Monday, Jun 1 2020 | Time 02:34 Hrs(IST)
Health -Lifestyle Share

ಬ್ರೆಜಿಲ್ : 330,000ಕ್ಕೆ ಏರಿದ ಕೋವಿಡ್ 19 ಪ್ರಕರಣ

ಬ್ರಸಿಲಿಯಾ, ಮೇ 23 (ಯುಎನ್‍ಐ) ಬ್ರೆಜಿಲ್ ಕೋವಿಡ್ -19 ನ ಒಟ್ಟು ಪ್ರಕರಣಗಳ ಸಂಖ್ಯೆ 330,890 ಕ್ಕೆ ಏರಿಕೆಯಾಗಿದ್ದು, ದಕ್ಷಿಣ ಅಮೆರಿಕಾದ ದೇಶವು, ಅಮೆರಿಕಾ ನಂತರ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕರೋನಾ ವೈರಸ್ ಸೋಂಕನ್ನು ಹೊಂದಿರುವ ದೇಶವಾಗಿ ಹೊರಹೊಮ್ಮಿದೆ.
ಹೆಚ್ಚಿನ ಸಂಖ್ಯೆಯ ಸೋಂಕುಗಳು ಮತ್ತು 21,048 ಸಾವುಗಳ ಹೊರತಾಗಿಯೂ, ದೇಶದಲ್ಲಿ ಕಡಿಮೆ ಪರೀಕ್ಷೆಗಳು ನಡೆದಿವೆ ಮತ್ತು ನೈಜ ಅಂಕಿ ಅಂಶಗಳು ಹೆಚ್ಚು ಇರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಬ್ರೆಜಿಲ್ 1,001 ಹೆಚ್ಚಿನ ಸಾವುಗಳನ್ನು ದಾಖಲಿಸಿದೆ, ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ಒಂದೇ ದಿನದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ದಕ್ಷಿಣ ಅಮೆರಿಕವನ್ನು ಸಾಂಕ್ರಾಮಿಕ ರೋಗದ "ಹೊಸ ಕೇಂದ್ರಬಿಂದು" ಎಂದು ಘೋಷಿಸಿದೆ.

ಬ್ರೆಜಿಲ್ನಲ್ಲಿ ಜೂನ್ ತಿಂಗಳಿಗೆ ಮೊದಲೇ ಕೊರೋನಾ ಬಿಕ್ಕಟ್ಟು ಉತ್ತುಂಗಕ್ಕೇರಲಿದೆ ಎಂದು ಆರೋಗ್ಯ ತಜ್ಞರು ನಿರೀಕ್ಷಿಸಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ನೀಡಿರುವ ಪ್ರತಿಕ್ರಿಯೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಬೋಲ್ಸನಾರೊ ಒಮ್ಮೆ ವೈರಸ್ ಅನ್ನು "ಅತ್ಯಲ್ಪ ಜ್ವರ" ಕ್ಕೆ ಹೋಲಿಸಿದ್ದು, ಲಾಕ್ ಡೌನ್, ಪ್ರತ್ಯೇಕತೆಯಂತಹ ಕ್ರಮಗಳನ್ನು ತಳ್ಳಿಹಾಕಿದ್ದು, ಅವು ಅನಗತ್ಯ ಮತ್ತು ಆರ್ಥಿಕತೆಗೆ ಹಾನಿಕಾರಕ ಎಂದು ಕರೆದಿದ್ದಾರೆ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಅಮೆರಿಕ ದೇಶವು 1.6 ಮಿಲಿಯನ್ ಪ್ರಕರಣಗಳನ್ನು ಮತ್ತು ಸುಮಾರು 96,000 ಸಾವುಗಳನ್ನು ದಾಖಲಿಸಿದ್ದರೆ, ರಷ್ಯಾ ಇದುವರೆಗೆ 326,488 ಪ್ರಕರಣಗಳನ್ನು ಮತ್ತು 3,200 ಸಾವುಗಳನ್ನು ದಾಖಲಿಸಿದೆ.
ಯುಎನ್‍ಐ ಎಸ್‍ಎ ವಿಎನ್ 1437