Monday, Jul 22 2019 | Time 19:51 Hrs(IST)
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
 • ಟ್ರಂಪ್ ಭೇಟಿಗೆ ಮುಂದಾದ ಇಮ್ರಾನ್ ಖಾನ್
International Share

ಭಯೋತ್ಪಾದನೆ ವ್ಯಾಪಕದಿಂದ ಇಡೀ ಕೀನ್ಯಾ ಅಸ್ಥಿರ: ಗುಟೇರೆಸ್ ಕಳವಳ

ವಿಶ್ವಸಂಸ್ಥೆ, ಜುಲೈ 11 (ಯುಎನ್‌ಐ)- ಭಯೋತ್ಪಾದನೆ ಮತ್ತು ಸಂಘರ್ಷಗಳಿಂದ ಕೀನ್ಯಾದ ಇಡೀ ಪ್ರಾಂತ್ಯ ಅಸ್ಥಿರಗೊಳ್ಳುತ್ತಿದ್ದು, ಕುಟುಂಬಗಳು ಮತ್ತು ಸಮುದಾಯಗಳು ನಲುಗುತ್ತಿವೆ ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಅಂಟೊನಿಯೋ ಗುಟೇರಸ್‍ ಕಳವಳ ವ್ಯಕ್ತಪಡಿಸಿದ್ದಾರೆ.
ನೈರೋಬಿಯಲ್ಲಿ ನಡೆದ ಭಯೋತ್ಪಾದನೆ ನಿಗ್ರಹ ಕುರಿತ ಸಮಾವೇಶದ ಉದ್ಘಾಟನಾ ಗೋಷ್ಠಿಯಲ್ಲಿ ಮಾತನಾಡಿದ ಗುಟೆರೆಸ್, ಕಳೆದ ಜನವರಿಯಲ್ಲಿ ಕೀನ್ಯಾ ರಾಜಧಾನಿಯಾದ ಇಲ್ಲಿ ಹೋಟೆಲ್ ಸಂಕೀರ್ಣವೊಂದರ ಮೇಲೆ ದಾಳಿಕೋರರು ವಶಕ್ಕೆ ತೆಗೆದುಕೊಂಡ ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಗಂಭೀರ ವಿಷಯವಾಗಿದೆ ಎಂದ ಗುಟೇರಸ್‍, ಚಾಡ್ , ಮಧ್ಯ ಮಾಲಿ, ಬುರ್ಕಿನಾ ಫಾಸೊ ಮತ್ತು ನೈಜರ್ ದೇಶಗಳಲ್ಲಿ ಸಶಸ್ತ್ರ ಉಗ್ರರು ನಡೆಸುತ್ತಿರುವ ದಾಳಿಗಳಿಂದ ಜನರು ಭಯಭೀತರಾಗಿದ್ದು, ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಆಫ್ರಿಕಾದ ಭಯೋತ್ಪಾದನೆ ಪೀಡಿತ ರಾಷ್ಟ್ರಗಳಿಗೆ ಅಂತಾರಾಷ್ಟ್ರೀಯ ಸಮುದಾಯ ಬೆಂಬಲ ತುರ್ತು ಅವಶ್ಯಕತೆಯಿದೆ ಎಂದು ಅವರು ಹೇಳಿದ್ದಾರೆ. 'ಆಫ್ರಿಕಾದ ಜನರು "ಭಯೋತ್ಪಾದನೆ ಮತ್ತು ಈ ಪಿಡುಗಿನ ಹರಡುವಿಕೆ ಹಾಗೂ ಹಿಂಸಾಚಾರ ಉಗ್ರವಾದ ಹರಡುವಿಕೆ ಎದುರಿಸುವ ಪ್ರಯತ್ನಗಳಲ್ಲಿ ಮುಂಚೂಣಿಯಲ್ಲಿದ್ದಾರೆ.'ಎಂದು ಗುಟೇರಸ್ ಹೇಳಿದ್ದಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 1324