Monday, Jun 24 2019 | Time 14:41 Hrs(IST)
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
 • ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ
 • ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
 • ಹೊಸ ವಿಮಾನ ಸೇರ್ಪಡೆಯಾಗುವವರೆಗೆ ಎಎನ್ -32 ವಿಮಾನ ಮುಂದುವರಿಕೆ: ವಾಯು ಪಡೆ ಮುಖ್ಯಸ್ಥ ಧನೋವಾ
 • ಪಾಕಿಸ್ತಾನಕ್ಕೆ ಶೊಯೆಬ್‌ ಅಕ್ತರ್‌ ನೀಡಿದ ಸಲಹೆ ಹೀಗಿದೆ
 • ಕರ್ತವ್ಯ ನಿರ್ಲಕ್ಯ, 50 ವರ್ಷಮೀರಿದ ಪೊಲೀಸರಿಗೆ ಕಡ್ಡಾಯ ನಿವೃತ್ತಿ; ಉತ್ತರ ಪ್ರದೇಶ ಸಿಎಂ ಯೋಗಿ ಆದೇಶ
 • ಕರ್ತವ್ಯ ನಿರ್ಲಕ್ಯ, 50 ವರ್ಷಮೀರಿದ ಪೊಲೀಸರಿಗೆ ಕಡ್ಡಾಯ ನಿವೃತ್ತಿ; ಉತ್ತರ ಪ್ರದೇಶ ಸಿಎಂ ಯೋಗಿ ಆದೇಶ
 • ಮನ್ಸೂನ್‍ ಖಾನ್‍ನೊಂದಿಗೆ ಯಾವುದೇ ಸಂಬಂಧವಿಲ್ಲ: ರಹ್ಮಾನ್‍ ಖಾನ್ ಸ್ಪಷ್ಟನೆ
Entertainment Share

ನೃತ್ಯ ಪಟುಗಳಿಗೂ ಯೋಗ ಸಹಕಾರಿ: ನಟ ಶರತ್ ಪಳ್ಳಿ

-ಎಸ್ ಆಶಾ (ಅಂಕಿತಾ ಕಶ್ಯಪ್)

ಬೆಂಗಳೂರು, ಜೂನ್ 12 (ಯುಎನ್ಐ) ಆರೋಗ್ಯಕ್ಕೆ ಮಾತ್ರವಲ್ಲ, ನೃತ್ಯ ಪಟುಗಳ ಅಂಗ ಸೌಷ್ಠವಕ್ಕೂ ಯೋಗ ಪ್ರಯೋಜನಕಾರಿ ಎಂದು ಉದಯೋನ್ಮಖ ನಟ ಶರತ್ ತಳ್ಳಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಾಗಿ ಭಾರತೀಯ ಮೂಲದ ಯೋಗ ಮತ್ತೆ ವಿಶ್ವಮಾನ್ಯವಾಗಿದ್ದು, ಅದರ ಉಪಯೋಗ ಅರಿತ ಪ್ರತಿಯೊಬ್ಬರೂ ಅಳವಡಿಸಿಕೊಳ್ಳುತ್ತಿದ್ದಾರೆ. ಈ ಕುರಿತು ಯುಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಶರತ್ ತಳ್ಳಿ, “ಗೋಕಾಕ್ ನಲ್ಲಿ ಫ್ಯೂಚರ್ ಡಾನ್ಸ್ ಅಕಾಡಮಿ ಹೆಸರಿನ ನೃತ್ಯ ಕೇಂದ್ರ ನಡೆಸುತ್ತಿದ್ದು, ಅದರ ಜೊತೆಗೆ ಸೂರ್ಯ ನಮಸ್ಕಾರ ಮತ್ತಿತರ ಆಸನಗಳನ್ನು ವಾರಕ್ಕೊಮ್ಮೆಯಾದರೂ ಅಭ್ಯಾಸ ಮಾಡುತ್ತೇನೆ. ಗೆಳೆಯನ ಸಹಾಯದಿಂದ ಪ್ರಾಣಾಯಾಮವನ್ನೂ ಕಲಿಯುತ್ತಿದ್ದೇನೆ. ನೃತ್ಯವೂ ಸಹ ಒಂದು ರೀತಿಯಲ್ಲಿ ವ್ಯಾಯಾಮವಾಗುತ್ತದೆ” ಎಂದರು.

ಅಚ್ಚರಿಯೆಂದರೆ ಒಳ್ಳೆಯ ಅಂಗಸೌಷ್ಠವ ಹೊಂದಿರುವ ಪ್ರಕಾಶ್ ತಳ್ಳಿ, ನಿತ್ಯ ಒಂದೇ ಹೊತ್ತು ಊಟ ಮಾಡುವುದಾಗಿ ಹೇಳಿದರು. “ಬೆಳಗ್ಗೆಯಿಂದ ರಾತ್ರಿಯವರೆಗೆ ಕೇವಲ ನೀರು ಹಾಗೂ ಚಹಾ ಸೇವಿಸುತ್ತಿರುತ್ತೇನೆ. ರಾತ್ರಿ ಮಾತ್ರ ಆಹಾರ ಸ್ವೀಕರಿಸುತ್ತೇನೆ” ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಯೋಗವು ವಿದ್ಯಾರ್ಥಿಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಒಂದಿಲ್ಲೊಂದು ಆಸನ, ಪ್ರಾಣಾಯಾಮ ಗಳನ್ನು ಕಲಿಯುತ್ತ ದೃಢಕಾಯರಾಗಿರಲು ಬಯಸುತ್ತಿರುವುದು ಶ್ಲಾಘನೀಯ.

ಯುಎನ್ಐ ಎಸ್ಎ ವಿಎನ್ 1821