Tuesday, Nov 19 2019 | Time 05:04 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
International Share

ಕೆನಡಾ ವಿಮಾನ ತುರ್ತುಭೂಸ್ಪರ್ಶ: 37 ಪ್ರಯಾಣಿಕರಿಗೆ ಗಾಯ

ಒಟ್ಟಾವ, ಜು 12 (ಯುಎನ್ಐ) ವಾಯು ಪ್ರಕ್ಷುಬ್ಧತೆ ಉಂಟಾದ ಹಿನ್ನೆಲೆಯಲ್ಲಿ ವ್ಯಾಂಕೋವರ್‌ನಿಂದ ಸಿಡ್ನಿಗೆ ಹೊರಟಿದ್ದ ಏರ್ ಕೆನಡಾ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ಕನಿಷ್ಠ 27 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.
ವ್ಯಾಂಕೋವರ್‌ನಿಂದ ಸಿಡ್ನಿಗೆ ಹೊರಟಿದ್ದ ಬೋಯಿಂಗ್ 777-200 ವಿಮಾನದಲ್ಲಿ 269 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಇದ್ದರು ಎಂದು ಏರ್ ಕೆನಡಾ ವಕ್ತಾರ ಪೀಟರ್ ಫಿಟ್ಜ್‌ ಪ್ಯಾಟ್ರಿಕ್ ತಿಳಿಸಿದ್ದಾರೆ.
ವಿಮಾನ ಸ್ಥಳೀಯ ಕಾಲಮಾನ 645ರ ವೇಳೆಗೆ ಹೊನೊಲುಲು ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಹವಾಯಿ ನ್ಯೂಸ್ ನೌ ವೆಬ್‌ಸೈಟ್ ವರದಿ ಮಾಡಿದೆ.
ವಿಮಾನ ಹಾರಾಟ ನಡೆಸುತ್ತಿದ್ದಾಗ ಗಾಳಿಯ ಪ್ರಕ್ಷುಬ್ಧತೆ ಉಂಟಾದ ಪರಿಣಾಮ ವಿಮಾನವನ್ನು ಹೊನೊಲುಲು ಕಡೆಗೆ ತಿರುಗಿಸಲಾಯಿತು.
ಹೊನೊಲುಲುವಿನಿಂದ ನೈರುತ್ಯಕ್ಕೆ 600 ಮೈಲು (966 ಕಿಲೋಮೀಟರ್) 36,000 ಅಡಿ ಎತ್ತರದಲ್ಲಿ (10,973 ಮೀಟರ್) ಈ ಪ್ರಕ್ಷುಬ್ಧತೆ ಸಂಭವಿಸಿದೆ ಎಂದು ಅಮೆರಿಕ ಒಕ್ಕೂಟ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಕ್ತಾರ ಇಯಾನ್ ಗ್ರೆಗರ್ ಹೇಳಿದ್ದಾರೆ.
21 ಮಂದಿಗೆ ಸಣ್ಣಪುಟ್ಟ ಮತ್ತು ಒಂಭತ್ತು ಮಂದಿಗೆ ಗಂಭೀರ ಗಾಯಗಳಾಗಿವೆ. ಆದರೆ ಏಳು ಪ್ರಯಾಣಿಕರು ಚಿಕಿತ್ಸೆಗೆ ನಿರಾಕರಿಸಿದ್ದಾರೆ ಎಂದು ಹವಾಯಿ ತುರ್ತು ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡೀನ್ ಒಕಾನ್ನೆಲ್ ತಿಳಿಸಿದ್ದಾರೆ.
ಯುಎನ್ಐ ಎಎಚ್ ಆರ್ ಕೆ 1050