Sunday, Mar 29 2020 | Time 00:48 Hrs(IST)
International Share

ಕೊರೊನಾ ವೈರಸ್ ನಿಗ್ರಹಕ್ಕೆ ಚೀನಾದಿಂದ ಸಂಶೋಧಕರ ತಂಡ ರಚನೆ

ಬೀಜಿಂಗ್, ಜ 24(ಯುಎನ್ಐ) ಚೀನಾದ ವುಹಾನ್ ಪ್ರಾಂತ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೊನಾ ವೈರಸ್ ನಿಯಂತ್ರಿಸಲು ಹಾಗೂ ತಡೆಗಟ್ಟಲು 14 ತಜ್ಞರನ್ನು ಒಳಗೊಂಡ ರಾಷ್ಟ್ರೀಯ ಸಂಶೋಧನಾ ತಂಡವನ್ನು ರಚಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ತುರ್ತು ವೈಜ್ಞಾನಿಕ ಯೋಜನೆಯ ಭಾಗವಾಗಿರುವ ವೈರಸ್ ನಿಗ್ರಹ ಸಂಶೋಧನಾ ತಂಡವನ್ನು ರಾಷ್ಟ್ರೀಯ ಆರೋಗ್ಯ ಆಯೋಗ ಮತ್ತು ಇತರ ವಿಭಾಗಗಳ ಸಹಯೋಗದೊಂದಿಗೆ ಜಂಟಿಯಾಗಿ ರೂಪಿಸಲಾಗಿದೆ ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿಮಾಡಿದೆ.
ಈ ಯೋಜನೆಯು ಸೋಂಕು ಪತ್ತೆ, ಹರಡುವಿಕೆ, ಪತ್ತೆ ವಿಧಾನಗಳು, ಜೀನೋಮ್ ವಿಕಸನ ಮತ್ತು ಲಸಿಕೆ ಅಭಿವೃದ್ಧಿ ಸೇರಿದಂತೆ 10 ಸಂಶೋಧನಾ ಅಂಶಗಳ ಕುರಿತು ವೈಜ್ಞಾನಿಕ ಅಂಶಗಳಬಗ್ಗೆ ಗಮನಹರಿಸಲಿದೆ.
ಉಸಿರಾಟದ ವಿಜ್ಞಾನಿ ಝೋನಾಂಗ್ ನನ್ಶಾನ್ ಅವರನ್ನು ಸಂಶೋಧನಾ ತಂಡದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಚೀನೀ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ಶಿಕ್ಷಣ ತಜ್ಞರಾಗಿರುವ ನನ್ಶಾನ್ 2003ರಲ್ಲಿ ಚೀನಾದಲ್ಲಿ ಏಕಾಏಕಿ ಎದುರಾದ ತೀವ್ರ ಉಸಿರಾಟದ ಸಿಂಡ್ರೋಮ್ (ಎಸ್‌ಎ ಆರ್ ) ವಿರುದ್ದದ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಯುಎನ್ಐ ಕೆವಿಆರ್ 1206
More News

ಬಾಂಗ್ಲಾದೇಶದಲ್ಲಿ ರಸ್ತೆ ಅಪಘಾತ : ಆರು ಸಾವು

28 Mar 2020 | 10:10 PM

 Sharesee more..
ಕರೋನ ಸೋಂಕು ಹಾವಳಿ, ಜಗತ್ತಿನಲ್ಲೇ  ಅಮೆರಿಕ ಟಾಪ್  !!

ಕರೋನ ಸೋಂಕು ಹಾವಳಿ, ಜಗತ್ತಿನಲ್ಲೇ ಅಮೆರಿಕ ಟಾಪ್ !!

28 Mar 2020 | 7:48 PM

ವಾಷಿಂಗ್ಟನ್, ಮಾರ್ಚ್ 28 (ಯುಎನ್‌ಐ) ಅಮೆರಿಕದಲ್ಲಿ ಕರೋನ ಹಾವಳಿ ಚೀನಾಕ್ಕಿಂತಲು ಹೆಚ್ಚಾಗಿದೆ ಈಗ 100,000 ಕ್ಕೂ ಹೆಚ್ಚು ( ಲಕ್ಷಕ್ಕೂ ಮಿಗಿಲಾದ) ಕೋವಿಡ್ -19 ಪ್ರಕರಣಗಳು ದೃ ಡಪಟ್ಟಿವೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ಶನಿವಾರ ಪ್ರಕಟಿಸಿದೆ.

 Sharesee more..
ಚೀನಾ – ಯೂರೋಪ್ ಸರಕು ಸಾಗಣೆ ರೈಲು ಸೇವೆ ಪುನರಾರಂಭ

ಚೀನಾ – ಯೂರೋಪ್ ಸರಕು ಸಾಗಣೆ ರೈಲು ಸೇವೆ ಪುನರಾರಂಭ

28 Mar 2020 | 6:59 PM

ವುಹಾನ್, ಮಾರ್ಚ್ 28 (ಯುಎನ್ಐ) ಚೀನಾ ಯೂರೋಪ್ ನಡುವೆ ಸರಕು ಸಾಗಣೆ ರೈಲು ಸೇವೆ ಪುನರಾರಂಭವಾಗಿದೆ. ಔಷಧ ಸೇರಿದಂತೆ ವೈದ್ಯಕೀಯ ಸಲಕರಣಗಳನ್ನು ಹೊತ್ತ ಸರಕು ಸಾಗಣೆ ರೈಲು ಚೀನಾದ ಹುಬೈ ಪ್ರಾಂತ್ಯದ ರಾಜಧಾನಿ ವುಹಾನ್ ನಿಂದ ಶನಿವಾರ ಯೂರೋಪ್ ನತ್ತ ಹೊರಟಿದೆ.

 Sharesee more..
ಸ್ಪೇನ್‍ನಲ್ಲಿ ಕರೋನವೈರಸ್ ಮರಣಮೃದಂಗ: ಒಂದೇ ದಿನದಲ್ಲಿ 832 ಸಾವು

ಸ್ಪೇನ್‍ನಲ್ಲಿ ಕರೋನವೈರಸ್ ಮರಣಮೃದಂಗ: ಒಂದೇ ದಿನದಲ್ಲಿ 832 ಸಾವು

28 Mar 2020 | 6:24 PM

ಮ್ಯಾಡ್ರಿಡ್, ಮಾರ್ಚ್ 28 (ಯುಎನ್‌ಐ) ಸ್ಪೇನ್‍ನಲ್ಲಿ ಕೇವಲ 24 ತಾಸಿನಲ್ಲಿ 832 ಹೆಚ್ಚು ಜನರು ಮಾರಕ ಕರೋನವೈರಸ್ (ಕೊವಿದ್‍-19) ಸೋಂಕಿಗೆ ಬಲಿಯಾಗಿದ್ದು ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,690 ಕ್ಕೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

 Sharesee more..

ಪಾಕಿಸ್ತಾನಕ್ಕೆ ವೈದ್ಯಕೀಯ ತಂಡ ಕಳಿಸಿದ ಚೀನಾ

28 Mar 2020 | 5:50 PM

 Sharesee more..