Monday, Jul 22 2019 | Time 19:53 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
National Share

ಜೈಸಿಂಗ್ ಹಾಗೂ ಆನಂದ್ ಗ್ರೋವರ್ ಮನೆ ಮೇಲೆ ಸಿಬಿಐ ದಾಳಿ; ಕೇಜ್ರಿವಾಲ್ ಖಂಡನೆ

ನವದೆಹಲಿ, ಜುಲೈ 10 (ಯುಎನ್ಐ) ಸುಪ್ರೀಂಕೋರ್ಟ್ ವಕೀಲರಾದ ಇಂದಿರಾ ಜೈಸಿಂಗ್ ಹಾಗೂ ಆನಂದ್ ಗ್ರೋವರ್ ಅವರ ಮನೆ ಹಾಗೂ ಕಚೇರಿ ಮೇಲೆ ನಡೆದ ಆದಾಯ ತೆರಿಗೆ ಅಧಿಕಾರಿಗಳ (ಐಟಿ) ದಾಳಿಯನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಖಂಡಿಸಿದ್ದಾರೆ.
ತಮ್ಮ ಜೀವನದುದ್ದಕ್ಕೂ ಕಾನೂನು ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಹೋರಾಡಿದ ಹಿರಿಯ ವಕೀಲರ ಆಸ್ತಿಯ ಮೇಲೆ ಐಟಿ ದಳಿ ನಡೆಸಿರುವುದು ದುರುದ್ದೇಶಪೂರಿತ ಎಂದು ಅವರು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, 'ವಕೀಲರಾದ ಜೈಸಿಂಗ್ ಹಾಗೂ ಆನಂದ್ ಗ್ರೋವರ್ ಅವರ ಆಸ್ತಿಯ ಮೇಲೆ ಸಿಬಿಐ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ. ಆದರೆ, ತಮ್ಮ ಜೀವನದುದ್ದಕ್ಕೂ ಕಾನೂನು ಹಾಗೂ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಲು ಹೋರಾಡಿದ ಅನುಭವಿಗಳನ್ನು ಗುರಿಯಾಗಿಸುವುದು ದುರುದ್ದೇಶಪೂರಿತ ' ಎಂದಿದ್ದಾರೆ.
ಗುರುವಾರ ಬೆಳಗ್ಗೆ ಸಿಬಿಐ ಅಧಿಕಾರಿಗಳು ಸುಪ್ರೀಂಕೋರ್ಟ್ ನ ಖ್ಯಾತ ವಕೀಲರಾದ ಇಂದಿರಾ ಜೈ ಸಿಂಗ್ ಹಾಗೂ ಅವರ ಪತಿ ಆನಂದ್ ಗ್ರೋವರ್ ಮನೆ ಹಾಗೂ ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಎನ್ ಜಿ ಒ ಹೆಸರಿನಲ್ಲಿ 2009-14ರ ಅವಧಿಯಲ್ಲಿ ವಿದೇಶಿ ಅನುದಾನವನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಸಂಬಂಧಿಸಿದಂತೆ ಫೇರ್ ಕ್ರೆಡಿಟ್ ರಿಪೋರ್ಟಿಂಗ್ ಆ್ಯಕ್ಟ್ (ಎಫ್ ಸಿಆರ್ ಎ) ಅಡಿಯಲ್ಲಿ ದಾಳಿ, ಪರಿಶೀಲನೆ ನಡೆಸಲಾಗಿತ್ತು.
ದಾಳಿ ಕುರಿತು ಪ್ರತಿಕ್ರಿಯಿಸಿದ್ದ ಜೈಸಿಂಗ್, ತಾವು ಹಲವು ವರ್ಷಗಳಿಂದ ನಡೆಸಿಕೊಂಡಿರುವ ಮಾನವ ಕಲ್ಯಾಣ ಕೆಲಸಗಳನ್ನು ಸಹಿಸದೆ ತಮ್ಮನ್ನು ಅನಾವಶ್ಯಕವಾಗಿ ಗುರಿಯಾಗಿಸಲಾಗಿದೆ ಎಂದಿದ್ದಾರೆ.
ಯುಎನ್ಐ ಎಸ್ಎಚ್ ಎಸ್ಎ 1740
More News
ಕೇಂದ್ರ ಸರ್ಕಾರದ 50 ದಿನಗಳ ಸಾಧನಾ ವರದಿ ಬಿಡುಗಡೆ; ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ

ಕೇಂದ್ರ ಸರ್ಕಾರದ 50 ದಿನಗಳ ಸಾಧನಾ ವರದಿ ಬಿಡುಗಡೆ; ಮೂಲಸೌಕರ್ಯ, ಶಿಕ್ಷಣಕ್ಕೆ ಆದ್ಯತೆ

22 Jul 2019 | 11:56 AM

ನವದೆಹಲಿ, ಜು 22 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ, ಮೊದಲ 50 ದಿನಗಳಲ್ಲಿ 'ಸಬ್‍ ಕಾ ಸಾಥ್, ಸಬ್‍ ಕಾ ವಿಕಾಸ್, ಸಬ್‍ ಕಾ ವಿಶ್ವಾಸ್' ಘೋಷಣೆಯ ಜಾರಿಗೆ ಹೆಚ್ಚಿನ ಗಮನ ಹರಿಸಿದ್ದು, ಮೂಲಸೌಕರ್ಯ, ಶಿಕ್ಷಣ ಮತ್ತು ಸಮಾಜದ ಎಲ್ಲಾ ರಂಗಗಳಲ್ಲಿ ತೀವ್ರಗತಿಯ ಅಭಿವೃದ್ಧಿ ಸಾಧಿಸಲು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ಸರ್ಕಾರ ಸೋಮವಾರ ಹೇಳಿದೆ.

 Sharesee more..
ಪಕ್ಷೇತರ ಶಾಸಕರ ಅರ್ಜಿಯನ್ನು ಇಂದೇ ವಿಚಾರಣೆ ನಡೆಸಲು ಸುಪ್ರೀಂ ನಕಾರ

ಪಕ್ಷೇತರ ಶಾಸಕರ ಅರ್ಜಿಯನ್ನು ಇಂದೇ ವಿಚಾರಣೆ ನಡೆಸಲು ಸುಪ್ರೀಂ ನಕಾರ

22 Jul 2019 | 11:46 AM

ನವದೆಹಲಿ, ಜು 22 (ಯುಎನ್ಐ) ಪಕ್ಷೇತರ ಶಾಸಕರ ಅರ್ಜಿಯನ್ನು ಇಂದು ವಿಚಾರಣೆ ನಡೆಸಲು ಸಾಧ್ಯವಿಲ್ಲ, ನಾಳೆ ವಿಚಾರಣೆ ನಡೆಸುವ ಬಗ್ಗೆ ನೋಡುತ್ತೇವೆ ಎಂದು ಸುಪ್ರೀಂಕೋರ್ಟ್ ಹೇಳಿದೆ

 Sharesee more..