Tuesday, Jul 23 2019 | Time 00:09 Hrs(IST)
National Share

ಬಾರ್ಮರ್‌ನಲ್ಲಿ ಪೆಂಡಾಲ್‍ ಕುಸಿತ: ಪ್ರಾಣಹಾನಿಗೆ ಅಮಿತ್‌ ಶಾ ಸಂತಾಪ

ನವದೆಹಲಿ, ಜೂನ್‌ 23(ಯುಎನ್‌ಐ) ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಟೆಂಟ್ ಕುಸಿತದಲ್ಲಿ ಮೃತರ ಕುಟುಂಬಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂತಾಪ ಸೂಚಿಸಿದ್ದಾರೆ.
ಇಲ್ಲಿನ ಬಲೋತ್ರಾ ನಗರ ಸಮೀಪದ ಜಸೋಲ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭದ ವೇಳೆ ಟೆಂಟ್ ಕುಸಿದು ಕನಿಷ್ಠ 14 ಜನರು ಸಾವನ್ನಪ್ಪಿದ್ದು, ಇತರೆ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ಅಮಿತ್‌ ಶಾ, ಬಾರ್ಮರ್‌ನಲ್ಲಿ ಪೆಂಡಾಲ್‌ ಕುಸಿದು ಸಾವನ್ನಪ್ಪಿದ ಸುದ್ದಿ ಕೇಳಲು ನೋವಾಗುತ್ತಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದಿದ್ದಾರೆ.
ಮೂಲಗಳ ಪ್ರಕಾರ, ಮಾತಾ ರಾಣಿ ಭಾತಿಯಾನಿ ಜಿ ಅವರ ಧಾರ್ಮಿಕ ಕಥೆ ಕೇಳಲು ನೂರಾರು ಭಕ್ತರು ಅಲ್ಲಿ ನೆರೆದಿದ್ದರು. ಪ್ರದೇಶದಲ್ಲಿ ಸುರಿದ ಬಿರುಗಾಳಿ ಮತ್ತು ಭಾರಿ ಮಳೆಯಿಂದ ಭಕ್ತರು ನೆರೆದಿದ್ದ ಪೆಂಡಾಲ್‍ ಕುಸಿದು ಈ ಅನಾಹುತ ಸಂಭವಿಸಿದೆ.
ಯುಎನ್‌ಐ ಕೆಎಸ್‌ವಿ ಎಸ್‌ಎಚ್‌ 2053