Wednesday, May 27 2020 | Time 02:43 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Health -Lifestyle Share

ಮಕ್ಕಳಲ್ಲಿ ಕಿವುಡು, ಮೂಕತನ ಬಹುದೊಡ್ಡ ವಿಕಲತೆ : ಡಾ. ಸುರೇಶ್ ಇಸ್ಲೂರ್

ಮಕ್ಕಳಲ್ಲಿ ಕಿವುಡು, ಮೂಕತನ ಬಹುದೊಡ್ಡ ವಿಕಲತೆ : ಡಾ. ಸುರೇಶ್ ಇಸ್ಲೂರ್
ಮಕ್ಕಳಲ್ಲಿ ಕಿವುಡು, ಮೂಕತನ ಬಹುದೊಡ್ಡ ವಿಕಲತೆ : ಡಾ. ಸುರೇಶ್ ಇಸ್ಲೂರ್

ಶಿವಮೊಗ್ಗ, ಜು 8 [ಯುಎನ್ಐ] ಮಕ್ಕಳಲ್ಲಿ ಕಿವುಡು ಹಾಗೂ ಮೂಕತನ ಬಹು ದೊಡ್ಡ ವಿಕಲತೆಯಾಗಿದೆ ಯಾಕೆಂದರೆ ಬುದ್ಧಿ ಮಾಂದ್ಯತೆ ಇರುವುವರನ್ನು ನೋಡಿದಾಗ ಗುರುತಿಸಬಹುದು, ಅಂಗವಿಕಲರನ್ನು ನೋಡಿದಾಗ ಗುರುತಿಸಬಹುದು ಆದರೆ ಕಿವುಡು ಮತ್ತು ಮೂಕ ಮಕ್ಕಳನ್ನು ನೋಡಿದಾಗ ಗುರುತಿಸಲು ಸಾಧ್ಯವಿಲ್ಲ ಎಂದು ತಜ್ಞ ವೈದ್ಯರಾದ ಡಾ. ಸುರೇಶ್ ಇಸ್ಲೂರ್ ಹೇಳಿದ್ದಾರೆ.

ಇಲ್ಲಿನ ಬಸವೇಶ್ವರ ನಗರದಲ್ಲಿ ಕ್ರಿಯೇಟಿವ್ ಗ್ರೂಪ್ ಸಂಸ್ಥೆಯು ಜೆಸಿಐ ಶಿವಮೊಗ್ಗ ಶರಾವತಿಯ ಸಹಯೋಗದಲ್ಲಿ ನಡೆಸಿದ ಕಿವುಡು ಮಕ್ಕಳ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಗರ್ಭಧಾರಣೆ ಸಂದರ್ಭದಲ್ಲಿ ಸಣ್ಣದೊಂದು ಜವಾಬ್ದಾರಿ, ಜಾಗರೂಕತೆ ಮರೆತರೆ ಕಿವುಡುತನಕ್ಕೆ ಕಾಣವಾಗುತ್ತದೆ. ಆ ಸಂದರ್ಭದಲ್ಲಿ ಗರ್ಭಿಣಿಯರಿಗೆ ಬರುವ ಜ್ವರ, ಖಾಯಿಲೆಗೆ ಬಗ್ಗೆ ಅಸಡ್ಡೆ ಮಾಡದಿದ್ದರೆ ಮಗು ಆರೋಗ್ಯವಾಗಿ ಜನನವಾಗುತ್ತದೆ ಎಂದು ಹೇಳಿದರು.

ಭಾರತದಲ್ಲಿ ಕಿವುಡು ಹಾಗೂ ಮೂಕತನದ ನಿವಾರಣೆಗೆ ಅಗತ್ಯವಾಗಿ ಜಾಗರೂಕತೆ ಬೇಕಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಗ್ಗೆ ಆಸಕ್ತಿ ತೋರಬೇಕಾಗಿದೆ. ಸಂಘ ಸಂಸ್ಥೆಗಳು ಸಹ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಡಾ. ಸುರೇಶ್ ಇಸ್ಲೂರ್ ಸಲಹೆ ಮಾಡಿದರು.

ಕ್ರಿಯೇಟಿವ್ ಗ್ರೂಪ್ ನ ಆಡಳಿತ ಟ್ರಸ್ಟಿ ಎಲ್,ಕೆ ಪರಮೇಶ್ವರ್ ಮಾತನಾಡಿ, ಕಿವುಡು ಮತ್ತು ಮೂಗತನ ಸಮಸ್ಯೆ ಹೊಂದಿರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸೃಷ್ಠಿಸಲಾಗಿದೆ. ಇಂತಹ ರಚನಾತ್ಮಕ ಕಾರ್ಯಕ್ರಮಗಳಿಂದ ಆತ್ಮ ಸಂತೋಷ ಹೆಚ್ಚುತ್ತದೆ ಎಂದರು.

ನೃತ್ಯ ಕಾರ್ಯಕ್ರಮದ ತೀರ್ಪುಗಾರರಾದ ಮಾಧುರಿ ಪರಶುರಾಮ್ ಮಾತನಾಡಿ ಇಂತಹ ವಿಶೇಷ ಮಕ್ಕಳಲ್ಲಿ ಆಗಾಧ ಪ್ರತಿಭೆಯಿದೆ. ಎಲ್ಲರೂ ಮನುದುಂಬಿ ನೃತ್ಯದಲ್ಲಿ ಪಾಲ್ಗೊಂಡಿದ್ದಾರೆ. ಇದು ನಿಜಕ್ಕೂ ಅಪೂರ್ವ ಮಿಲನ ಎಂದರು.

ಯುಎನ್ಐ ವಿಎನ್ 2005