Tuesday, Jul 23 2019 | Time 00:16 Hrs(IST)
Sports Share

ಪಾಕಿಸ್ತಾನಕ್ಕೆ ಶೊಯೆಬ್‌ ಅಕ್ತರ್‌ ನೀಡಿದ ಸಲಹೆ ಹೀಗಿದೆ

ಲಂಡನ್‌, ಜೂ 24 (ಯುಎನ್‌ಐ) ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಐಸಿಸಿ ವಿಶ್ವಕಪ್‌ ಸೆಮಿಫೈನಲ್ಸ್‌ ಹಾದಿಯನ್ನು ಜೀವಂತವಾಗಿರಿಸಿಕೊಂಡಿರುವ ಪಾಕಿಸ್ತಾನ ತಂಡಕ್ಕೆ ಮಾಜಿ ವೇಗಿ ಶೊಯೆಬ್‌ ಅಕ್ತರ್‌ ಮುಂದಿನ ಪಂದ್ಯಗಳನ್ನು ಭಯಮುಕ್ತರಾಗಿ ಆಡುವಂತೆ ಸಲಹೆ ನೀಡಿದ್ದಾರೆ.

ಈ ಕುರಿತು ಯೂಟ್ಯೂಬ್‌ ಚಾನೆಲ್‌ನಲ್ಲಿ ಹೇಳಿರುವ ಅವರು, ತಮ್ಮ-ತಮ್ಮ ಸಾಮಾರ್ಥ್ಯಕ್ಕೆ ತಕ್ಕಂತೆ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವಂತೆ ಕರೆ ನೀಡಿದ್ದಾರೆ. ಸೆಮಿಫೈನಲ್ಸ್‌ಗೆ ಅರ್ಹತೆ ಪಡೆಯಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶವಿದೆ. ಆದರೆ. ಒತ್ತಡ ಸನ್ನವೇಶಗಳಲ್ಲಿ ಭಯಮುಕ್ತರಾಗಿ ಆಡಬೇಕಷ್ಟೆ ಎಂದು ಹೇಳಿದರು.
ಆರು ಪಂದ್ಯಗಳಿಂದ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಐದು ಅಂಕಗಳಿಂದ ಏಳನೇ ಸ್ಥಾನದಲ್ಲಿದೆ. ಮುಂದಿನ ಪಂದ್ಯ ಬುಧವಾರ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದೆ. ನಂತರ ಶನಿವಾರ ಅಫ್ಘಾನಿಸ್ತಾನ ಹಾಗೂ ಜುಲೈ 5 ರಂದು ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ. ಈ ಮೂರು ಪಂದ್ಯಗಳಲ್ಲಿ ಪಾಕ್‌ ಗೆದ್ದರೆ ಅಂತಿಮ ನಾಲ್ಕರ ಘಟ್ಟಕ್ಕೆ ಲಗ್ಗೆ ಇಡುವ ಸಾಧ್ಯತೆ ಇದೆ.
ಒಂದು ವೇಳೆ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ, ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಸೋಲು ಅನುಭವಿಸಿದರೆ ಪಾಕಿಸ್ತಾನ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ಶೊಯೆಬ್‌ ಮಲ್ಲಿಕ್‌ ಬದಲು ಹ್ಯಾರಿಸ್‌ ಸೊಹೈಲ್ ಅವರಿಗೆ ಅವಕಾಶ ನೀಡಿರುವುದು ಒಳ್ಳೆಯ ನಿರ್ಧಾರ. ಮುಂದಿನ ಪಂದ್ಯಗಳಿಗೂ ಅವರನ್ನೂ ಪರಿಗಣಿಸಬೇಕು ಎಂದು ಅಕ್ತರ್‌ ಸಲಹೆ ನೀಡಿದ್ದಾರೆ.
ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಮೊಹಮ್ಮದ್‌ ಅಮೀರ್‌ ಹಾಗೂ ವಹಾಬ್‌ ರಿಯಾಜ್‌ ಅವರನ್ನು ಅಕ್ತರ್‌ ಹೊಗಳಿದರು. ಇವರಿಬ್ಬರು ಸೇರಿ ಆಫ್ರಿಕಾ ವಿರುದ್ಧ ಐದು ವಿಕೆಟ್ ಕಬಳಿಸಿದ್ದರು.
"ಪಾಕಿಸ್ತಾನ ತಂಡದ ಬೌಲಿಂಗ್‌ ಉತ್ತಮವಾಗಿದೆ. ಮೊಹಮ್ಮದ್‌ ಅಮೀರ್‌ ವಿಕೆಟ್‌ ಕಬಳಿಸಿದ್ದು ಪಂದ್ಯಕ್ಕೆ ತಿರುವು ಸಿಕ್ಕಿತು. ರಿವರ್ಸ್‌ ಸ್ವಿಂಗ್‌ ಮಾಡುವ ಇವರು ತಂಡದಲ್ಲಿನ ಬೌಲಿಂಗ್‌ ವಿಭಾಗದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಆಟಗಾರು ಫೀಲ್ಡಿಂಗ್‌ ಇನ್ನಷ್ಟು ಉತ್ತಮ ಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಪಂದ್ಯಗಳಿಗೆ ಫಲಿತಾಂಶಕ್ಕೆ ಕಂಠಕವಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಯುಎನ್‌ಐ ಆರ್‌ಕೆ ಎಎಚ್‌ 1242