Friday, Feb 28 2020 | Time 07:04 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Health -Lifestyle Share

ಚೀನಾ: ಕರೋನವೈರಸ್ ಪ್ರಕರಣಗಳ ಸಖ್ಯೆ 571ಕ್ಕೆ ಏರಿಕೆ

ಬೀಜಿಂಗ್, ಜ 23 (ಸ್ಪುಟ್ನಿಕ್) ಚೀನಾದಲ್ಲಿ ಹೊಸ ರೀತಿಯ ಕರೋನವೈರಸ್ ಪ್ರಕರಣಗಳ ಸಂಖ್ಯೆ 571 ಕ್ಕೆ ಏರಿದೆ. 25 ನಗರಗಳು ಮತ್ತು ಪ್ರಾಂತ್ಯಗಳಲ್ಲಿ ಈ ವೈರಸ್ ವರದಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಗುರುವಾರ ತಿಳಿಸಿದೆ.
"ರೋಗದ 571 ಪ್ರಕರಣಗಳು ದೃಢಪಟ್ಟಿದೆ, 95 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ ಮತ್ತು 17 ಮಂದಿ ಸಾವನ್ನಪ್ಪಿದ್ದಾರೆ" ಎಂದು ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
ಚೀನಾದ 13 ಪ್ರಾಂತ್ಯಗಳಲ್ಲಿ 250 ಕ್ಕೂ ಹೆಚ್ಚು ಹೊಸ ಶಂಕಿತ ಪ್ರಕರಣಗಳು ದಾಖಲಾಗಿವೆ.
ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ ಮತ್ತು ಥೈಲ್ಯಾಂಡ್ನಲ್ಲಿ ಹೊಸ ಕರೋನವೈರಸ್ ಪ್ರಕರಣಗಳು ದಾಖಲಾಗಿವೆ. ಚೀನಾದ ನಗರವಾದ ಹುಬೈ ಪ್ರಾಂತ್ಯದಲ್ಲಿಯೂ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ.

ಹೊಸ ಕರೋನವೈರಸ್ ಏಕಾಏಕಿ ಏರಿಕೆಯನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ಘೋಷಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಹೇಳಿದೆ.
ಯುಎನ್‍ಐ ಎಸ್‍ಎ ವಿಎನ್ 0735