Sunday, Aug 18 2019 | Time 04:34 Hrs(IST)
International Share

ಮೆಡಿಟೇರಿಯನ್‍ನಲ್ಲಿ ದೋಣಿ ದುರಂತ: 45 ಬಾಂಗ್ಲಾದೇಶಿ ಪ್ರಜೆಗಳು ಇನ್ನೂ ನಾಪತ್ತೆ

ಢಾಕಾ, ಮೇ 15 (ಐಎನ್ಐ) ಲಿಬಿಯಾದಿಂದ ಯುರೋಪ್ ತಲುಪಲು ಪ್ರಯತ್ನಿಸುವಾಗ ಮೆಡಿಟರೇನಿಯನ್ ಸಮುದ್ರದಲ್ಲಿ ಶುಕ್ರವಾರ ದೋಣಿ ಮಗುಚಿದ ದುರಂತದಲ್ಲಿ ಇನ್ನೂ 40ರಿಂದ 45 ಬಾಂಗ್ಲಾದೇಶಿ ಪ್ರಜೆಗಳು ಕಾಣೆಯಾಗಿದ್ದಾರೆ ಬಾಂಗ್ಲಾದೇಶ ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 50 ಜನರಿದ್ದ ಒಂದು ದೋಣಿ ಹಾಗೂ 70 ಜನರನ್ನು ಹೊತ್ತೊಯ್ಯುತ್ತಿದ್ದ ಮತ್ತೊಂದು ದೋಣಿ ಮೇ 9 ರ ರಾತ್ರಿ ಒಂದೇ ಸಮಯಕ್ಕೆ ಹೊರಟಿವೆ. 50 ಜನರಿದ್ದ ದೋಣಿ ಇಟಲಿಯನ್ನು ಸೇರಿರುವ ಸಾಧ್ಯತೆ ಇದ್ದು, ಎರಡನೇ ದೋಣಿ ಸಮುದ್ರದಲ್ಲಿ ಮುಳುಗಿದೆ ಎಂದು ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿರುವ ಬಾಂಗ್ಲಾದೇಶದ ದೂತಾವಾಸ ಕಚೇರಿಯ ಕಾರ್ಮಿಕ ಸಲಹೆಗಾರ ಎಎಸ್ಎಂ ಅಶ್ರಫುಲ್ ಇಸ್ಲಾಂ ತಿಳಿಸಿದ್ದಾರೆ.
ಮುಳುಗಿದ ದೋಣಿಯಿಂದ 14 ಬಾಂಗ್ಲಾ ಪ್ರಜೆಗಳನ್ನು ರಕ್ಷಿಸಲಾಗಿದ್ದು, ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತನನ್ನು ಶರಿಯತ್‍ ಪುರದ ನರಿಯಾ ಗ್ರಾಮದ ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಮಾರು 30-35 ಬಾಂಗ್ಲಾ ದೇಶೀಯರು ದೋಣಿ ದುರಂತದಲ್ಲಿ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಈ ಮುನ್ನ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೊಮೆನ್ ತಿಳಿಸಿದ್ದರು. ದುರಂತಕ್ಕೀಡಾದ ದೋಣಿ ಲಿಬಿಯಾದ ಝೌರಾದಿಂದ ಹೊರಟಿತ್ತು ಎನ್ನಲಾಗಿದೆ.
ಲಿಬಿಯಾದ ಬಾಂಗ್ಲಾದೇಶದ ರಾಯಭಾರಿ ಎಸ್.ಕೆ.ಸಿಕಂದರ್ ಅಲಿ ಮತ್ತು ಕಾರ್ಮಿಕ ಸಲಹೆಗಾರರಾದ ಅಶ್ರಸುಲ್ ಇಸ್ಲಾಂ ಅವರು ಪರಿಸ್ಥಿತಿಯನ್ನು ಪರಾಮರ್ಶಿಸಲು ಟುನಿಷಿಯಾದಲ್ಲಿದ್ದಾರೆ.
ಮೆಡಿಟರೇನಿಯನ್ ಸಮುದ್ರದಲ್ಲಿ ಶುಕ್ರವಾರ ಸಂಭವಿಸಿದ ದೋಣಿ ದುರಂತದಲ್ಲಿ 27 ಬಾಂಗ್ಲಾ ದೇಶಿ ಪ್ರಜೆಗಳು ಸಾವನ್ನಪ್ಪಿರುವ ಶಂಕೆ ಇದೆ ಎಂದು ಬಾಂಗ್ಲಾದೇಶ ರೆಡ್ ಕ್ರೆಸೆಂಟ್ ಸೊಸೈಟಿ ದೃಢಪಡಿಸಿದೆ.
ಕಳೆದ ಜನವರಿಯಿಂದ ನಡೆದ ದೋಣಿ ದುರಂತಗಳಲ್ಲಿ ಶುಕ್ರವಾರ ಸಂಭವಿಸಿರುವ ದುರಂತ ಘೋರವೆನಿಸಿದೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ.
ಪ್ರತಿ ವರ್ಷ ಸಾವಿರಾರು ಬಾಂಗ್ಲಾದೇಶಿ ವಲಸಿಗರು ಯೂರೋಪ್‍ನಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಅಪಾಯಕಾರಿ ಮೆಡಿಟೇರಿಯನ್‍ ಸಮುದ್ರ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪ್ರಯತ್ನಗಳಲ್ಲಿ ಅನೇಕರು ತಲುಪುವ ಮೊದಲೇ ಸಮುದ್ರದಲ್ಲೇ ಸಾವನ್ನಪ್ಪುತ್ತಾರೆ.
ಯುಎನ್‍ಐ ಎಸ್‍ಎಲ್‍ಎಸ್‍ ಕೆವಿಆರ್ 2029
More News
ಭೂತಾನ್ ಪ್ರವಾಸದಲ್ಲಿ ಪ್ರಧಾನಿ ಮೋದಿ : ಅದ್ದೂರಿ ಸ್ವಾಗತ

ಭೂತಾನ್ ಪ್ರವಾಸದಲ್ಲಿ ಪ್ರಧಾನಿ ಮೋದಿ : ಅದ್ದೂರಿ ಸ್ವಾಗತ

17 Aug 2019 | 4:30 PM

ಪರೋ, ಭೂತಾನ್, ಆ 17 (ಯುಎನ್ಐ) ಎರಡು ದಿನಗಳ ಭೇಟಿಗಾಗಿ ಭೂತಾನ್ ತಲುಪಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಅವರಿಗೆ ಪರೋ ವಿಮಾನ ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು

 Sharesee more..
ಕಾಶ್ಮೀರ ಪರಿಸ್ಥಿತಿ: ಇಮ್ರಾನ್ ಖಾನ್  ಮನವಿ ತಿರಸ್ಕರಿಸಿದ ಟ್ರಂಪ್

ಕಾಶ್ಮೀರ ಪರಿಸ್ಥಿತಿ: ಇಮ್ರಾನ್ ಖಾನ್ ಮನವಿ ತಿರಸ್ಕರಿಸಿದ ಟ್ರಂಪ್

17 Aug 2019 | 4:16 PM

ವಾಷಿಂಗ್ಟನ್, ಆ 17 (ಯುಎನ್ ಐ) ಕಾಶ್ಮೀರದ ಬಿಗುವಿನ ಪರಿಸ್ಥಿತಿ ತಿಳಿಗೊಳಿಸಲು ಭಾರತ – ಪಾಕಿಸ್ತಾನ ದ್ವಿಪಕ್ಷೀಯವಾಗಿಯೇ ಪ್ರಯತ್ನ ನಡೆಸಬೇಕು, ಮೂರನೆಯವರಿಗೆ ಜಾಗವಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

 Sharesee more..

ಚೀನಾ ಕರಾವಳಿಯಲ್ಲಿ ಹಡಗು ಮುಳುಗಿ 7 ಸಾವು

17 Aug 2019 | 3:21 PM

 Sharesee more..

ಮೋದಿ ಭೂತಾನ್ ಪ್ರವಾಸ: ಹತ್ತು ಒಪ್ಪಂದಗಳಿಗೆ ಸಹಿ

17 Aug 2019 | 11:46 AM

 Sharesee more..