Monday, Jun 1 2020 | Time 01:47 Hrs(IST)
Health -Lifestyle Share

ಫಿಲಿಪೈನ್ಸ್ : 13,777ಕ್ಕೆ ತಲುಪಿದ ಕೊರೋನಾ ಸೋಂಕು

ಮನಿಲಾ, ಮೇ 23 (ಕ್ಸಿನ್ಹುವಾ) ಕೋವಿಡ್ -19 ನ 180 ಹೊಸ ಪ್ರಕರಣಗಳನ್ನು ಫಿಲಿಪೈನ್ಸ್ ಶನಿವಾರ ವರದಿ ಮಾಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 13,777 ಕ್ಕೆ ಹೆಚ್ಚಿಸಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 85 ರೋಗಿಗಳು ಚೇತರಿಸಿಕೊಂಡ ನಂತರ ಗುಣಮುಖರಾದವರ ಸಂಖ್ಯೆ 3,177 ಕ್ಕೆ ಏರಿದೆ. ಸಾವಿನ ಸಂಖ್ಯೆ 863 ಕ್ಕೆ ಹೆಚ್ಚಳವಾಗಿದೆ ಎಂದು ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮನಿಲಾದಲ್ಲಿ ಕೊರೋನಾ ಸೋಂಇನ 114 ಪ್ರಕರಣಗಳು ಅಥವಾ 63 ಪ್ರತಿಶತ ಪ್ರಕರಣಗಳು ವರದಿಯಾಗಿದ್ದರೆ, 66 ಪ್ರಕರಣಗಳು ಅಥವಾ 37 ಪ್ರತಿಶತ ಪ್ರಕರಣಗಳು ದೇಶದ ಇತರ ಭಾಗಗಳಿಂದ ವರದಿಯಾಗಿವೆ.

ಕೊರೋನಾ -19 ಬಿಕ್ಕಟ್ಟಿನ ಸಮಯದಲ್ಲಿ ಜನರು ಹೆಚ್ಚು ತಾಳ್ಮೆ, ಸಂಯಮದಿಂದ ಇರುವಂತೆ ಅಧ್ಯಕ್ಷ ರೊಡ್ರಿಗೋ ಡುಟರ್ಟೆ ಮನವಿ ಮಾಡಿದ್ದು, ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಂಕಷ್ಟಗಳನ್ನು ನಿವಾರಿಸಲು ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಯುಎನ್‍ಐ ಎಸ್‍ಎ ವಿಎನ್ 1448