Tuesday, Nov 19 2019 | Time 05:04 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
business economy Share

ನಾಗರಿಕ ವಿಮಾನಯಾನ ಸಚಿವರಿಂದ ಕೇಂದ್ರ ಎಟಿಎಫ್‌ಎಂ ಸಂಕೀರ್ಣ ಉದ್ಘಾಟನೆ

ನವದೆಹಲಿ, ಜೂನ್ 21 (ಯುಎನ್‌ಐ) ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವಾಯು ಸಂಚಾರ ನಿರ್ವಹಣೆ - ಕೇಂದ್ರೀಯ ಕಮಾಂಡ್ ಕೇಂದ್ರವನ್ನು ಶನಿವಾರ ಉದ್ಘಾಟಿಸಿದರು.
ಸಿ-ಎಟಿಎಫ್‌ಎಂ ವ್ಯವಸ್ಥೆಯು ಮುಖ್ಯವಾಗಿ ಪ್ರತಿ ಭಾರತೀಯ ವಿಮಾನ ನಿಲ್ದಾಣದಲ್ಲಿ ಪ್ರಮುಖ ಸಂಪನ್ಮೂಲಗಳಾದ ವಿಮಾನ ನಿಲ್ದಾಣ, ವಾಯುನೆಲೆ ಮತ್ತು ವಿಮಾನಗಳ ಗರಿಷ್ಠ ಬಳಕೆ ಸಾಧಿಸಲು ಅಗತ್ಯ ಸಾಮರ್ಥ್ಯ ಒದಗಿಸುವ ಉದ್ದೇಶ ಹೊಂದಿದೆ.
ಸಿ-ಎಟಿಎಫ್‌ಎಂ ವ್ಯವಸ್ಥೆಯು ಎಟಿಸಿ ಆಟೊಮೇಷನ್ ಸಿಸ್ಟಮ್, ಫ್ಲೈಟ್ ಅಪ್‌ಡೇಟ್‌ಗಳು ಮತ್ತು ಫ್ಲೈಟ್ ಅಪ್‌ಡೇಟ್ ಸಂದೇಶಗಳಂತಹ ವಿವಿಧ ಉಪವ್ಯವಸ್ಥೆಗಳಿಂದ ಫ್ಲೈಟ್ ಡೇಟಾವನ್ನು ಸಂಯೋಜಿಸುತ್ತದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ವಿಮಾನ ನಿಲ್ದಾಣಗಳು, ವಾಯುಪ್ರದೇಶಗಳು ಮತ್ತು ವಾಯು ಮಾರ್ಗಗಳ ಬಗ್ಗೆ ಸ್ಥಿರ ಮಾಹಿತಿಯೊಂದಿಗೆ ಹವಾಮಾನ ಮಾಹಿತಿಯನ್ನು ಈ ವ್ಯವಸ್ಥೆಯು ಪ್ರದರ್ಶಿಸುತ್ತದೆ. ಈ ವ್ಯವಸ್ಥೆಯು ಬೇಡಿಕೆ ಮತ್ತು ಸಾಮರ್ಥ್ಯದ ಮಾಹಿತಿಯನ್ನು ಪ್ರಕ್ರಿಯೆಗೊಳಿಸಿ ಹಾರಾಟದ ವೇಳೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಭಾರತದ ಪ್ರತಿ ವಿಮಾನ ನಿಲ್ದಾಣದಲ್ಲಿ ಸಂಚಾರದ ಹರಿವನ್ನು ಖಚಿತಪಡಿಸಿಕೊಳ್ಳಲು ಎಟಿಎಫ್‌ಎಂ ಫ್ಲೋ ವ್ಯವಸ್ಥಾಪಕರಿಗೆ ನಿರ್ಧಾರ ತೆಗೆದುಕೊಳ್ಳುವ ಸಾಧನಗಳನ್ನು ಒದಗಿಸುತ್ತದೆ ಎಂದು ಪ್ರಕಟಣೆ ಹೇಳಿದೆ.
ಯುಎನ್‌ಐ ಕೆಎಸ್‌ವಿ ವಿಎನ್‌ಎಲ್‌ 1904
More News
ಹೊಸ ಜಿ ಎಸ್ ಟಿ ರಿಟರ್ನ್ - ರಾಷ್ಟ್ರವ್ಯಾಪಿ ಸಮಾಲೋಚನಾ ಸಭೆ : ನಿರ್ಮಲಾ ಸೀತಾರಾಮನ್

ಹೊಸ ಜಿ ಎಸ್ ಟಿ ರಿಟರ್ನ್ - ರಾಷ್ಟ್ರವ್ಯಾಪಿ ಸಮಾಲೋಚನಾ ಸಭೆ : ನಿರ್ಮಲಾ ಸೀತಾರಾಮನ್

17 Nov 2019 | 8:48 PM

ನವದೆಹಲಿ, ನ 17 (ಯುಎನ್ಐ) ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ) ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಣಗೊಳಿಸುವ ಮತ್ತು ಜಿ ಎಸ್ ಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆಯನ್ನು ಬಳಕೆದಾರ ಸ್ನೇಹಿಯಾಗಿಸುವ ಉದ್ದೇಶದಿಂದ ಲೆಕ್ಕ ಪರಿಶೋಧಕರು, ವರ್ತಕರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಸಭೆ ನಡೆಸಿದ್ದಾರೆ.

 Sharesee more..
ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

16 Nov 2019 | 7:20 PM

ಬೆಂಗಳೂರು, ನ 16 (ಯುಎನ್ಐ) ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿ ವೋಲ್ವೋ ಕಾರ್ ಇಂಡಿಯಾ ರಾಜ್ಯದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಮಾನ್ಯತೆ ನೀಡಿದೆ.

 Sharesee more..