Monday, Jun 1 2020 | Time 01:56 Hrs(IST)
Health -Lifestyle Share

ದಕ್ಷಿಣ ಕೊರಿಯಾ : 23 ಹೊಸ ಕೋವಿಡ್ 19 ಪ್ರಕರಣ ದಾಖಲು

ಸಿಯೋಲ್, ಮೇ 23 (ಯುಎನ್‍ಐ) ದಕ್ಷಿಣ ಕೊರಿಯಾದಲ್ಲಿ ಕೊರೋನಾ ಸೋಂಕಿನ 23 ಹೊಸ ಪ್ರಕರಣಗಳು ದಾಖಲಾಗಿವೆ.
ಸಿಯೋಲ್‌ನ ಬಹುಸಾಂಸ್ಕೃತಿಕ ಜಿಲ್ಲೆಯಾದ ಇಟಾವೊನ್‌ನಲ್ಲಿ ಸೋಂಕು ತಡೆಗಟ್ಟುವ ನಿರಂತರ ಪ್ರಯತ್ನಗಳ ನಡುವೆಯೇ ಕಳೆದ 24 ಗಂಟೆಗಳಲ್ಲಿ 23 ಹೊಸ ಪ್ರಕರಣಗಳು ದಾಖಲಾಗಿರುವುದಾಗಿ ಶನಿವಾರ ವರದಿ ಮಾಡಿದೆ.
ಇದರಿಂದ ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 11,165 ಕ್ಕೆ ಹೆಚ್ಚಳವಾಗಿದೆ ಎಂದು ಕೊರಿಯಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಕೆಸಿಡಿಸಿ) ತಿಳಿಸಿದ್ದು, ಇಬ್ಬರು ರೋಗಿಗಳ ಸಾವಿನೊಂದಿಗೆ ಮೃತರ ಸಂಖ್ಯೆ 266 ಕ್ಕೆ ತಲುಪಿದೆ.
ಇಟಾವೊನ್ ಕ್ಲಬ್‌ಗಳು ಮತ್ತು ಬಾರ್‌ಗಳಿಗೆ ನಿರಂತರ ಸೋಂಕು ತಗುಲಿದ ಕಾರಣ ಕಳೆದ ಎರಡು ದಿನಗಳಿಂದ ಹೊಸ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.
ಹೊಸದಾಗಿ ವರದಿಯಾದ 23 ಪ್ರಕರಣಗಳಲ್ಲಿ 19 ಸಮುದಾಯ ಸೋಂಕುಗಳು ಮತ್ತು ನಾಲ್ಕು ಆಮದು ಪ್ರಕರಣಗಳಾಗಿವೆ ಎಂದು ಕೆಸಿಡಿಸಿ ವರದಿ ಮಾಡಿದೆ ಎಂದು ಯೋನ್ಹಾಪ್ ವರದಿಯಲ್ಲಿ ತಿಳಿಸಿದ್ದಾರೆ. ಸಾವಿನ ಪ್ರಮಾಣವು ಶೇಕಡ 2.38 ಕ್ಕೆ ಬಂದಿದೆ ಎಂದು ಅದು ಹೇಳಿದೆ.
ದಕ್ಷಿಣ ಕೊರಿಯಾದಲ್ಲಿ 29 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಕೋವಿಡ್ 19 ರೋಗಿಗಳು ಮೃತಪಟ್ಟಿರುವ ವರದಿಯಾಗಿಲ್ಲ.
ಯುಎನ್‍ಐ ಎಸ್ಎ ವಿಎನ್ 1240