Wednesday, Feb 19 2020 | Time 13:09 Hrs(IST)
 • ಅನಧಿಕೃತ ಹೋಂ ಸ್ಟೇಗಳ ನೋಂದಣಿ ಕಡ್ಡಾಯ: ಕೊಡಗು ಡಿಸಿ
 • ಸ್ಪಾ ಮೇಲೆ ಸಿಸಿಬಿ ದಾಳಿ: ಓರ್ವ ಬಂಧನ, 6 ಯುವತಿಯರ ರಕ್ಷಣೆ
 • ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳನ ಬಂಧನ
 • ಮಲೆಮಹಾದೇಶ್ವರ ಬೆಟ್ಟದ ಸೋಲಾರ್ ಸಮಸ್ಯೆ: ಅಧಿಕಾರಿಗಳ ತಂಡ‌ ರವಾನೆಗೆ ಕೋಟಾ ಶ್ರೀನಿವಾಸ ಪೂಜಾರಿ ಸೂಚನೆ
 • ಚಿತ್ರರಂಗಕ್ಕೆ ಬಂದು 34 ವರ್ಷ: ಶಿವಣ್ಣ ಟ್ವೀಟ್
 • ಚಿನ್ನಾಭರಣ ಸಮೇತ ಓಮ್ನಿ ಕಳವು: ಸಿಸಿಟಿವಿಯಲ್ಲಿ ಸೆರೆ
 • ವಿಚ್ಛೇದನ ಪ್ರಕರಣಗಳಲ್ಲಿ ತೀವ್ರ ಸಂಕಷ್ಟ ಅನುಭವಿಸುವರು ಮಕ್ಕಳು ಮಾತ್ರ ಸುಪ್ರೀಂ ಕೋರ್ಟ್
 • ಅಶೋಕ್ ಪುತ್ರ ಅಪಘಾತ ನ್ಯಾಯಾಂಗ ತನಿಖೆ ಆಗಲಿ; ಪರಿಷತ್‌ನಲ್ಲಿ ಜಯಮಾಲಾ ಒತ್ತಾಯ
 • ಹರಿದ್ವಾರದ ಬ್ರಹ್ಮಕುಂಡದಿಂದ ಹರಿದುಬಂತು 40 ಸಾವಿರ ಲೀಟರ್ ಗಂಗಾಜಲ: ಶಿವರಾತ್ರಿ ಹಬ್ಬದಂದು ಕೃಷ್ಣಯ್ಯ ಶೆಟ್ಟಿ ಸಾರಥ್ಯದಲ್ಲಿ ಗಂಗಾಜಲ ವಿತರಣೆಗೆ ವ್ಯಾಪಕ ಸಿದ್ಥತೆ
 • ಟ್ರಂಪ್ ಬೇಟಿ ಹಿನ್ನಲೆ: ಯುಮುನಾ ನದಿಗೆ ನೀರು ಬಿಡುಗಡೆ
 • ಆಸ್ಟ್ರೇಲಿಯಾದಲ್ಲಿ ವಿಮಾನಗಳ ಡಿಕ್ಕಿ: ನಾಲ್ವರು ಸಾವು
 • ಆಸ್ಟ್ರೇಲಿಯಾ ಎ ತಂಡದಿಂದ ಮಾರ್ಕಸ್ ಸ್ಟೋಯಿನಿಸ್ ಔಟ್
 • ಯ ಟಿ ಖಾದರ್ ಮೇಲೆ ದೇಶದ್ರೋಹ ಪ್ರಕರಣ: ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ
 • ಜಸ್ಪ್ರಿತ್ ಬುಮ್ರಾ ನ್ಯೂಜಿಲೆಂಡ್ ಗೆ ಆಘಾತ ನೀಡಬಲ್ಲರು: ರಾಸ್ ಟೇಲರ್
 • ದೆಹಲಿಯಲ್ಲಿ ಹೆಚ್ಚುತ್ತಿರುವ ಹನುಮಂತನ ಆರಾಧನೆ ; ಆಪ್ ಶಾಸಕರ ನೇತೃತ್ವದಲ್ಲಿ ಸುಂದರಕಾಂಡ ಪಾರಾಯಣ ಕೈಂಕರ್ಯ !!
Sports Share

ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ ಅವಧಿ ವಿಸ್ತರಣೆಗೆ ಹಗ್ಗಜಗ್ಗಾಟ

ಬರ್ಮಿಂಗ್‌ಹ್ಯಾಮ್, ಜು 12 (ಯುಎನ್‌ಐ) ಭಾರತ ತಂಡದ ಮುಖ್ಯ ತರಬೇತುದಾರ ರವಿಶಾಸ್ತ್ರಿ ಸೇರಿದಂತೆ ಕೋಚಿಂಗ್‌ ಸಿಬ್ಬಂದಿ ಎಲ್ಲರಿಗೂ ಮುಂದಿನ 45 ದಿನಗಳವರೆಗೆ ಅವಧಿ ವಿಸ್ತರಣೆ ಸಿಕ್ಕಿದೆ. ಆದರೆ, ಸಹಾಯಕ ಕೋಚ್‌ ಸಂಜಯ್‌ ಬಂಗಾರ ಅವರ ವಿಸ್ತರಣೆಗೆ ಬಿಸಿಸಿಐಗ ಹಗ್ಗಜಗ್ಗಾಟ ನಡೆಸುತ್ತಿದೆ.
ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ ಮುಗಿದ ಬಳಿಕ ಈ ಎಲ್ಲರ ಗುತ್ತಿಗೆ ಅವಧಿ ಮುಕ್ತಾಯವಾಗಬೇಕಿತ್ತು. ಆದರೆ, ಬಿಸಿಸಿಐ ಇನ್ನೂ 45 ದಿನಗಳವರೆಗೆ ಇವರ ಅವಧಿಯನ್ನು ವಿಸ್ತರಿಸಿದೆ. ಆದರೆ, ಬ್ಯಾಟಿಂಗ್‌ ಕೋಚ್‌ ಸಂಜಯ್‌ ಬಂಗಾರ್‌ ಅವರ ಅವಧಿಯನ್ನು ವಿಸ್ತರಣೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಕಳೆದ ಒಂದೂವರೆ ವರ್ಷದಿಂದ ಭಾರತ ತಂಡದ ಬೌಲಿಂಗ್‌ ಕೋಚ್‌ ಭರತ್‌ ಅರುಣ್‌ ಟೀಮ್‌ಇಂಡಿಯಾ ಬೌಲಿಂಗ್ ವಿಭಾಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಜತೆಗೆ, ಫೀಲ್ಡಿಂಗ್‌ ಕೋಚ್‌ ಆರ್‌. ಶ್ರೀಧರ್‌ ಕೂಡ ತಂಡದ ಕ್ಷೇತ್ರ ರಕ್ಷಣೆಯಲ್ಲಿ ಗುಣಮಟ್ಟ ಹೆಚ್ಚಿಸಿದ್ದಾರೆ. ಆದರೆ, ಬ್ಯಾಟಿಂಗ್‌ ವಿಭಾಗ ಬಂದಾಗಿ ಈ ರೀತಿ ಹೇಳಲು ಸಾಧ್ಯವಾಗುತ್ತಿಲ್ಲ. ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲೇ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕ ಯಶಸ್ವಿಯಾಗಲಿಲ್ಲ ಎಂಬುದು ಬಿಸಿಸಿಐನ ಸಾಮಾನ್ಯ ಊಹೆ.
ಐಸಿಸಿ ವಿಶ್ವಕಪ್‌ ಅಲ್ಲದೇ, ಕಳೆದ ಹಲವು ಆವೃತ್ತಿಗಳಿಂದ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ನಲ್ಲಿನ ಬದಲಾವಣೆಗಳು ನಡೆಯುತ್ತಲೇ ಇವೆ. ಆದರೂ. ಇದುವರೆಗೂ ಈ ಸಮಸ್ಯೆ ಬಗೆಹರಿದಿಲ್ಲ. ಆದರೆ, ಸಂಜಯ್‌ ಬಂಗಾರ್‌ ಅವರು ಈ ಸಮಸ್ಯೆ ಬಗೆಹರಿಸುವ ಬಗ್ಗೆ ಉತ್ಸಾಹ ತೋರಿಲ್ಲ. ಆಲ್‌ರೌಂಡರ್ ವಿಜಯ್ ಶಂಕರ್ ಅವರು ಹೊರಗುಳಿಯುವ ಮುನ್ನವೇ ಫಿಟ್ ಆಗಿದ್ದರು ಎಂದು ಬಂಗಾರ್‌ ಹೇಳಿದ್ದರು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಇದು ನಿರಂತರ ಹೋರಾಟ" ಎಂದು ಹೇಳಿರುವ ಅಧಿಕಾರಿ, ನಾವೆಲ್ಲರೂ ಆಟಗಾರರನ್ನು ಬೆಂಬಲಿಸುತ್ತಿದ್ದೇವೆ ಮತ್ತು ಕಚೇರಿಯಲ್ಲಿ ಈ ಕೆಟ್ಟ ದಿನವನ್ನು ಹೊರತುಪಡಿಸಿ ಆಟಗಾರರು ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನೇ ತೋರಿದ್ದಾರೆ ಎಂದರು. ಯುಎನ್‌ಐ ಆರ್‌ಕೆ ಎಎಚ್‌ 1229