Sunday, Aug 18 2019 | Time 04:59 Hrs(IST)
Sports Share

ಎಸ್‌ಸಿ-ಎಸ್‌ಟಿ ಹಿಂಬಡ್ತಿ ರದ್ಧುಗೊಳಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಮೇ 15 (ಯುಎನ್‌ಐ) ಶಾಸನ‌ ಸಭೆಯ ವಿಧೇಯಕವನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿದ್ದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ನೌಕರರ ಹಿಂಬಡ್ತಿ ರದ್ಧುಗೊಳಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ಎಸ್‌ಸಿ-ಎಸ್‌ಟಿ ಸರ್ಕಾರಿ ನೌಕರರನ್ನು ಹಿಂಬಡ್ತಿ ರದ್ಧುಗೊಳಿಸುವಂತೆ ಕಳೆದ ಮೇ. 10 ರಂದು ಸುಪ್ರೀಂ ಕೋರ್ಟ್ ಮಾನ್ಯ ಮಾಡಿತ್ತು. ಜತೆಗೆ, ವಿಧೇಯಕದನ್ವಯ ತತ್ಪರಿಣಾಮವಾಗಿ ಜೇಷ್ಠತೆ ವಿಸ್ತರಿಸಲು ಸೂಚಿಸಿತ್ತು. ಅದರನ್ವಯ ಎಲ್ಲ ಎಸ್‌ಸಿ -ಎಸ್ಟಿ ನೌಕರರ ಹಿಂಬಡ್ತಿ ರದ್ದು ಮಾಡಿದ ರಾಜ್ಯ ಸರ್ಕಾರ, ನೌಕರರ ಮೊದಲಿನ ಸೇವಾ ಜೇಷ್ಠತೆ ವಿಸ್ತರಿಸಲು ಆದೇಶ ನೀಡಿದೆ.
ಇನ್ನೂ 30 ದಿನಗಳಲ್ಲಿ ಸೇವಾ ಜೇಷ್ಠತೆ ವಿಸ್ತರಿಸಲು ಗಡುವು ನೀಡಿದೆ. 27-02-2019ರ ಆದೇಶದಂತೆ ಮುಂಬಡ್ತಿ ಪಟ್ಟಿ‌ ಸಿದ್ಧಪಡಿಸಬೇಕು. ಮೂವತ್ತು ದಿನಗಳಲ್ಲಿ ನೌಕರರಿಗೆ ಅವರ ಮೂಲ ಹುದ್ದೆಗೆ ನಿಯೋಜಿಸಬೇಕು ಎಂದು ರಾಜ್ಯ ಸರ್ಕಾರ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಯುಎನ್‌ಐ ಆರ್‌ಕೆ ಕೆಎಸ್‌ವಿ 2303