Tuesday, Jul 23 2019 | Time 12:46 Hrs(IST)
 • ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ಮಹತ್ವದ ಬದಲಾವಣೆ: ರಾಯ್
 • ವಿಧಾನಸಭೆಯಲ್ಲಿ ಗದ್ದಲ, ಮೂವರು ಟಿಡಿಪಿ ಸದಸ್ಯರ ಅಮಾನತು
 • ಕಾಶ್ಮೀರ ಕುರಿತು ಟ್ರಂಪ್ ಹೇಳಿಕೆ: ರಾಜ್ಯಸಭೆಯಲ್ಲಿ ವಿಪಕ್ಷ ಗದ್ದಲ, ಕಲಾಪ ಮುಂದೂಡಿಕೆ
 • ಜಪಾನ್‌ ಓಪನ್‌: ಎರಡನೇ ಸುತ್ತಿಗೆ ಪ್ರವೇಶಿಸಿದ ಅಶ್ವಿನಿ-ರಂಕಿರೆಡ್ಡಿ ಜೋಡಿ
 • ಕಾಶ್ಮೀರ ಸಂಧಾನ ವಿಷಯ : ಭಾರತ ತಲೆಬಾಗಲು ಸಾಧ್ಯವಿಲ್ಲ ಅಧೀರ್
 • ನಮ್ಮ ಮೌನ ವಿಜಯದ ಸಂಕೇತ: ಆರ್ ಅಶೋಕ್
 • ವಿಧಾನಸಭೆ ಕಲಾಪ ಆರಂಭದಲ್ಲಿ ಆಡಳಿತ ಪಕ್ಷಗಳ ಸದಸ್ಯರ ಗೈರು: ಸ್ಪೀಕರ್ ಅಸಮಾಧಾನ
 • ಜಮ್ಮುವಿನಿಂದ ಅಮರನಾಥಕ್ಕೆ ಹೊರಟ 3060 ಯಾತ್ರಾರ್ಥಿಗಳು
 • ಪುಲ್ವಾಮದಲ್ಲಿ ಕಾಶ್ಮೀರಿ ಉದ್ಯಮಿಯ ಮನೆ ಮೇಲೆ ಎನ್‌ಐಎ ದಾಳಿ
 • ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ
 • ಅಯೋಧ್ಯೆಯಲ್ಲಿ ವಿಶ್ವದಲ್ಲೇ ಅತಿದೊಡ್ಡ ರಾಮನ ಪ್ರತಿಮೆ ನಿರ್ಮಾಣ: ಯೋಗಿ ಆದಿತ್ಯನಾಥ್
 • ಅಮರನಾಥ ಯಾತ್ರೆಗೆ ಹೊರಟ ಹೊಸ ತಂಡ; ಇದುವರೆಗೆ 2 86 ಲಕ್ಷ ಯಾತ್ರಾರ್ಥಿಗಳಿಂದ ದರ್ಶನ
 • ರೊನಾಲ್ಡೊ ಅತ್ಯಾಚಾರದ ಆರೋಪ ಎದುರಿಸುವುದಿಲ್ಲ: ಯುಎಸ್ ಪ್ರಾಸಿಕ್ಯೂಟರ್‌
 • ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳು: ರೇಣುಕಾಚಾರ್ಯ
 • ಜಪಾನ್‌ ಓಪನ್‌: ಭಾರತದ ಸಾಯಿ ಪ್ರಣೀತ್‌ ಶುಭಾರಂಭ
Sports Share

ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ

ಲಂಡನ್‌, ಜೂ 24 (ಯುಎನ್‌ಐ) ಕಳೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತು ಆಘಾತಕ್ಕೆ ಒಳಗಾಗಿರುವ ಆತಿಥೇಯ ಇಂಗ್ಲೆಂಡ್‌, ಐಸಿಸಿ ವಿಶ್ವಕಪ್‌ 32ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ಲಯಕ್ಕೆ ಮರಳಿ ಸೆಮಿಫೈನಲ್‌ಗೆ ಇನ್ನೊಂದು ಹೆಜ್ಜೆ ಹತ್ತಿರವಾಗುವ ಇರಾದೆಯಲ್ಲಿದೆ. ಉಭಯ ತಂಡಗಳ ಹೈವೋಲ್ಟೇಜ್‌ ಪಂದ್ಯಕ್ಕೆ ಇಲ್ಲಿನ ಲಾರ್ಡ್ಸ್‌ ಅಂಗಳದಲ್ಲಿ ವೇದಿಕೆ ಸಿದ್ಧವಾಗಿದೆ.

ಇಂಗ್ಲೆಂಡ್‌ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದ್ದು, ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಟೂರ್ನಿ ಆರಂಭವಾಗುವ ಮುನ್ನ ಆತಿಥೇಯರು ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿ ವಿಶ್ವಕಪ್‌ ಅಭಿಯಾನ ಶುರು ಮಾಡಿತ್ತು. ಆದರೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಎರಡು ಸೋಲುಗಳು ಮಾರ್ಗನ್‌ ಪಡೆಗೆ ತಲೆ ಬೀಸಿಯಾಗಿದೆ. ಇಂಗ್ಲೆಂಡ್‌ ಸೆಮಿಫೈನಲ್‌ ತಲುಪಬೇಕಾದರೆ ಇನ್ನುಳಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಅಗತ್ಯ.
ಮೂರು ಪಂದ್ಯಗಳಲ್ಲಿ ಎರಡು ಗೆಲ್ಲುವುದು ಇಂಗ್ಲೆಂಡ್‌ಗೆ ಸುಲಭವಲ್ಲ. ಏಕೆಂದರೆ, ಮುಂದಿನ ಪಂದ್ಯಗಳು ಕ್ರಮವಾಗಿ ಆಸ್ಟ್ರೇಲಿಯಾ, ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಸೆಣಸಬೇಕಾಗಿದೆ. ಈ ಮೂರು ತಂಡಗಳು ವಿಶ್ವಕಪ್‌ ಗೆಲ್ಲುವ ಫೇವರಿಟ್‌ ತಂಡಗಳಾಗಿವೆ. ಹಾಗಾಗಿ, ಇಂಗ್ಲೆಂಡ್‌ ನಾಳಿಯಿಂದ ಕಠಿಣ ಸವಾಲು ಎದುರಿಸಲು ಸನ್ನದ್ದವಾಗಿದೆ.
ಕಳೆದ ಎರಡು ವರ್ಷಗಳಿಂದ ಏಕದಿನ ಮಾದರಿಯಲ್ಲಿ ಭಯಮುಕ್ತವಾಗಿ ಆಡುತ್ತಿರುವ ಇಯಾನ್‌ ಮಾರ್ಗನ್‌ ಹಾಗೂ ತಂಡಕ್ಕೆ ಮುಂದಿನ ಹಣಾಹಣಿಗಳಲ್ಲಿ ತೀವ್ರ ಒತ್ತಡ ಉಂಟಾಗಲಿದೆ. ಸ್ನಾಯುಸೆಳೆತದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಜೇಸನ್‌ ರಾಯ್‌ ಅನುಪಸ್ಥಿತಿ ತಂಡಕ್ಕೆ ನಾಳೆ ಕಾಡಲಿದೆ.
ಮತ್ತೊಂದೆಡೆ ಬಲಿಷ್ಠ ಆಸ್ಟ್ರೇಲಿಯಾ ಆಡಿರುವ ಆರು ಪಂದ್ಯಗಳಲ್ಲಿ ಐದರಲ್ಲಿ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ, ತಂಡ ಮೂರು ವಿಭಾಗಗಳಲ್ಲಿ ಪ್ರದರ್ಶನ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಇದರ ನಡುವೆ ಆ್ಯರೋನ್‌ ಫಿಂಚ್‌ ಹಾಗೂ ಡೇವಿಡ್‌ ವಾರ್ನರ್‌ ಜೋಡಿ ತಂಡಕ್ಕೆ ಭರ್ಜರಿ ಆರಂಭ ನೀಡುವಲ್ಲಿ ಸಫಲವಾಗುತ್ತಿದೆ. ಇದು ತಂಡಕ್ಕೆ ಪ್ಲಸ್‌ ಪಾಯಿಂಟ್‌. ಬೌಲಿಂಗ್‌ ವಿಭಾಗದಲ್ಲಿ ಮಿಚೆಲ್‌ ಸ್ಟಾರ್ಕ್‌ ಅವರು ನಿರ್ಣಾಯಕ ಸಂದರ್ಭಗಳಲ್ಲಿ ವಿಕೆಟ್‌ ಉರುಳಿಸುವ ಸಾಮಾರ್ಥ್ಯ ಹೊಂದಿದ್ದಾರೆ.
ಮಾರ್ಕುಸ್‌ ಸ್ಟೋಯಿನಿಸ್‌ ಲಭ್ಯತೆಯಿಂದ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಇನ್ನಷ್ಟು ಬಲ ಬಂದಿದೆ. ಇಂಗ್ಲೆಂಡ್‌ ವಿರುದ್ಧ ನಾಳಿನ ಪಂದ್ಯದಲ್ಲಿ ನಾವು ಚಾಂಪಿಯನ್ಸ್‌ ಎಂದು ಮತ್ತೊಮ್ಮೆ ಸಾಬೀತುಪಡಿಸಿಕೊಳ್ಳುವ ಇರಾದೆಯಲ್ಲಿ ಆಸೀಸ್‌ ಇದೆ.
ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ಆಡಿರುವ 10 ಪಂದ್ಯಗಳಲ್ಲಿ ಒಂಬತ್ತರಲ್ಲಿ ಸೋಲು ಅನುಭವಿಸಿದೆ. ಉಭಯ ತಂಡಗಳ ಬಲಾಬಲ ಗಮನಿಸಿದಾಗ ಆಂಗ್ಲರು ಮೇಲು ಗೈ ಸಾಧಿಸಿದ್ದಾರೆ. ಆದರೆ, ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಅವರ ಉಪಸ್ಥಿಯಲ್ಲಿ ನಾಳಿನ ಪಂದ್ಯ ರೋಚಕತೆಯಿಂದ ಕೂಡಿರುತ್ತದೆ.
ತಂಡಗಳು
ಇಂಗ್ಲೆಂಡ್‌: ಇಯಾನ್‌ ಮಾರ್ಗನ್‌(ನಾಯಕ), ಮೊಯಿನ್‌ ಅಲಿ, ಜೊರ್ಫಾ ಆರ್ಚರ್‌, ಜಾನಿ ಬೈರ್‌ಸ್ಟೋ, ಜೋಸ್‌ ಬಟ್ಲರ್‌(ವಿ.ಕೀ), ಟಾಮ್‌ ಕರ್ರನ್‌, ಲಿಯಾಮ್‌ ಪ್ಲಂಕೆಟ್‌, ಆದಿಲ್‌ ರಶೀದ್‌, ಜೋ ರೂಟ್‌, ಜೇಸನ್‌ ರಾಯ್‌, ಬೆನ್‌ ಸ್ಟೋಕ್ಸ್‌, ಜೇಮ್ಸ್‌ ವಿನ್ಸ್‌, ಕ್ರಿಸ್‌ ವೋಕ್ಸ್‌, ಮಾರ್ಕ್‌ವುಡ್‌.


ಆಸ್ಟ್ರೇಲಿಯಾ:
ಆ್ಯರೋನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖವಾಜ, ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌, ಶಾನ್‌ ಮಾರ್ಷ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಾರ್ಕುಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ(ವಿ.ಕೀ), ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಕೇನ್‌ ರಿಚರ್ಡ್ಸ್‌ನ್‌, ನಥಾನ್‌ ಕೌಲ್ಟರ್‌ ನೈಲ್‌, ಜೇಸನ್‌ ಬೆಹ್ರನ್‌ಡ್ರಾಫ್‌, ನಥಾನ್‌ ಲಿಯಾನ್‌, ಆ್ಯಡಂ ಝಂಪಾ
ಸಮಯ: ನಾಳೆ ಮಧ್ಯಾಹ್ನ 03:00
ಸ್ಥಳ: ದಿ ಲಾರ್ಡ್ಸ್, ಲಂಡನ್‌
ಯುಎನ್‌ಐ ಆರ್‌ಕೆ ಕೆಎಸ್‌ವಿ 1332