Tuesday, Jul 23 2019 | Time 00:16 Hrs(IST)
International Share

ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ

ಢಾಕಾ, ಜೂ 24 (ಯುಎನ್ಐ) ಈಶಾನ್ಯ ಬಾಂಗ್ಲಾದೇಶದ ಮೌಲ್ವಿಬಜಾರ್‌ನ ಕುಲೌರಾದ ಬೊರೋಮ್‌ಚಾಲ್‌ ಸೇತುವೆಯಲ್ಲಿ ಉಪಬನ್‌ ಎಕ್ಸ್ ಪ್ರೆಸ್‌ ರೈಲಿನ ಆರು ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ಏಳು ಜನರು ಮೃತಪಟ್ಟು 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಇವರ ಪೈಕಿ ಸದ್ಯಕ್ಕೆ ಇಬ್ಬರು ಗುರುತು ಪತ್ತೆ ಹಚ್ಚಲಾಗಿದೆ. ಭಾನುವಾರ ರಾತ್ರಿ ಸ್ಥಳೀಯ ಕಾಲಮಾನ 11.50ಕ್ಕೆ ಈ ಘಟನೆ ನಡೆದಿದೆ ಎಂದು ಸ್ಥಳೀಯ ಅಗ್ನಿಶಾಮಕ ಸೇವೆಗಳ ಅಧಿಕಾರಿ ನೂರುನ್ ನಬಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಈಶಾನ್ಯ ಸಿಲ್ಹೆಟ್ ನಗರದಿಂದ ಢಾಕಾಕ್ಕೆ ತೆರಳುತ್ತಿದ್ದ ರೈಲಿನ ಒಂದು ಬೋಗಿ ಕಾಲುವೆಗೆ ಹಾಗೂ ಇತರ ಎರಡು ಬೋಗಿಗಳು ಕಾಲುವೆಯ ದಂಡೆಯ ಹತ್ತಿರ ಬಿದ್ದಿವೆ ಎಂದು ಕ್ಸಿನ್ಹುವಾ ವರದಿ ಮಾಡಿದೆ.
ಸ್ಥಳದಲ್ಲಿ ಕತ್ತಲು ಆವರಿಸಿದ್ದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ ಎಂದು ನಬಿ ತಿಳಿಸಿದ್ದಾರೆ.
ಸುಮಾರು 27 ಆಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಪರಿಹಾರ ಕಾರ್ಯದಲ್ಲಿ ನಿರತವಾಗಿದ್ದಾರೆ.
ಯುಎನ್ಐ ಕೆಸ್ಆರ್ ಎಎಚ್ 1312