Saturday, May 25 2019 | Time 05:04 Hrs(IST)
business economy Share

ಬೆಂಗಳೂರು - ಬೆಳಗಾವಿ - ಅಹಮದಾಬಾದ್ ನಡುವೆ ವಿಮಾನ ಸೇವೆ

ಬೆಳಗಾವಿ, ಮೇ 15 (ಯುಎನ್ಐ ) ಘೋಡಾವತ್ (ಸ್ಟಾರ್ ಏರ್) ವಿಮಾನ ಸಂಸ್ಥೆ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಂಗಳೂರು - ಬೆಳಗಾವಿ ಮತ್ತು ಅಹಮದಾಬಾದ್ - ಬೆಳಗಾವಿ - ಬೆಂಗಳೂರು ನಡುವೆ ಉಡಾನ್ ಯೋಜನೆಯಡಿ ವಿಮಾನ ಸೇವಾ ಕಾರ್ಯಾಚರಣೆ ಆರಂಭಿಸಿದೆ.
ಮಂಗಳವಾರ ಹೊರತುಪಡಿಸಿ ಸ್ಟಾರ್ ಏರ್ ವಿಮಾನವು ಪ್ರತಿದಿನವೂ ಕಾರ್ಯನಿರ್ವಹಿಸಲಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಬೆಂಗಳೂರಿನಿಂದ ಬೆಳಗ್ಗೆ 9.20 ಕ್ಕೆ ಅಹ್ಮದಾಬಾದ್ ಗೆ ಹೊರಡಲಿದೆ. ನಂತರ ಅಹ್ಮದಾಬಾದ್ ನಿಂದ ಮಧ್ಯಾಹ್ನ 1.50 ಕ್ಕೆ ಬೆಂಗಳೂರಿಗೆ ಹೊರಡಲಿದೆ.
ಭಾನುವಾರ ಬೆಂಗಳೂರಿಗೆ ಸಂಜೆ 4.15 ಗಂಟೆಗೆ ಆಗಮಿಸಿ, ಅಹ್ಮದಾಬಾದ್ ಗೆ ಸಂಜೆ 4.40 ಕ್ಕೆ ಹೊರಡಲಿದೆ. ರಾತ್ರಿ 8 ಗಂಟೆ 40 ನಿಮಿಷಕ್ಕೆ ಅಹಮದಾಬಾದಿನಿಂದ ಬೆಂಗಳೂರಿನತ್ತ ಹಾರಾಟ ನಡೆಸಲಿದೆ.
ಯುಎನ್ ಐ ಕೆಎಸ್ಆರ್ ಜಿಎಸ್ಆರ್ 1706
More News

ಸ್ಥಿರ ಸರ್ಕಾರವನ್ನು ಸ್ವಾಗತಿಸಿದ ವಾಹನ ಉದ್ಯಮ

24 May 2019 | 8:07 PM

 Sharesee more..

ಮೋದಿಗೆ ಫಿಕ್ಕಿ, ಸಿಐಐ ಅಭಿನಂದನೆ

23 May 2019 | 7:10 PM

 Sharesee more..
ಎನ್ ಡಿ ಎ ವಿಜಯದ ಮುನ್ನಡೆ : 40 ಸಾವಿರ ಗಡಿ ದಾಟಿದ ಸೆನ್ಸೆಕ್ಸ್ ; 12 ಸಾವಿರ ಗಡಿ ದಾಟಿದ ನಿಫ್ಟಿ

ಎನ್ ಡಿ ಎ ವಿಜಯದ ಮುನ್ನಡೆ : 40 ಸಾವಿರ ಗಡಿ ದಾಟಿದ ಸೆನ್ಸೆಕ್ಸ್ ; 12 ಸಾವಿರ ಗಡಿ ದಾಟಿದ ನಿಫ್ಟಿ

23 May 2019 | 1:09 PM

ಮುಂಬೈ, ಮೇ 23 (ಯುಎನ್‌ಐ) ಲೋಕಸಭಾ ಚುನಾವಣೆ 2019 ರ ಮತ ಎಣಿಕೆ ಪ್ರಗತಿಯಲ್ಲಿದ್ದು ಎನ್ ಡಿ ಎ ಮುನ್ನಡೆ ಸಾಧಿಸಿದ್ದು ವಿಜಯದತ್ತ ದಾಪುಗಾಲಿಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ.

 Sharesee more..

ಮಹಿಳೆಯರಿಗೆ ಉನ್ನತ ಹುದ್ದೆ : ಉದ್ಯಮಗಳ ಯಶಸ್ಸು

23 May 2019 | 1:02 PM

 Sharesee more..