Tuesday, Jul 23 2019 | Time 12:43 Hrs(IST)
 • ಪದ್ಮ ಪ್ರಶಸ್ತಿಗಳ ಆಯ್ಕೆಯಲ್ಲಿ ಮಹತ್ವದ ಬದಲಾವಣೆ: ರಾಯ್
 • ವಿಧಾನಸಭೆಯಲ್ಲಿ ಗದ್ದಲ, ಮೂವರು ಟಿಡಿಪಿ ಸದಸ್ಯರ ಅಮಾನತು
 • ಕಾಶ್ಮೀರ ಕುರಿತು ಟ್ರಂಪ್ ಹೇಳಿಕೆ: ರಾಜ್ಯಸಭೆಯಲ್ಲಿ ವಿಪಕ್ಷ ಗದ್ದಲ, ಕಲಾಪ ಮುಂದೂಡಿಕೆ
 • ಜಪಾನ್‌ ಓಪನ್‌: ಎರಡನೇ ಸುತ್ತಿಗೆ ಪ್ರವೇಶಿಸಿದ ಅಶ್ವಿನಿ-ರಂಕಿರೆಡ್ಡಿ ಜೋಡಿ
 • ಕಾಶ್ಮೀರ ಸಂಧಾನ ವಿಷಯ : ಭಾರತ ತಲೆಬಾಗಲು ಸಾಧ್ಯವಿಲ್ಲ ಅಧೀರ್
 • ನಮ್ಮ ಮೌನ ವಿಜಯದ ಸಂಕೇತ: ಆರ್ ಅಶೋಕ್
 • ವಿಧಾನಸಭೆ ಕಲಾಪ ಆರಂಭದಲ್ಲಿ ಆಡಳಿತ ಪಕ್ಷಗಳ ಸದಸ್ಯರ ಗೈರು: ಸ್ಪೀಕರ್ ಅಸಮಾಧಾನ
 • ಜಮ್ಮುವಿನಿಂದ ಅಮರನಾಥಕ್ಕೆ ಹೊರಟ 3060 ಯಾತ್ರಾರ್ಥಿಗಳು
 • ಪುಲ್ವಾಮದಲ್ಲಿ ಕಾಶ್ಮೀರಿ ಉದ್ಯಮಿಯ ಮನೆ ಮೇಲೆ ಎನ್‌ಐಎ ದಾಳಿ
 • ಕಲಾಪಕ್ಕೆ ಆಡಳಿತ ಪಕ್ಷಗಳ ಸದಸ್ಯರು ಗೈರು: ಸ್ಪೀಕರ್, ವಿಪಕ್ಷ ನಾಯಕ ಗರಂ
 • ಅಯೋಧ್ಯೆಯಲ್ಲಿ ವಿಶ್ವದಲ್ಲೇ ಅತಿದೊಡ್ಡ ರಾಮನ ಪ್ರತಿಮೆ ನಿರ್ಮಾಣ: ಯೋಗಿ ಆದಿತ್ಯನಾಥ್
 • ಅಮರನಾಥ ಯಾತ್ರೆಗೆ ಹೊರಟ ಹೊಸ ತಂಡ; ಇದುವರೆಗೆ 2 86 ಲಕ್ಷ ಯಾತ್ರಾರ್ಥಿಗಳಿಂದ ದರ್ಶನ
 • ರೊನಾಲ್ಡೊ ಅತ್ಯಾಚಾರದ ಆರೋಪ ಎದುರಿಸುವುದಿಲ್ಲ: ಯುಎಸ್ ಪ್ರಾಸಿಕ್ಯೂಟರ್‌
 • ಮೈತ್ರಿ ಸರ್ಕಾರ ಉಳಿಸಲು ಹೋಗಿ ಸಿದ್ದರಾಮಯ್ಯ ವರ್ಚಸ್ಸು ಹಾಳು: ರೇಣುಕಾಚಾರ್ಯ
 • ಜಪಾನ್‌ ಓಪನ್‌: ಭಾರತದ ಸಾಯಿ ಪ್ರಣೀತ್‌ ಶುಭಾರಂಭ
business economy Share

ಪ್ರಧಾನಿ-ತಜ್ಞರ ಭೇಟಿ: ಉದ್ಯೋಗದ ಬೆಳವಣಿಗೆ, ಬಜೆಟ್‌ನಲ್ಲಿನ ಆದ್ಯತೆ ಕುರಿತು ಚರ್ಚೆ

ನವದೆಹಲಿ, ಜೂನ್ 22 (ಯುಎನ್‌ಐ) ಆರ್ಥಿಕ ಕುಸಿತದ ವಾತಾವರಣದ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹಿರಿಯ ಆರ್ಥಿಕ ತಜ್ಞರು, ಉದ್ಯಮದ ಮುಖಂಡರು ಮತ್ತು ತಜ್ಞರೊಂದಿಗೆ 2019-20ರ ಬಜೆಟ್‌ ಕುರಿತು ವಿವರವಾದ ಸಮಾಲೋಚನೆ ನಡೆಸಿದ್ದಾರೆ.
ಎಂಎಸ್‌ಎಂಇ ವಲಯವನ್ನು ಪ್ರೋತ್ಸಾಹಿಸುವ ಮೂಲಕ ಮೂಲಸೌಕರ್ಯ, ಕೃಷಿ ಮತ್ತು ಉದ್ಯೋಗ ಬೆಳವಣಿಗೆಗೆ ಈ ಬಜೆಟ್‌ನಲ್ಲಿ ಒತ್ತು ನೀಡಲು ಸಮಾಲೋಚನೆಯಲ್ಲಿ ಸಲಹೆ ಬಂದಿದೆ ಎನ್ನಲಾಗಿದೆ.
'ಆರ್ಥಿಕ ನೀತಿ – ಮುಂದಿನ ದಾರಿ’ ಎಂಬ ವಿಷಯದ ಕುರಿತು ಪ್ರಧಾನಿ 40ಕ್ಕೂ ಹೆಚ್ಚು ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರೊಂದಿಗೆ ಚರ್ಚಿಸಿದ್ದಾರೆ. ಸ್ಥೂಲ ಆರ್ಥಿಕತೆ ಮತ್ತು ಉದ್ಯೋಗ, ಕೃಷಿ ಮತ್ತು ಜಲ ಸಂಪನ್ಮೂಲಗಳು, ರಫ್ತು, ಶಿಕ್ಷಣ ಮತ್ತು ಆರೋಗ್ಯದ ವಿಷಯಗಳ ಕುರಿತು ಚರ್ಚೆ ವೇಳೆ ಗಮನಹರಿಸಲಾಗಿದೆ.
ಉದ್ಯಮದ ಮುಖಂಡರು ಮತ್ತು ತಜ್ಞರು ಹೂಡಿಕೆ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಕಲ್ಲಿದ್ದಲು ಮತ್ತು ಗಣಿಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಉದಾರೀಕರಣಗೊಳಿಸಲು ಸಲಹೆಯಿತ್ತಿದ್ದಾರೆ.
ಸ್ಥೂಲ ಆರ್ಥಿಕತೆ ಮತ್ತು ಉದ್ಯೋಗ, ಕೃಷಿ ಮತ್ತು ಜಲ ಸಂಪನ್ಮೂಲಗಳು, ರಫ್ತು, ಶಿಕ್ಷಣ ಮತ್ತು ಆರೋಗ್ಯದ ವಿಷಯಗಳ ಕುರಿತು ಅರ್ಥಶಾಸ್ತ್ರಜ್ಞರು ಮತ್ತು ಇತರ ತಜ್ಞರೊಂದಿಗೆ ಫಲಪ್ರದವಾದ ಸಂವಾದವನ್ನು ನಡೆಸಲಾಯಿತು. ಅವರ ಸಲಹೆಗಳು ನಮ್ಮ ಬೆಳವಣಿಗೆಯ ಪಥಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಪ್ರಧಾನಿ ತಮ್ಮ ಟ್ವಿಟ್ಟರ್ ಬರೆದಿದ್ದಾರೆ.
ಸಭೆಯಲ್ಲಿ ಎಸ್‌ಬಿಐನ ಸಮೂಹ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್, ಜೆ ಪಿ ಮೋರ್ಗಾನ್‌ನ ಭಾರತೀಯ ಮುಖ್ಯ ಅರ್ಥಶಾಸ್ತ್ರಜ್ಞ ಡಾ.ಸಜ್ಜಿದ್ ಚಿನೊಯ್, ಕ್ರಿಸ್‌ಸಿಲ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಧರ್ಮಕೀರ್ತಿ ಜೋಶಿ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಟಾಟಾ ಸನ್ಸ್‌ನ ನಟರಾಜನ್ ಚಂದ್ರಶೇಖರನ್, ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಅನಿಲ್ ಅಗರ್‌ವಾಲ್ ಮತ್ತು ಅರ್ಥಶಾಸ್ತ್ರಜ್ಞರಾದ ಸುರ್ಜಿತ್ ಭಲ್ಲಾ ಮತ್ತು ಇಎಸಿ-ಪಿಎಂ ಅಧ್ಯಕ್ಷ ಬಿಬೆಕ್ ಡೆಬ್ರಾಯ್ ಇತರರು ಹಾಜರಿದ್ದರು ಎನ್ನಲಾಗಿದೆ.
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಮತ್ತು ಯೋಜನಾ ರಾಜ್ಯ ಖಾತೆ ಸಚಿವ ರಾವ್ ಇಂದ್ರಜಿತ್ ಸಿಂಗ್ ಕೂಡ ಇಂದಿನ ಸಭೆಯಲ್ಲಿ ಭಾಗವಹಿಸಿದ್ದರು.
ಯುಎನ್‌ಐ ಕೆಎಸ್‌ವಿ ಡಿವಿ 2310