Saturday, May 25 2019 | Time 05:27 Hrs(IST)
National Share

ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಸತತ ಮೂರನೇ ದಿನ ವಿಚಾರಣೆ

ನವದೆಹಲಿ, ಮೇ 14(ಯುಎನ್ಐ) - ವಿಡಿಯೋಕಾನ್ ಸಾಲ ನೀಡಿಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಮಾಜಿ ಐಸಿಐಸಿಐ ಬ್ಯಾಂಕ್ ಅಧ್ಯಕ್ಷೆ ಚಂದಾ ಕೊಚ್ಚಾರ್ ಹಾಗೂ ಅವರ ಪತಿ ದೀಪಕ್ ಕೊಚ್ಚಾರ್ ಅವರನ್ನು ಮೂರನೆಯ ದಿನವಾದ ಬುಧವಾರವೂ ತೀವ್ರ ವಿಚಾರಣೆಗೆ ಒಳಪಡಿಸಿತ್ತು.
ಮಂಗಳವಾರ ತನಿಖಾ ಸಂಸ್ಥೆಯ ಎದುರು ಹಾಜರಾಗಿದ್ದ ಕೊಚ್ಚಾರ್ ದಂಪತಿಗಳನ್ನು ಬುಧವಾರವೂ ಹಾಜರಾಗುವಂತೆ ಸೂಚಿಸಲಾಗಿತ್ತು. ಸೋಮವಾರ ಸುಮಾರು 8 ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು.
ವಿಡಿಯೋಕಾನ್ ಗುಂಪಿನ ಉದ್ಯಮಗಳಿಗೆ ಐಸಿಐಸಿಐ ಬ್ಯಾಂಕ್ ನಿಂದ 3,250 ಕೋಟಿ ರೂಪಾಯಿ ಸಾಲ ಮಂಜೂರಾತಿಯಲ್ಲಿ ನಡೆದ ಅವ್ಯವಹಾರ, ವಂಚನೆ ಸಂಬಂಧ ವಿಚಾರಣೆಗಾಗಿ ಬುಧವಾರ ಮಧ್ಯಾಹ್ನ ಕೊಚ್ಚಾರ್ ದಂಪತಿ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದರು.
ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆಯಡಿ ಇಬ್ಬರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಯಿತು.
ಯಾವ ನಿರ್ದಿಷ್ಟ ವಿಷಯದ ಬಗ್ಗೆ ದಂಪತಿಯನ್ನು ವಿಚಾರಣೆಗೊಳಪಡಿಸಲಾಯಿತು ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ಸಾಲ ವಂಚನೆ ಹಾಗೂ ವಿಡಿಯೋಕಾನ್ ಗುಂಪಿನ ಉದ್ಯಮಗಳಿಗೆ ಸಾಲ ವಿಸ್ತರಣೆಯಲ್ಲಿ ದಂಪತಿ ವಹಿಸಿದ್ದ ಪಾತ್ರ ಕುರಿತು ಪ್ರಶ್ನಿಸಿರಬಹುದು ಎಂದು ಹೇಳಲಾಗಿದೆ.
2009 ರಿಂದ 2011ರ ಅವಧಿಯಲ್ಲಿ ವಿಡಿಯೋಕಾನ್ ಗುಂಪಿಗೆ ಮಂಜೂರು ಮಾಡಲಾದ 3,250 ಕೋಟಿ ರೂಪಾಯಿ ಸಾಲ ಪ್ರಕರಣ ಹಾಗೂ ವಿಡಿಯೋ ಕಾನ್ ಗುಂಪಿನ ಮಾಲೀಕ ವೇಣುಗೋಪಾಲ್, ದೀಪಕ್ ಕೊಚ್ಚಾರ್ ಅವರ ನ್ಯೂ ಪವರ್ ರಿನ್ಯೂವೆಬಲ್ಸ್ ನಲ್ಲಿ, ತಮ್ಮ ಸುಪ್ರೀಂ ಎನರ್ಜಿ ಮೂಲಕ ಹೂಡಿಕೆ ಮಾಡಿದ್ದರು. ಆ ಸಂದರ್ಭದಲ್ಲಿ ಚಂದಾ ಕೊಚ್ಚಾರ್ ಐಸಿಐಸಿಐ ಬ್ಯಾಂಕ್ ಮುಖ್ಯಸ್ಥೆಯಾಗಿದ್ದರು.
ಈ ಪ್ರಕರಣದಲ್ಲಿ, ಚಂದಾ ಹಾಗೂ ದೀಪಕ್ ಕೊಚ್ಚಾರ್ ಅವರನ್ನು ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ಗಂಭೀರ ವಂಚನೆ ತನಿಖಾ ಸಂಸ್ಥೆ( ಎಸ್ ಎಫ್ ಐ ಓ) ತನಿಖೆಗೊಳಪಡಿಸಿದೆ.
ಹೇಳಿಕೆ ದಾಖಲಿಸಿಕೊಳ್ಳಲು ಮೇ 5 ರಂದು ತನ್ನ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಚಂದಾ ಕೊಚ್ಚಾರ್ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಅವರು ಅಂದು ಹಾಜರಾಗಿರಲಿಲ್ಲ.
ಕಳೆದ ಮಾರ್ಚ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಚಂದಾ ಹಾಗೂ ದೀಪಕ್ ಕೊಚ್ಚಾರ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಿ ಶೋಧನೆ ನಡೆಸಿ, ವೇಣುಗೋಪಾಲ್ ಅವರ ಉಪಸ್ಥಿತಿಯಲ್ಲಿ ದಂಪತಿಯನ್ನು ವಿಚಾರಣೆಗೊಳಪಡಿಸಿತ್ತು.
ಪ್ರಕರಣ ಸಂಬಂಧ ಮಾರ್ಚ್ 1 ರಂದು ಸಹ ತನಿಖಾ ಸಂಸ್ಥೆ ದಾಳಿ ನಡೆಸಿದ ನಂತರ ಮುಂಬೈನ ಇಡಿ ವಲಯ ಕಚೇರಿಯಲ್ಲಿ ಕೊಚ್ಚಾರ್ ದಂಪತಿಯನ್ನು ಪ್ರಶ್ನೆಗೊಳಪಡಿಸಲಾಗಿತ್ತು.
ಯುಎನ್ಐ ಕೆವಿಆರ್ ಜಿಎಸ್ಆರ್ 2152
More News
ಪ್ರಧಾನಿ ಮೋದಿ ಅಭೂತಪೂರ್ವ  ಗೆಲುವು: ಆಸ್ಟ್ರೇಲಿಯಾ ಪ್ರಧಾನಿ, ಭೂತಾನ್ ದೊರೆ ಅಭಿನಂದನೆ

ಪ್ರಧಾನಿ ಮೋದಿ ಅಭೂತಪೂರ್ವ ಗೆಲುವು: ಆಸ್ಟ್ರೇಲಿಯಾ ಪ್ರಧಾನಿ, ಭೂತಾನ್ ದೊರೆ ಅಭಿನಂದನೆ

24 May 2019 | 6:03 PM

ನವದೆಹಲಿ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಭೂತಾನ್ ದೊರೆ ಜಿಗ್ಮಲ್ ಖೇಸರ್, ನಾಮ್ಜಿಲ್ ವಾಂಗ್ಜುಕ್ ಅಭಿನಂದಿಸಿದ್ದಾರೆ.

 Sharesee more..
ಅಡ್ವಾಣಿ, ಜೋಷಿ ಭೇಟಿಯಾದ ಮೋದಿ-ಶಾ ಜೋಡಿ

ಅಡ್ವಾಣಿ, ಜೋಷಿ ಭೇಟಿಯಾದ ಮೋದಿ-ಶಾ ಜೋಡಿ

24 May 2019 | 1:55 PM

ನವದೆಹಲಿ, ಮೇ 24 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿಯ ಹಿರಿಯ ನಾಯಕ ಹಾಗೂ ತಮ್ಮ ರಾಜಕೀಯ ಗುರು ಎಲ್‍ ಕೆ ಅಡ್ವಾಣಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

 Sharesee more..
ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ

ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ

24 May 2019 | 1:48 PM

ನವದೆಹಲಿ, ಮೇ 24 (ಯುಎನ್ಐ) ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳು ಇಂದು ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು.

 Sharesee more..

ಟ್ವಿಟರ್ ನಲ್ಲಿ 'ಚೌಕಿದಾರ್'ಪದ ತೆಗೆದ ಮೋದಿ

23 May 2019 | 7:14 PM

 Sharesee more..