Tuesday, Jul 23 2019 | Time 00:23 Hrs(IST)
National Share

ಎಲ್ಲೆಡೆ ಆಷಾಢ ಏಕಾದಶಿ : ಚಾತುರ್ಮಾಸ್ಯ ವ್ರತಾರಂಭ, ಶುಭ ಕೋರಿದ ಪ್ರಧಾನಿ

ಎಲ್ಲೆಡೆ ಆಷಾಢ ಏಕಾದಶಿ : ಚಾತುರ್ಮಾಸ್ಯ ವ್ರತಾರಂಭ, ಶುಭ ಕೋರಿದ ಪ್ರಧಾನಿ
ಎಲ್ಲೆಡೆ ಆಷಾಢ ಏಕಾದಶಿ : ಚಾತುರ್ಮಾಸ್ಯ ವ್ರತಾರಂಭ, ಶುಭ ಕೋರಿದ ಪ್ರಧಾನಿ

ನವದೆಹಲಿ/ಬೆಂಗಳೂರು, ಜುಲೈ 12 (ಯುಎನ್ಐ) ಇಂದು ಆಷಾಢ ಏಕಾದಶಿ ಮಹಾವಿಷ್ಣುವಿನ ಪ್ರೀತ್ಯರ್ಥ ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ ಈ ದಿನ ಶಯನಿ ಏಕಾದಶಿ, ಮಹಾ ಏಕಾದಶಿ, ಪ್ರಥಮ ಏಕಾದಶಿ, ಪದ್ಮ ಏಕಾದಶಿ, ಹರಿಶಯನಿ, ದೇವಶಯನಿ ಏಕಾದಶಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುತ್ತದೆ ಪ್ರಧಾನಿ ನರೇಂದ್ರ ಮೋದಿಯವರು ಏಕಾದಶಿ ಅಂಗವಾಗಿ ದೇಶದ ಜನತೆಗೆ ಶುಭ ಕೋರಿದ್ದು, ಈ ದಿನದ ಮಹತ್ವ ಸಾರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ

ಹಿಂದೂ ಪಂಚಾಂಗದ ಪ್ರಕಾರ ಆಷಾಢ ಮಾಸದ 11ನೇ ದಿನವನ್ನು ಪ್ರಥಮ ಏಕಾದಶಿಯನ್ನಾಗಿ ಆಚರಿಸಲಾಗುತ್ತದೆ ಈ ದಿನ ಮಹಾವಿಷ್ಣುವು ನಿದ್ರೆಗೆ ಜಾರಿದರೆ ಪುನಃ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆ ಎಂದು ಪ್ರಾಜ್ಞರು ಹೇಳುತ್ತಾರೆ.

ಆಷಾಢ ಏಕಾದಶಿಯಂದು ವೈಷ್ಣವ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ ಭಕ್ತಾದಿಗಳಲ್ಲಿ ಹಲವು ಅನ್ನ ಸೇವಿಸದೆ ಉಪವಾಸವಿರುತ್ತಾರೆ ಹೊಸದಾಗಿ ಮದುವೆಯಾದ ಹೆಂಗಸರು ಗೋಪದ್ಮ ವ್ರತವನ್ನು ಆರಂಭಿಸಿ, ಉತ್ಥಾನ ದ್ವಾದಶಿಯಂದು ಕೊನೆಗೊಳಿಸುತ್ತಾರೆ. ಸಾಧು ಸಂತರು ಈ ನಾಲ್ಕು ಮಾಸಗಳಲ್ಲಿ, ಮೊಸರು, ತರಕಾರಿ . . ಹೀಗೆ ಒಂದೊಂದು ಮಾಸ ಒಂದೊಂದು ಬಗೆಯ ಆಹಾರ ಸೇವನೆಯನ್ನು ನಿಲ್ಲಿಸುವ ವ್ರತ ಕೈಗೊಳ್ಳುತ್ತಾರೆ.ಪಾಂಡುರಂಗನ ಭಕ್ತರು ಪಂಡರಾಪುರಕ್ಕೆ ತೆರಳುವ ಕಾರಣ ಮಹಾರಾಷ್ಟ್ರ ಸರ್ಕಾರ ನಾಂದೇಡ್ ನಿಂದ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ.

ಯುಎನ್ಐ ಎಸ್ಎ ಆರ್ ಕೆ 1201