆ, ಇವುಗಳು ನಿರ್ಮಾಣ ಹಂತದಲ್ಲಿ ಮಾತ್ರವಲ್ಲದೆ, ಅದನ್ನು ಬಳಕೆ ಮಾಡುವಾಗ ಹಾಗೂ ಕಟ್ಟಡದ ಸಂಪೂರ್ಣ ಜೀವಿತಾವಧಿಯಲ್ಲಿ ಕಡಿಮೆ ಮಾಲಿನ್ಯ ಹೊರ ಸೂಸುತ್ತವೆ ಎಂದು ಹೇಳಿದ್ದಾರೆ.
ಯುಎನ್ಐ ವಿಎನ್ 1925
More News
ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

15 Jul 2019 | 8:08 PM

ನವದೆಹಲಿ, ಜುಲೈ 15 (ಯುಎನ್‌ಐ) ಗರ್ಭಧಾರಣೆ ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇದೆಯೇ ಎಂಬ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

 Sharesee more..
ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

14 Jul 2019 | 2:28 PM

ನವದೆಹಲಿ, ಜುಲೈ 14 (ಯುಎನ್ಐ) ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ಸಹಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

 Sharesee more..