Monday, Sep 16 2019 | Time 06:16 Hrs(IST)
National Share

ದಿ.ಶ್ಯಾಮ್ ಪ್ರಸಾದ್ ಮುಖರ್ಜಿಗೆ ಪ್ರಧಾನಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ

ದಿ.ಶ್ಯಾಮ್ ಪ್ರಸಾದ್ ಮುಖರ್ಜಿಗೆ ಪ್ರಧಾನಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ
ದಿ.ಶ್ಯಾಮ್ ಪ್ರಸಾದ್ ಮುಖರ್ಜಿಗೆ ಪ್ರಧಾನಿ, ಬಿಜೆಪಿ ನಾಯಕರ ಶ್ರದ್ಧಾಂಜಲಿ

ನವದೆಹಲಿ, ಜೂ 23 (ಯುಎನ್ಐ) ಬಿಜೆಪಿ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿದರು

ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನದ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸುತ್ತಿದ್ದೇವೆ, ಧರ್ಮನಿಷ್ಠ ದೇಶಭಕ್ತ ಮತ್ತು ಹೆಮ್ಮೆಯ ರಾಷ್ಟ್ರೀಯವಾದಿ ಡಾ ಮುಖರ್ಜಿ ಅವರು ತಮ್ಮ ಜೀವನವನ್ನು ಭಾರತದ ಏಕತೆ ಮತ್ತು ಸಮಗ್ರತೆಗಾಗಿ ವ್ಯಯಿಸಿದರು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ

ದಿವಂಗತ ಮುಖರ್ಜಿ ಅವರ ಬಲಿಷ್ಠ ಮತ್ತು ಏಕೀಕೃತ ಭಾರತದ ಬಗೆಗಿನ ಉತ್ಸಾಹವು ನಮಗೆ ಸ್ಫೂರ್ತಿ ನೀಡುತ್ತಲೇ ಇದೆ ಮತ್ತು 130 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ನಮಗೆ ಶಕ್ತಿ ನೀಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ

ದಿವಂಗತ ಮುಖರ್ಜಿ ಅವರಿಗೆ ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಗೌರವ ಸಲ್ಲಿಸಿದ್ದಾರೆ

ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಜನ ಸಂಘದ ಸ್ಥಾಪಕ, ಮಹಾನ್ ದೇಶಭಕ್ತನಿಗೆ ಅಮಿತ್ ಶಾ ಮತ್ತು ಪಕ್ಷದ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಪುಷ್ಪನಮನ ಸಲ್ಲಿಸಿದರು

ಜಮ್ಮು ಮತ್ತು ಕಾಶ್ಮೀರದಲ್ಲಿ ಏಕ ರಾಷ್ಟ್ರ, ಏಕ ಸಂವಿಧಾನದ ಮಾನದಂಡಗಳನ್ನು ಖಾತ್ರಿಪಡಿಸುವಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಕೊಡುಗೆಯನ್ನು ಅಮಿತ್ ಶಾ ಟ್ವಿಟರ್ ಮೂಲಕ ಸ್ಮರಿಸಿಕೊಂಡಿದ್ದಾರೆ

ಇಂದು ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯವಸ್ಥೆ ಉಳಿದಿದ್ದರೆ ಅದಕ್ಕೆ ಶ್ಯಾಮ್‌ ಪ್ರಸಾದ್ ಮುಖರ್ಜಿ ಕಾರಣ ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ

ಜನ ಸಂಘದ ಸಂಸ್ಥಾಪಕ ಡಾ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರಿಗೆ ನನ್ನ ವಿನಮ್ರ ಶ್ರದ್ಧಾಂಜಲಿ, ಅವರು ನಮ್ಮ ದೇಶಕ್ಕೆ ಕೊಟ್ಟ ಕೊಡುಗೆ ಎಂದಿಗೂ ಸ್ಮರಣೀಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ

ಇದಕ್ಕೂ ಮೊದಲು ನಡ್ಡಾ ಅವರು ಫಿರೋಜ್‌ಶಾ ಕೋಟ್ಲಾ ಮೈದಾನದ ಶಾಹಿದಿ ಪಾರ್ಕ್‌ನಲ್ಲಿ ಮುಖರ್ಜಿಗೆ ಅವರಿಗೆ ಗೌರವ ಸಲ್ಲಿಸಿದರು

ಭಾರತೀಯ ಜನ ಸಂಘದ ಸಂಸ್ಥಾಪಕ, ಶಿಕ್ಷಣ ತಜ್ಞ ಮತ್ತು ಶ್ರೇಷ್ಠ ದೇಶಭಕ್ತನಿಗೆ ನಾನು ಗೌರವ ಸಲ್ಲಿಸುತ್ತಿದ್ದೇನೆ, ದೇಶದ ಏಕತೆ ಮತ್ತು ಸಮಗ್ರತೆಗೆ ಅವರ ಕೊಡುಗೆ ವಿಶಿಷ್ಟವಾದುದು ಎಂದು ನಡ್ಡಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ

"ಒಂದು ದೇಶ ಒಂದು ಸಂವಿಧಾನ" ಎಂಬ ಪರಿಕಲ್ಪನೆಯನ್ನು ದಿವಂಗತ ಮುಖರ್ಜಿ ಹೊಂದಿದ್ದರು, ಸ್ವಾತಂತ್ರ್ಯನಂತರ ಅವರ ತ್ಯಾಗವು ದೇಶದ ಸಮಗ್ರತೆ ಮತ್ತು ಏಕತೆಯನ್ನು ಖಚಿತಪಡಿಸಿಕೊಳ್ಳಲು ಮೊದಲ ಆಂದೋಲನವಾಗಿ ಆರಂಭಗೊಂಡಿತು ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ

1901, ಜುಲೈ 6ರಂದು ಜನಿಸಿದ್ದ ಮುಖರ್ಜಿ 1953, ಜೂನ್ 23ರಂದು ಕೊನೆಯುಸಿರೆಳೆದರು

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಡ್ಡಾ, ದಿವಂಗತ ಮುಖರ್ಜಿ ಅವರು ಜಮ್ಮು-ಕಾಶ್ಮೀರದ ಸಮಗ್ರತೆಗೆ ನೀಡಿದ ಕೊಡುಗೆ ಈಗಲೂ ಪ್ರಸ್ತುತ ಎಂದು ಹೇಳಿದರು

"ಅವರ ಸಾವು ಸಂಶಯಾಸ್ಪದ ಸನ್ನಿವೇಶದಲ್ಲಿ ಸಂಭವಿಸಿದೆ" ಎಂದು ನಡ್ಡಾ ಹೇಳಿದರು,

ದಿವಂಗತ ನಾಯಕ ತನ್ನ ಕಾಶ್ಮೀರ ನೀತಿಯ ವಿಷಯದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಎಂದು ನಡ್ಡಾ ಸ್ಮರಿಸಿದರು

ದಿವಂಗತ ಮುಖರ್ಜಿ ಅವರು ನೆಹರೂ-ಲಿಯಾಕತ್ ಅಲಿ ಒಪ್ಪಂದವನ್ನು ಸಮಾಧಾನಗೊಳಿಸುವ ನೀತಿ ಎಂದು ಟೀಕಿಸಿದ್ದರು ಎಂದು ನಡ್ಡಾ ಹೇಳಿದರು

ಲಿಯಾಖತ್ –ನೆಹರೂ ಒಪ್ಪಂದ (ದೆಹಲಿ ಒಪ್ಪಂದ) ಭಾರತ ಮತ್ತು ಪಾಕಿಸ್ತಾನದ ನಡುವಿನ ಒಪ್ಪಂದವಾಗಿದ್ದು, ಇದಕ್ಕೆ 1950, ಏಪ್ರಿಲ್ 8ರಂದು ಸಹಿ ಹಾಕಲಾಗಿದೆ

ಒಪ್ಪಂದದ ಪ್ರಕಾರ, ನಿರಾಶ್ರಿತರಿಗೆ ತಮ್ಮ ಆಸ್ತಿಯನ್ನು ವಿಲೇವಾರಿ ಮಾಡಿಕೊಳ್ಳಲು ಇಲ್ಲಿಗೆ ಬರಲು ಅವಕಾಶ ನೀಡಲಾಯಿತು, ಅಪಹರಿಸಿದ ಮಹಿಳೆಯರನ್ನು ಮತ್ತು ಲೂಟಿ ಮಾಡಿದ ಆಸ್ತಿಯನ್ನು ಹಿಂದಿರುಗಿಸಬೇಕಾಗಿತ್ತು, ಆದರೆ ಬಲವಂತದ ಮತಾಂತರಗಳನ್ನು ಗುರುತಿಸಲಾಗಲಿಲ್ಲ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ದೃಢಪಡಿಸಲಾಯಿತು.

ಯುಎನ್ಐ ಎಎಚ್ ಡಿವಿ 1200

More News

60ರ ಹರೆಯ ಪೂರೈಸಿದ ಭಾರತೀಯ ದೂರದರ್ಶನ

15 Sep 2019 | 6:33 PM

 Sharesee more..
ಎಂಜಿನಿಯರ್‌ ದಿನಾಚರಣೆ: ಸರ್ ಎಂ ವಿಶ್ವೇಶ್ವರಯ್ಯ ಕೊಡುಗೆ ಅನನ್ಯ ಪ್ರಧಾನಿ

ಎಂಜಿನಿಯರ್‌ ದಿನಾಚರಣೆ: ಸರ್ ಎಂ ವಿಶ್ವೇಶ್ವರಯ್ಯ ಕೊಡುಗೆ ಅನನ್ಯ ಪ್ರಧಾನಿ

15 Sep 2019 | 4:55 PM

ನವದೆಹಲಿ, ಸೆಪ್ಟೆಂಬರ್ 15 (ಯುಎನ್ಐ) ನವಬಾರತ ಶಿಲ್ಪಿ,ಭಾರತ ರತ್ನ, ದೇಶದ ಎಂಜಿನಿಯರಿಂಗ್ ಪ್ರವರ್ತಕ ಸರ್ ಎಂ ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ಎಂಜಿನಿಯರ್;ಗಳಿಗೆ ಭಾನುವಾರ ಶುಭ ಕೋರಿ,ಅವರ ಸಾಧನೆ ಕೊಂಡಾಡಿದ್ದಾರೆ.

 Sharesee more..
ಗಂಗ್ವಾರ್ ಹೇಳಿಕೆ ಉತ್ತರ ಭಾರತೀಯರನ್ನು ಅವಮಾನಿಸಿದೆ: ಪ್ರಿಯಾಂಕಾ

ಗಂಗ್ವಾರ್ ಹೇಳಿಕೆ ಉತ್ತರ ಭಾರತೀಯರನ್ನು ಅವಮಾನಿಸಿದೆ: ಪ್ರಿಯಾಂಕಾ

15 Sep 2019 | 4:29 PM

ನವದೆಹಲಿ, ಸೆಪ್ಟೆಂಬರ್ 15 (ಯುಎನ್‌ಐ) ಉತ್ತರ ಭಾರತೀಯರಿಗೆ ಸಾರ್ವಜನಿಕ ವಲಯದ ಉದ್ಯೋಗ ಪಡೆಯಲು ಅರ್ಹತೆ ಇಲ್ಲ ಎಂಬ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರ ಹೇಳಿಕೆಯನ್ನು ಪ್ರಬಲವಾಗಿ ವಿರೋಧಿಸಿರುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಸಚಿವರು ಉತ್ತರ ಭಾರತೀಯರನ್ನು ಅವಮಾನಿಸಲು ಬಯಸಿದ್ದಾರೆ.

 Sharesee more..