Monday, Jun 1 2020 | Time 01:03 Hrs(IST)
Health -Lifestyle Share

ಕೋವಿಡ್ 19 : ರಷ್ಯಾದಲ್ಲಿ 335,882 ಕ್ಕೆ ಹೆಚ್ಚಳ

ಮಾಸ್ಕೋ, ಮೇ 23 (ಕ್ಸಿನ್ಹುವಾ) ರಷ್ಯಾ ಕಳೆದ 24 ಗಂಟೆಗಳಲ್ಲಿ 9,434 ಹೊಸ ಕೋವಿಡ್ -19 ಪ್ರಕರಣಗಳನ್ನು ದೃಢಪಡಿಸಿದ್ದು, ದೇಶದ ಒಟ್ಟು ಸೋಂಕಿನ ಸಂಖ್ಯೆಯನ್ನು 335,882 ಕ್ಕೆ ಏರಿಸಿದೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸತತ ಎಂಟು ದಿನಗಳವರೆಗೆ ಒಂದೇ ದಿನದ ಹೆಚ್ಚಳ 10,000 ಕ್ಕಿಂತ ಕಡಿಮೆಯಾಗಿದೆ ಎಂದು ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.
ಸಾವಿನ ಸಂಖ್ಯೆ 139 ರಷ್ಟು ಏರಿಕೆಯಾಗಿ 3,388 ಕ್ಕೆ ತಲುಪಿದ್ದರೆ, ಕಳೆದ 24 ಗಂಟೆಗಳಲ್ಲಿ 8,111 ಸೇರಿದಂತೆ 107,936 ಜನರು ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ತಿಳಿಸಿದೆ.

ದೇಶದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಮಾಸ್ಕೋ ಕಳೆದ 24 ಗಂಟೆಗಳಲ್ಲಿ 3,190 ಹೊಸ ಪ್ರಕರಣಗಳನ್ನು ದೃಢಪಡಿಸಿದ್ದು, ಒಟ್ಟು 161,397 ಕ್ಕೆ ತಲುಪಿದೆ.

ಸುಮಾರು 276,000 ಜನರು ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ ರಷ್ಯಾದ ಗ್ರಾಹಕ ಹಕ್ಕುಗಳು ಮತ್ತು ಮಾನವ ಯೋಗಕ್ಷೇಮ ಕಾವಲು ಸಮಿತಿ ಸ್ಪೊಟ್ರೆಬ್ನಾಡ್ಜೋರ್ ಶನಿವಾರ ತಿಳಿಸಿದೆ.
ಕೋವಿಡ್ 19 ಪತ್ತೆಗಾಗಿ 8.4 ದಶಲಕ್ಷಕ್ಕೂ ಹೆಚ್ಚು ಪರೀಕ್ಷೆಗಳನ್ನು ದೇಶಾದ್ಯಂತ ನಡೆಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 276,000 ಪರೀಕ್ಷೆಗಳು ಸೇರಿವೆ ಎಂದು ಹೇಳಿದೆ.
ಯುಎನ್‍ಐ ಎಸ್‍ಎ ವಿಎನ್ 1457