Friday, Feb 28 2020 | Time 07:41 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Sports Share

ಐಎಸ್ಎಲ್: ಅಂಕ ಹಂಚಿಕೊಂಡ ಮುಂಬೈ, ಹೈದರಾಬಾದ್

ಹೈದರಾಬಾದ್, ಜ.24 (ಯುಎನ್ಐ)- ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಸಿಟಿ ಹಾಗೂ ಹೈದರಾಬಾದ್ ಎಫ್.ಸಿ ತಂಡಗಳ ನಡುವಣ ಪಂದ್ಯ ಡ್ರಾದಲ್ಲಿ ಅಂತ್ಯಕೊಂಡಿದೆ. ಕೊನೆಯ ಕ್ಷಣದಲ್ಲಿ ಆತಿಥೇಯ ತಂಡ ಬಾರಿಸಿದ ಗೋಲಿನ ಸಹಾಯದಿಂದ ಅಂಕಗಳನ್ನು ಹಂಚಿಕೊಂಡಿತು.
ಮುಂಬೈ ಸಿಟಿ ಆಡಿದ 14 ಪಂದ್ಯಗಳಲ್ಲಿ 5 ಜಯ, 5 ಸೋಲು, 4 ಡ್ರಾ ಸಾಧಿಸಿದ್ದು, 20 ಅಂಕ ಗಳಿಂದ ಐದನೇ ಸ್ಥಾನದಲ್ಲಿದೆ. ಹೈದರಾಬಾದ್ ಎಫ್.ಸಿ 14 ಪಂದ್ಯಗಳಲ್ಲಿ 6 ಅಂಕಳೊಂದಿಗೆ 10 ನೇ ಸ್ಥಾನದಲ್ಲಿದೆ.
ಮೊದಲಾವಧಿಯಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದವು. ಪರಿಣಾಮ ಎರಡೂ ತಂಡದ ಗೋಲ್ ಕೀಪರ್ ಗಳು ಗೋಲುಗಳು ನೀಡದಂತೆ ತಡೆದರು. ಆದರೆ, ಈ ಅವಧಿಯ ಕೊನೆಯ ಕ್ಷಣದಲ್ಲಿ ಮುಂಬೈ ಸಿಟಿ ಮೊದಲ ಗೋಲಿನ ನಗೆ ಬೀರಿತು. ಪರಿಣಾಮ ಮುಂಬೈ 1-0 ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಹೈದರಾಬಾದ್ ಗೋಲು ಬಾರಿಸಿ ಅಬ್ಬರಿಸುವ ಪ್ಲಾನ್ ಮಾಡಿಕೊಂಡಿತು. ಆದರೆ, ಮುಂಬೈ, ಆತಿಥೇಯ ತಂಡದ ಆಸೆಗೆ ಪೆಟ್ಟು ನೀಡಿತು. ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡಿದ ಹೈದರಾಬಾದ್ ಕೊನೆಯ ಕ್ಷಣದಲ್ಲಿ ಗೋಲು ಬಾರಿಸಿ ಅಂಕವನ್ನು ಹಂಚಿಕೊಂಡಿತು.
ಯುಎನ್ಐ ವಿಎನ್ಎಲ್ 2303
More News
ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

ಮತ್ತೊಂದು ದಾಖಲೆಯ ಸನಿಹದಲ್ಲಿ ಇಶಾಂತ್ ಶರ್ಮಾ

27 Feb 2020 | 8:25 PM

ನವದೆಹಲಿ, ಫೆ.27 (ಯುಎನ್ಐ)- ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡು ಮುಖಭಂಗ ಅನುಭವಿಸಿದೆ. ಈ ಪಂದ್ಯದಲ್ಲಿ ಸ್ಟಾರ್ ಬೌಲರ್ ಇಶಾಂತ್ ಶರ್ಮಾ ಬಿಗುವಿನ ದಾಳಿ ನಡೆಸಿ ಗಮನ ಸೆಳೆದಿದ್ದರು. ಶನಿವಾರದಿಂದ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಮತ್ತೊಂದು ಮೈಲುಗಲ್ಲು ತಲುಪುವ ಕನಸಿನಲ್ಲಿದ್ದಾರೆ.

 Sharesee more..

ತಂಡದ ಲಯ ಮುಂದುವರೆಸುವ ಅವಶ್ಯಕತೆ ಇದೆ: ತಾನಿಯಾ

27 Feb 2020 | 7:26 PM

 Sharesee more..

ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ ಜೊಕೊವಿಚ್

27 Feb 2020 | 7:08 PM

 Sharesee more..

ದ ಆಫ್ರಿಕಾ ತಂಡಕ್ಕೆ ಶಾಕ್ ನೀಡಿದ ಆಸೀಸ್

27 Feb 2020 | 6:27 PM

 Sharesee more..