Sunday, Mar 29 2020 | Time 00:41 Hrs(IST)
National Share

ದಕ್ಷಿಣ ಏಷ್ಯಾ ಚುನಾವಣಾ ನಿರ್ವಹಣಾ ಸಂಸ್ಥೆ ವೇದಿಕೆಯ ಅಧ್ಯಕ್ಷರಾಗಿ ಸುನಿಲ್ ಅರೋರಾ

ನವದೆಹಲಿ, ಜನವರಿ 24 (ಯುಎನ್‌ಐ) ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ 2020 ನೇ ಸಾಲಿನ ದಕ್ಷಿಣ ಏಷ್ಯಾದ ಚುನಾವಣಾ ನಿರ್ವಹಣಾ ಸಂಸ್ಥೆ ವೇದಿಕೆಯ (ಇಎಂಬಿ) ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ನವದೆಹಲಿಯಲ್ಲಿಂದು ನಡೆದ ಫೆಂಬೊಸಾದ 10 ನೇ ವಾರ್ಷಿಕ ಸಭೆಯಲ್ಲಿ ಫೆಂಬೊಸಾದ ಬಾಂಗ್ಲಾದೇಶದ ಸಿಇಸಿ ಕೆಎಂ ನೂರುಲ್ ಹುಡಾ, ಅರೋರಾ ಅವರಿಗೆ ಫೆಂಬೊಸಾದ ಲೋಗೋವನ್ನು ಹಸ್ತಾಂತರಿಸಿದರು.
ಉದ್ದೇಶಗಳಿಗೆ ಅನುಗುಣವಾಗಿ ಸದಸ್ಯರು ಅನುಭವಗಳು ಮತ್ತು ಕೌಶಲ್ಯಗಳನ್ನು ಹಂಚಿಕೊಳ್ಳುತ್ತಿದ್ದು, ಮತ್ತು ಇತರ ಇಎಂಬಿಗಳೊಂದಿಗೆ ಸಹಕಾರ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಹುಡಾ ಹೇಳಿದರು .
ಇಎಂಬಿ ಬಾಂಗ್ಲಾದೇಶವು ಕಳೆದ ವರ್ಷದಲ್ಲಿ ಫೆಂಬೊಸಾ ಸದಸ್ಯರ ಚಟುವಟಿಕೆಗಳ ಕುರಿತು ಉಸ್ತುವಾರಿ ವರದಿಯನ್ನು ಮಂಡಿಸಿತು.
ವೇದಿಕೆಯ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ಸ್ವೀಕರಿಸಿದ ಅರೋರಾ ಅವರು ಭಾರತದ ಚುನಾವಣಾ ಆಯೋಗದ ಬಗ್ಗೆ ಇಟ್ಟಿರುವ ನಂಬಿಕೆ, ವಿಶ್ವಾಸಕ್ಕಾಗಿ ಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದರು.
ಪ್ರಜಾಪ್ರಭುತ್ವದಲ್ಲಿ, ಸಾರ್ವತ್ರಿಕ, ಸಮಾನ, ನೇರ ಮತ್ತು ಮುಕ್ತವಾಗಿ ವ್ಯಕ್ತಪಡಿಸಿದ ಮತದಾರರ ಒಲವಿನ ಆಧಾರದ ಮೇಲೆ ನಿಯಮಿತ ಚುನಾವಣೆಗಳಿಂದ ಮಾತ್ರ ಅಧಿಕಾರ ದೊರಕುತ್ತಿದೆ ಎಂದೂ ಅರೋರಾ ಹೇಳಿದರು.
ಮೇ, 2012 ರಲ್ಲಿ ನವದೆಹಲಿಯಲ್ಲಿ ನಡೆದ ಸಾರ್ಕ್ ದೇಶಗಳ ಮುಖ್ಯಸ್ಥರ ಚುನಾವಣಾ ನಿರ್ವಹಣಾ ಸಂಸ್ಥೆಗಳ (ಇಎಂಬಿ) ಮೂರನೆ ನೇ ಸಮ್ಮೇಳನದಲ್ಲಿ ಫೆಂಬೊಸಾವನ್ನು ಸ್ಥಾಪಿಸಲಾಗಿತ್ತು
ಇಂದು ನಡೆದ 10 ನೇ ಫೆಂಬೊಸಾ ವಾರ್ಷಿಕ ಸಭೆಯಲ್ಲಿ ಹೊಸದಿಲ್ಲಿ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ಫೆಂಬೊಸಾದ 10 ನೇ ಸಭೆಯಲ್ಲಿ ಸದಸ್ಯ ಇಎಂಬಿಗಳು ಅನುಮೋದಿಸಿದಂತೆ 2020 ರ ಕಾರ್ಯ ಯೋಜನೆಯನ್ನು ಜಾರಿಗೆ ತರಲು ಸದಸ್ಯರು ನಿರ್ಧರಿಸಿದ್ದಾರೆ.
ಸಮ್ಮೇಳನದ ಹೊರತಾಗಿ, ಆಯೋಗವು ಅಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗದೊಂದಿಗೆ ಚುನಾವಣಾ ನಿರ್ವಹಣಾ ಕ್ಷೇತ್ರದ ಸಹಕಾರಕ್ಕಾಗಿ ತಿಳುವಳಿಕೆ ಪತ್ರವನ್ನು (ಎಂಒಯು) ನವೀಕರಿಸಿತು.
ಈ ತಿಳುವಳಿಕೆ ಒಡಂಬಡಿಕೆಗೆ ಐಇಸಿ ಅಫ್ಘಾನಿಸ್ತಾನದ ಅಧ್ಯಕ್ಷೆ ಹವಾ ಆಲಂ ನೂರಿಸ್ತಾನಿ ಮತ್ತು ಇಸಿ ಪರವಾಗಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸಹಿ ಹಾಕಿದ್ದಾರೆ.
ಚುನಾವಣಾ ನಿರ್ವಹಣಾ ಕ್ಷೇತ್ರದ ಸಹಕಾರಕ್ಕಾಗಿ ಟುನೀಶಿಯಾದ ಸ್ವತಂತ್ರ ಹೈ ಅಥಾರಿಟಿ ಫಾರ್ ಎಲೆಕ್ಷನ್ಸ್ (ಐಎಸ್ಐಇ) ಯೊಂದಿಗೂ ತಿಳುವಳಿಕೆ ಪತ್ರಕ್ಕೂ ಸಹಿ ಹಾಕಲಾಗಿದೆ.
ಯುಎನ್ಐ ಕೆಎಸ್ಆರ್ 2230
More News
ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

ಕಾರ್ಮಿಕರ ಘನತೆಯನ್ನು ಕಾಪಾಡಿ; ಕೇಂದ್ರಕ್ಕೆ ರಾಹುಲ್ ಮನವಿ

28 Mar 2020 | 7:17 PM

ನವದೆಹಲಿ, ಮಾ 28 (ಯುಎನ್ಐ) ಕೊರೋನಾ ವೈರಸ್ ತಡೆಯಲು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಿಂದ ಬೃಹತ್ ಸಂಖ್ಯೆ ಕಾರ್ಮಿಕರುತ ತಮ್ಮ ತವರೂರಿಗೆ ತೆರಳಲಾಗದೆ ಪರದಾಡುವಂತಾಗಿದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 Sharesee more..
ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ  ನೆರವು ನೀಡಿದ ಟಾಟಾ

ಕೋವಿಡ್-19 ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ ನೆರವು ನೀಡಿದ ಟಾಟಾ

28 Mar 2020 | 7:10 PM

ನವದೆಹಲಿ, ಮಾ 28 (ಯುಎನ್ಐ) ದೇಶದ ಮುಂಚೂಣಿಯ ಉದ್ಯಮ ಸಂಸ್ಥೆ ಟಾಟಾ ಟ್ರಸ್ಟ್, ದೇಶದ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ 500 ಕೋಟಿ ರೂ.ನೆರವು ನೀಡುವುದಾಗಿ ಘೋಷಿಸಿದೆ.

 Sharesee more..