Tuesday, Nov 19 2019 | Time 05:40 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
International Share

ಮದುವೆ ಸಮಾರಂಭದ ಮೇಲೆ ಬಾಂಬ್ ದಾಳಿ, 4 ಸಾವು

ಕಾಬೂಲ್, ಜುಲೈ 12 (ಯುಎನ್‌ಐ) ಪೂರ್ವ ಅಫ್ಘಾನ್ ಪ್ರಾಂತ್ಯದ ನಂಗರ್‌ಹಾರ್‌ನಲ್ಲಿ ಶುಕ್ರವಾರ ವಿವಾಹ ಸಮಾರಂಭದ ಮೇಲೆ ಉಗ್ರರು ನಡೆಸಿದ್ದಾರೆ ಎನ್ನಲಾದ ಬಾಂಬ್ ದಾಳಿಯಲ್ಲಿ ,ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಅತ್ತೌಲ್ಲಾ ಖೋಗ್ಯಾನಿ,ಅವರ ವಕ್ತಾರರು ಹೇಳಿದ್ದಾರೆ.
"ನಂಗರ್ಹಾರ್ ಪ್ರಾಂತ್ಯದ ಬಚಿರಗಾಂ ಜಿಲ್ಲೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಕನಿಷ್ಠ 4 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ" ಎಂದು ಖೋಗ್ಯಾನಿ ಅವರನ್ನು ಉಲ್ಲೇಖಿಸಿ ಸ್ಪುಟ್ನಿಕ್ ವರದಿ ಮಾಡಿದೆ.
ಸ್ಥಳೀಯ ಮೂಲಗಳ ಪ್ರಕಾರ, ಸ್ಫೋಟವು ಸ್ಥಳೀಯ ಮಿಲಿಟರಿ ಕಮಾಂಡರ್ ಮಗನ ವಿವಾಹ ಸಮಾರಂಭವನ್ನು ಗುರಿಯಾಗಿಸಿತ್ತು ಎನ್ನಲಾಗಿದೆ .
ಈವರೆಗೆ ಯಾವುದೇ ಉಗ್ರಗಾಮಿ ಗುಂಪು ದಾಳಿಯ ಹೊಣೆ ಹೊತ್ತುಕೊಂಡಿಲ್ಲ, ಆದರೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಸ್ಥಳೀಯ ಶಾಖೆಯಾದ ಐಎಸ್-ಕೆ (ರಷ್ಯಾದಲ್ಲಿ ನಿಷೇಧಿಸಲಾಗಿದೆ) ತಾಲಿಬಾನ್ ಸಂಘಟನೆ ಈ ಪ್ರಾಂತ್ಯದಲ್ಲಿ ಹೆಚ್ಚು ಸಕ್ರಿಯವಾಗಿದೆ
ಯುಎನ್ಐ ಕೆಎಸ್ಆರ್ ಎಎಚ್1146