Monday, Sep 16 2019 | Time 12:29 Hrs(IST)
 • ದೂರದರ್ಶನಕ್ಕೆ 60ರ ಸಂಭ್ರಮ: ಅಂಚೆ ಚೀಟಿ ಬಿಡುಗಡೆ ಮಾಡಿದ ಜಾವಡೇಕರ್
 • ಆಂಗ್ಲರ ನಾಡಿನಲ್ಲಿ ನಮ್ಮ ಪ್ರಯತ್ನ ಶ್ಲಾಘನೀಯ: ಟಿಮ್‌ ಪೈನ್‌
 • ಕಾಶ್ಮೀರ ಕುರಿತು ಅಮಿತ್‍ ಷಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ
 • ತ್ರಿಪುರಾದಲ್ಲಿ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ: ಮನೋಜ್ ಕಾಂತಿ ದೇಬ್
 • ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆ ಬಗ್ಗೆ ರಷ್ಯಾ ಪರಿಶೀಲನೆ-ರೋಸ್ಟೆಕ್ ಸಿಇಒ
 • ಕೆ ಎಸ್‍ ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‍ಡಿಪಿಐ
 • ಬಲವಂತದ ಭಾಷೆ ಹೇರಿಕೆ ಸಲ್ಲದು: ಸಿದ್ದರಾಮಯ್ಯ
 • ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ
 • ಪಂಕಜ್ ಅಡ್ವಾನಿಯ ಸ್ಥಿರ ಪ್ರದರ್ಶನ ಶ್ಲಾಘನೀಯ: ಮೋದಿ
 • ಬೇಗೂರು ಪೊಲೀಸರಿಂದ ರೌಡಿ ಶೀಟರ್ ಓಣಿ ಶ್ರೀಧರ್ ಕಾಲಿಗೆ ಗುಂಡೇಟು
 • ಪಾಕಿಸ್ತಾನದಲ್ಲಿ ಭದ್ರತೆ ಪರಿಶೀಲಿಸಿದ ನಂತರ ಪಂದ್ಯದ ಅಧಿಕಾರಿಗಳ ನೇಮಕ: ಐಸಿಸಿ
 • 47 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್ ಸರಣಿ ಡ್ರಾ
 • ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌
 • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ
International Share

ತಾಲಿಬಾನ್ ಜೊತೆ ಚೈನಾ ವಿಭಿನ್ನ ರೀತಿಯ ಮಾತುಕತೆ ; ಲಿಯು ಜಿನ್ಸಾಂಗ್

ಕಾಬೂಲ್,ಜೂನ್ 12( ಸ್ಪುಟ್ನಿಕ್)- ತಾಲಿಬಾನ್ ನೊಂದಿಗೆ ಚೈನಾ ತನ್ನದೇ ಆದ ಮಾರ್ಗದಲ್ಲಿ ಮಾತುಕತೆ ನಡೆಸಲಿದೆ. ಅಫ್ಘಾನಿಸ್ತಾನದ ಬಂಡುಕೋರರೊಂದಿಗೆ ಶಾಂತಿ ಮಾತುಕತೆ ನಡೆಸುತ್ತಿರುವ ಇತರ ದೇಶಗಳಿಗಿಂತ ತನ್ನ ಹಾದಿ ವಿಭಿನ್ನವಾಗಿರಲಿದೆ ಎಂದು ಕಾಬೂಲ್ ನಲ್ಲಿರುವ ಚೈನಾ ರಾಯಭಾರಿ ಲಿಯು ಜಿನ್ಸಾಂಗ್ ತಿಳಿಸಿದ್ದಾರೆ
ತಾಲಿಬಾನ್ ಹಾಗೂ ಅಮೆರಿಕಾ ನಡುವೆ ಈವರೆಗೆ ಆರು ಸುತ್ತಿನ ಶಾಂತಿ ಮಾತುಕತೆಗಳು ನಡೆದಿವೆ. ಏಳನೇ ಸುತ್ತಿನ ಮಾತುಕತೆ ಆದಷ್ಟು ಶೀಘ್ರ ಆರಂಭಗೊಳ್ಳುವ ನಿರೀಕ್ಷೆಯಿದೆ
ಅಮೆರಿಕಾ- ತಾಲಿಬಾನ್ ಶಾಂತಿ ಮಾತುಕತೆಗಳನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ ನಾವು ಯಾವುದೇ ಮಾತುಕತೆಯನ್ನು ಸ್ವಾಗತಿಸುತ್ತೇವೆ. ಆದರೆ, ನಮ್ಮ ಮಾತುಕತೆ ಪ್ರಮಾಣಿಕ ಮಾತುಕತೆಯಾಗಲಿದೆ. ನಮ್ಮ ಸ್ನೇಹಿತರು ಮಾತುಕತೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಪಾಲ್ಗೊಳ್ಳಲಿದ್ದಾರೆ, ಚೈನಾ ಕೂಡ ವಿಭಿನ್ನರೀತಿಯಲ್ಲಿ ಸಂವಾದ ನಡೆಸಲಿದೆ ಎಂದು ವಿವರಿಸಿದರು.
ಹೌದು, ನಾವು ಅವರೊಂದಿಗೆ ಮಾತಕತೆ ನಡೆಸದಿದ್ದರೆ, ನಮ್ಮ ಪ್ರಭಾವ ಏನು ಎಂಬುದನ್ನು ಅವರಿಗೆ ತೋರಿಸುವುದು ಹೇಗೇ? ತಾಲಿಬಾನ್ ನೊಂದಿಗೆ ಮಾತುಕತೆ ನಡೆಸಲು ನಮ್ಮದೇ ಆದ ಮಾರ್ಗಗಳಿವೆ ಎಂದು ಲಿಯು ಜಿನ್ಸಾಂಗ್ ಹೇಳಿದ್ದಾರೆ
ಅಫ್ಘಾನಿಸ್ತಾನದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ನೆಲೆ ಹೊಂದಿರುವ ಬಗ್ಗೆ ಚೈನಾದ ಕಳವಳ ವ್ಯಕ್ತಪಡಿಸಿದ ಲಿಯು ಜಿನ್ಸಾಂಗ್ ಭಯೋತ್ಪಾದಕರ ವಿರುದ್ಧ ಹೋರಾಟ ಕುರಿತ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದರು.
ಯಾವುದೇ ಅಂತರಾಷ್ಟ್ರೀಯ ಭಯೋತ್ಪಾದಕ ಗುಂಪಿನಿಂದ ಚೈನಾಗೆ ಮಾತ್ರವಲ್ಲ ಇಡೀ ಜಗತ್ತಿಗೆ ಬೆದರಿಕೆಯಿದೆ. ಅದರ ವಿರುದ್ಧ ನಾವೆಲ್ಲರೂ ಸಂಘಟಿತವಾಗಿ ಸಮರ ಸಾರಬೇಕು ಎಂದು ರಾಯಭಾರಿ ಕರೆನೀಡಿದರು.
ಅಫ್ಘಾನಿಸ್ತಾನ – ಚೈನಾ ಗಡಿ ಸಮೀಪ ಅಫ್ಘನ್ ಪಡೆಗಳಿಗಾಗಿ ಸೇನಾ ನೆಲೆಯನ್ನು ನಿರ್ಮಿಸುವ ಸಾಧ್ಯತೆಯನ್ನು ಇದೇ ಸಂದರ್ಭದಲ್ಲಿ ಅವರು ದೃಢಪಡಿಸಿದರು.
ಯುಎನ್ಐ ಕೆವಿಆರ್ ಎಎಚ್ 1620