Monday, Jul 22 2019 | Time 20:10 Hrs(IST)
 • ಸೋನಿಯಾ, ರಾಹುಲ್‌ ಕುರಿತು ಟೀಕೆ: ಸತ್‌ ಪಾಲ್‌ ವಿರುದ್ಧ ಬಾಲಿ ಆಕ್ರೋಶ
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
Health -Lifestyle Share

ಜಂಕ್ ಫುಡ್ ಸೇವನೆ, ಧೂಮಪಾನ ಸ್ತೀರೋಗ ಸಂಬಂಧಿ ಕ್ಯಾನ್ಸರ್ ಗೆ ಕಾರಣವಾದೀತು, ಎಚ್ಚರ!

ನವದೆಹಲಿ, ಜುಲೈ 04 (ಯುಎನ್ಐ) ಇಂದಿನ ದಿನಮಾನದಲ್ಲಿ ಎಲ್ಲೆಡೆ ಜಂಕ್ ಫುಡ್ ಸೇವನೆ, ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗೆಯ ಅಭ್ಯಾಸ, ಬದಲಾದ ಜೀವನಶೈಲಿ ಸ್ತೀರೋಗ ಸಂಬಂಧಿ ಕ್ಯಾನ್ಸರ್ ಗೆ ಕಾರಣವಾದೀತು ಎಂದು ಫೋರ್ಟಿಸ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ಸರ್ಜಿಕಲ್ ಆಂಕೋಲಾಜಿ ನಿರ್ದೇಶಕ ಡಾ ಕಪಿಲ್ ಕುಮಾರ್ ಎಚ್ಚರಿಸಿದ್ದಾರೆ
ಜೀವನ ಶೈಲಿಯ ಬದಲಾವಣೆಗೂ ಸ್ತ್ರೀರೋಗಕ್ಕೆ ಸಂಬಂಧಿಸಿದ ಅಂಡಾಶಯ ಹಾಗೂ ಗರ್ಭಕಂಠದ ಕ್ಯಾನ್ಸರ್ ಗೂ ಸಂಬಂಧವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ
ಅಂಡಾಶಯದ ಕ್ಯಾನ್ಸರ್ ಅತ್ಯಂತ ಮಾರಕ ಸ್ತ್ರೀರೋಗ. ಅದರ ಉಳಿವಿನಲ್ಲಿ ಅಲ್ಪ ಸುಧಾರಣೆ ಮಾತ್ರ ಸಾಧ್ಯ. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡುಬರುವ ಎರಡನೇ ಸಾಮಾನ್ಯ ಕ್ಯಾನ್ಸರ್ ಆಗಿದೆ. ಸಬಲೀಕರಣದ ಜೊತೆಜೊತೆಗೆ ಸುದೀರ್ಘ ಹಾಗೂ ಅನಿಯಮಿತ ಕೆಲಸದಿಂದ ಆಕೆ ಒತ್ತಡಕ್ಕೀಡಾಗುತ್ತಾಳೆ ಇದರ ನಡುವೆ ಪೌಷ್ಟಿಕ ಆಹಾರದ ಕೊರತೆ, ಮದ್ಯಪಾನ, ಧೂಮಪಾನ ಸ್ತ್ರೀಸಂಬಂಧಿ ಕ್ಯಾನ್ಸರ್ ಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಸ್ತನ, ಶ್ವಾಸಕೋಶ, ಕೊಲೊನ್ ಮತ್ತು ಮೇದೋಜ್ಜೀರಕ ಗ್ರಂಥಿಯ ನಂತರ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಐದನೇ ಮಾರಣಾಂತಿಕ ಕ್ಯಾನ್ಸರ್ ಅಂಡಾಶಯದ ಕ್ಯಾನ್ಸರ್ ಆಗಿದೆ. ಈಗಾಗಲೇ ಶೇ 75ರಷ್ಟು ಮಹಿಳೆಯರಲ್ಲಿ ಈ ಕಾಯಿಲೆ ಮೂರು ಮತ್ತು ನಾಲ್ಕನೇ ಹಂತದಲ್ಲಿ ಪತ್ತೆಯಾಗಿದೆ. ಹೀಗಾಗಿ ಪ್ರತಿಯೊಬ್ಬ ಸ್ತ್ರೀಯೂ ನಿಯಮಿತವಾಗಿ ಪರೀಕ್ಷೆಗೆ ಒಳಪಡಬೇಕು ಎಂದು ಡಾ ಕಪಿಲ್ ಕುಮಾರ್ ಸಲಹೆ ನೀಡಿದ್ದಾರೆ.
ಯುಎನ್ಐ ಎಸ್ಎ ಎಸ್ಎಚ್ 1743
More News
ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

15 Jul 2019 | 8:08 PM

ನವದೆಹಲಿ, ಜುಲೈ 15 (ಯುಎನ್‌ಐ) ಗರ್ಭಧಾರಣೆ ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇದೆಯೇ ಎಂಬ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

 Sharesee more..
ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

14 Jul 2019 | 2:28 PM

ನವದೆಹಲಿ, ಜುಲೈ 14 (ಯುಎನ್ಐ) ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ಸಹಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

 Sharesee more..