Monday, Jun 1 2020 | Time 02:43 Hrs(IST)
Entertainment Share

ದಕ್ಷಿಣ ಭಾರತ ಹಿರಿಯ ನಟಿ ವಾಣಿಶ್ರೀ ಪುತ್ರ ಆತ್ಮಹತ್ಯೆ

ಚೆನ್ನೈ, ಮೇ ೨೩(ಯುಎನ್‌ಐ) ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಪುತ್ರ ಅಭಿನಯ್ ವೆಂಕಟೇಶ್ ಕಾರ್ತಿಕ್ (೩೬) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆಂಗಲ್ ಪಟ್ಟು ಜಿಲ್ಲೆಯ ತಿರಕ್ಕಳುಕುಂಡ್ರಾದಲ್ಲಿರುವ ತೋಟದ ಮನೆಯಲ್ಲಿ ಆವರು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದ ಅಭಿನಯ್ ಬೆಂಗಳೂರಿನಿಂದ ಬಂದ ನಂತರ ಹೋಂ ಕ್ವಾರಂಟೈನ್ ನಲ್ಲಿದ್ದರು. ಆದರೆ ಅವರು ಶುಕ್ರವಾರವೇ ಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಅಭಿನಯ್ ಪತ್ನಿ ಸಹ ವೈದ್ಯರಾಗಿದ್ದು, ದಂಪತಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.
ಈ ನಡುವೆ ಅಭಿನಯ್ ಸಾವಿನ ಬಗ್ಗೆ ತಿರುಕ್ಕಳುಕುಂಡ್ರಂ ಪೊಲೀಸರು ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ. ಹೋಂ ಕ್ವಾರಂಟೈನ್ ನಲ್ಲಿದ್ದ ಅವರು ತೀವ್ರ ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಯುಎನ್‌ಐ ಕೆವಿಆರ್ ೨೦೨೮