Monday, Sep 16 2019 | Time 06:14 Hrs(IST)
International Share

ಇಂಡೋನೇಷ್ಯಾದಲ್ಲಿ 7.5 ತೀವ್ರತೆಯ ಭೂಕಂಪನ

ಹಾಂಗ್‌ಕಾಂಗ್, ಜೂ 24 (ಕ್ಸಿನ್ಹುವಾ) ಇಂಡೋನೇಷ್ಯಾದ ಸೌಮ್ಲಾಕಿಯಾದ ಡಬ್ಲ್ಯುಎನ್‌ಡಬ್ಲ್ಯುದಿಂದ 286 ಕಿ.ಮೀ. ದೂರದಲ್ಲಿ ಸೋಮವಾರ ಅಂತಾರಾಷ್ಟ್ರೀಯ ಕಾಲಮಾನ 2.53ರ ವೇಳೆಗೆ 7.5 ತೀವ್ರತೆಯ ಭೂಕಂಪನ ಉಂಟಾಗಿದೆ ಎಂದು ಅಮೆರಿಕ ಭೂವಿಜ್ಞಾನ ಸಮೀಕ್ಷೆ ತಿಳಿಸಿದೆ.

ಭೂಕಂಪನದ ಕೇಂದ್ರಬಿಂದು ಆರಂಭದಲ್ಲಿ 222 ಕಿ.ಮೀ ಆಳದಲ್ಲಿ, 6.6 ಡಿಗ್ರಿ ದಕ್ಷಿಣ ಅಕ್ಷಾಂಶ ಮತ್ತು 129.1 ಡಿಗ್ರಿ ಪೂರ್ವ ರೇಖಾಂಶದಲ್ಲಿ ದಾಖಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಭೂಕಂಪನದಿಂದ ಸಾವು-ನೋವು ಸಂಭವಿಸಿರುವ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ. ಕಂಪನದ ಅನುಭವವಾಗುತ್ತಿದ್ದಂತೆ ಜನರು ಮನೆ, ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.
ಯುಎನ್ಐ ಎಎಚ್ 921