Friday, Feb 28 2020 | Time 08:16 Hrs(IST)
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Health -Lifestyle Share

ತಲಸೀಮಿಯಾ ಸಮಸ್ಯೆ: ಮಗುವಿನ ಚಿಕಿತ್ಸೆಗೆ 24 ಲಕ್ಷ ರೂ ವೆಚ್ಚ

ಬೆಂಗಳೂರು,ಜ.23(ಯುಎನ್ಐ) ಬಿಟಾ ತಲಸೀಮಿಯಾ ಎಂಬ ಅಪಾಯಕಾರಿ ರೋಗದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ 24 ಲಕ್ಷ ರೂ ವೆಚ್ಚವಾಗಲಿದ್ದು, ದಾನಿಗಳು ನೆರವು ನೀಡಬೇಕೆಂದು ಮಗುವಿನ ತಂದೆ ಸುಧಾಕರ್ ಮನವಿ ಮಾಡಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ತಾಲ್ಲೂಕಿನ ಹಾಡ್ಯ ಗ್ರಾಮದ ನಿವಾಸಿಯಾದ ತನಗೆ 4 ವರ್ಷದ ಮನಸ್ವಿ ಎಂಬ ಮಗಳಿದ್ದು, ಈಕೆ ದೇಹದಲ್ಲಿ ರಕ್ತ ಉತ್ಪಾದನೆಯಾಗದೇ ತಲಸೀಮಿಯಾ ಎಂಬ ರೋಗದಿಂದ ಬಳಲುತ್ತಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆದರೆ ಈ ರೋಗದ ಗುಣಲಕ್ಷಣಗಳು ಅಪಾಯಕಾರಿ ಮಟ್ಟ ತಲುಪಿದ್ದು ಹೆಚ್ಚು ಮೊತ್ತದ ಹಣ ಖರ್ಚಾಗುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದರು.
ಚಿಕಿತ್ಸೆ ವೆಚ್ಚ ಸುಮಾರು 24.40 ಲಕ್ಷ ರೂ.‌ಆಗಲಿದ್ದು, ಈ ಮೊತ್ತವನ್ನು ಭರಿಸಲು ತಮಗೆ ಸಾಧ್ಯವಾಗುವುದಿಲ್ಲ. ತಮ್ಮ ಮಗಳನ್ನು ಉಳಿಸಿಕೊಳ್ಳಲು ಈಗಾಗಲೇ ತಮ್ಮಲ್ಲಿ ಇದ್ದ 3 ಎಕರೆ ಜಮೀನನ್ನು ಮಾರಾಟ ಮಾಡಿ, ಮಗುವಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಈ ರೋಗ ಗುಣಮುಖವಾಗುವ ಲಕ್ಷಣ ಕಂಡು ಬಂದಿಲ್ಲ ಎಂದು ತಮ್ಮ ಅಸಹಾಯಕತೆ ತೋಡಿಕೊಂಡರು.
ಬೆನ್ನಿನ ಮೂಳೆ ಟ್ರಾನ್ಸ್ ಪ್ಲಾಂಟ್ ಮಾಡಲು 24 ಲಕ್ಷ ರೂ. ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ತಮ್ಮಲ್ಲಿ ಅಷ್ಟೊಂದು ಮೊತ್ತದ ಹಣವಿರದ ಕಾರಣದಾನಿಗಳು ಚಿಕಿತ್ಸೆಗೆ ನೆರವು ನೀಡಬೇಕೆಂದು ಮನವಿ ಮಾಡಿದರು.
ನೆರವು ನೀಡಲು ಬಯಸುವ ದಾನಿಗಳು ಮಂಡ್ಯ ತಾಲ್ಲೂಕಿನ ಹೊಳಲು ಶಾಖೆಯ ಎಸ್.ಬಿ.ಐ ಖಾತೆ ಸಂಖ್ಯೆ 39024499683 ಹಾಗೂ ಐಎಸ್‌ಎಸ್‌ಇ- ಎಸ್‌ಬಿಐಎನ್ 0040326ಕ್ಕೆ ನೀಡುವಂತೆ ಕೋರಿದ್ದಾರೆ.
ಯುಎನ್ಐ ಡಿಸಿ ವಿಎನ್ 1822