Friday, Feb 28 2020 | Time 09:45 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
National Share

ಆಕ್ಸ್‌ ಫರ್ಡ್ ನಿಘಂಟು ಸೇರಿದ ಆಧಾರ್, ಚಾವಲ್, ಶಾದಿ

ನವದೆಹಲಿ, ಜ 24 (ಯುಎನ್ಐ) ಆಧಾರ್, ಚಾವಲ್, ಡಬ್ಬಾ, ಹರತಾಲ್, ಶಾದಿ ಸೇರಿದಂತೆ 26 ಹೊಸ ಭಾರತೀಯ ಮೂಲದ ಪದಗಳು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನ ಹೊಸ ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.

ಶುಕ್ರವಾರ ಬಿಡುಗಡೆಯಾದ ಆಕ್ಸ್‌ ಫರ್ಡ್ ಅಡ್ವಾನ್ಸ್ಡ್ ಲರ್ನರ್ಸ್‌ ಡಿಕ್ಷನರಿಯ 10ನೇ ಆವೃತ್ತಿಯಲ್ಲಿ 384 ಭಾರತೀಯ ಮೂಲದ ಪದಗಳಿವೆ. ಅಲ್ಲದೆ ಚಾಟ್‌ಬೊಟ್, ಫೇಕ್‌ನ್ಯೂಸ್ ಹಾಗೂ ಮೈಕ್ರೊಪ್ಲಾಸ್ಟಿಕ್‌ನಂತಹ ಸಾವಿರಕ್ಕೂ ಅಧಿಕ ಇತ್ತೀಚಿನ ದಿನಗಳಲ್ಲಿ ಬಳಸಲ್ಪಡುವ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ.
ದಿನಗಳೆದಂತೆ ಆಂಗ್ಲಭಾಷೆಯಲ್ಲಿ ಆಗಿರುವ ಬದಲಾವಣೆಗಳು ಹಾಗೂ ಭಾಷಾ ವಿಕಸನವನ್ನು ಗಮನದಲ್ಲಿರಿಸಿ ಹೊಸ ಆವೃತ್ತಿಯಲ್ಲಿ ಪದಗಳ ಸೇರ್ಪಡೆ ಮಾಡಲಾಗಿದೆ ಎಂದು ಆಕ್ಸ್‌ ಫರ್ಡ್ ಯೂನಿವರ್ಸಿಟಿ ಪ್ರೆಸ್ (ಓಯುಪಿ) ತಿಳಿಸಿದೆ.
ನಿಘಂಟಿನಲ್ಲಿ ಸ್ಥಾನ ಪಡೆದಿರುವ ಭಾರತೀಯ ಮೂಲದ ಇತರ ಪದಗಳೆಂದರೆ ಬಸ್‌ಸ್ಟಾಂಡ್, ಡೀಮ್ಡ್ ಯೂನಿವರ್ಸಿಟಿ, ಎಫ್‌ಐಆರ್, ನಾನ್‌ವೆಜ್, ರಿಡ್ರೆಸ್ಸಲ್, ಟೆಂಪೊ, ಟ್ಯೂಬ್‌ಲೈಟ್, ವೆಜ್, ವಿಡಿಯೋಗ್ರಾಫ್ ಇತ್ಯಾದಿ. ಕರೆಂಟ್ (ವಿದ್ಯುತ್), ಲೂಟರ್, ಲೂಟಿಂಗ್ ಪದಗಳು ಆನ್‌ಲೈನ್ ಆವೃತ್ತಿಯಲ್ಲಿ ಸ್ಥಾನ ಪಡೆದಿವೆ.

ಆಕ್ಸ್‌ ಫರ್ಡ್ ಆಂಗ್ಲ ನಿಘಂಟಿನ ನೂತನ ಆವೃತ್ತಿಯಲ್ಲಿ 26 ಹೊಸ ಭಾರತೀಯ ಮೂಲದ ಪದಗಳಿದ್ದು, ಅವುಗಳಲ್ಲಿ 22 ಪದಗಳು ಮುದ್ರಿತ ಆವೃತ್ತಿಯಲ್ಲಿವೆ. ಉಳಿದ ನಾಲ್ಕು ನೂತನ ಪದಗಳು ಆನ್‌ಲೈನ್ ಆವೃತ್ತಿಯಲ್ಲಿ ಲಭ್ಯವಿದೆ ಎಂದು ಓಯುಪಿಯ ಶಿಕ್ಷಣ ವಿಭಾಗದ ಆಡಳಿತ ನಿರ್ದೇಶಕಿ ಫಾತಿಮಾ ದಾಡಾ ತಿಳಿಸಿದ್ದಾರೆ.
ಯುಎನ್ಐ ಜಿಎಸ್ಆರ್ 2230