Tuesday, Jul 23 2019 | Time 00:15 Hrs(IST)
Entertainment Share

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’
ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಬೆಂಗಳೂರು, ಜೂನ್ 24 (ಯುಎನ್ಐ) ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಪುತ್ರಿಗೆ ನಾಮಕರಣವಾಗಿದೆ.ನಗರದ 'ತಾಜ್​ ವೆಸ್ಟ್​ ಎಂಡ್'​ ಹೋಟೆಲ್​ನಲ್ಲಿ ಜೂನ್ 23ರಂದು ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಯಶ್ ದಂಪತಿ ತಮ್ಮ ಕೂಸಿಗೆ ‘ಆಯ್ರಾ’ ಎಂದು ಹೆಸರಿಟ್ಟಿದ್ದಾರೆ. ತಮ್ಮಿಬ್ಬರ ಹೆಸರಿನ ಅಕ್ಷರಗಳನ್ನು ಸೇರಿಸುವುದರ ಜೊತೆಗೆ ಅರ್ಥಗರ್ಭಿತವಾದ ವಿಶೇಷ ಹೆಸರನ್ನು ಆಯ್ಕೆ ಮಾಡಿದ್ದಾರೆ.ನಾಮಕರಣ ಸಮಾರಂಭಕ್ಕೆ ಆಪ್ತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಈ ಕುರಿತು ನಟ ಯಶ್‌ ಟ್ವಿಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ನಾಮಕರಣದ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ವಿಡಿಯೋದ ಕೊನೆಯಲ್ಲಿ `ಆಯ್ರಾ ವಿ ಲವ್‌ ಯೂ' ಎಂದು ಹೇಳಲಾಗಿದ್ದು, 'ನಮ್ಮ ಪ್ರೀತಿಯ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ. ಹರಸಿ ಹಾರೈಸಿ' ಎಂದು ಬರೆದುಕೊಂಡಿದ್ದಾರೆ.‘ಆಯ್ರಾ’ ಎಂದರೆ ಜೀವನದ ಉಸಿರು, ವಿನಯಶೀಲತೆ, ಬದ್ಧತೆ, ಅರಿವು, ಕಣ್ತೆರೆಸು, ಗೌರವಾನ್ವಿತರು, ಭೂದೇವಿ ಸಹಿತಳಾದ ಲಕ್ಷ್ಮೀ ಮೊದಲಾದ ಅರ್ಥವಿದೆ.

ಯಶ್ ಮಗಳು ಹುಟ್ಟಿದ ಬಳಿಕ ಆಕೆಯನ್ನು ನೋಡಬೇಕೆಂಬ ಅಭಿಮಾನಿಗಳ ಒತ್ತಾಯಕ್ಕೆ ಮಣಿದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟಿ ಶೇರ್ ಮಾಡಿದ್ದರು. ಇದೀಗ ನಾಮಕರಣದ ಫೋಟೋಗಳನ್ನೂ ಸಹ ರಾಕಿಂಗ್ ಸ್ಟಾರ್ ಬಿಡುಗಡೆಗೊಳಿಸಿದ್ದಾರೆ.ಯುಎನ್ಐ ಎಸ್ಎ ವಿಎನ್ 1352

More News
ಈ ವಾರ ತೆರೆಗೆ `ದಶರಥ’

ಈ ವಾರ ತೆರೆಗೆ `ದಶರಥ’

22 Jul 2019 | 5:57 PM

ಬೆಂಗಳೂರು, ಜುಲೈ 22 (ಯುಎನ್ಐ) ಎಂ ಎಸ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ನಿರ್ಮಿಸಿರುವ `ದಶರಥ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..

ಜುಲೈ 24ರಂದು `ನನ್ನ ಪ್ರಕಾರ’ ಹಾಡು ಬಿಡುಗಡೆ

22 Jul 2019 | 5:35 PM

 Sharesee more..

ಆಸ್ಟ್ರೇಲಿಯಾಗೆ ‘ಗಂಟುಮೂಟೆ’

22 Jul 2019 | 5:28 PM

 Sharesee more..

ಮುಕೇಶ್ ಜನ್ಮದಿನ: ಪ್ರಸಿದ್ಧ ಗಾಯಕನ ಸ್ಮರಣೆ

22 Jul 2019 | 4:50 PM

ಕೋಲ್ಕತಾ, ಜುಲೈ 22 (ಯುಎನ್ಐ) “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡನ್ನು ಇಂದಿನ ಯುವಪೀಳಿಗೆಯೂ ಹಾಡಿ ನಲಿಯುತ್ತಿದೆ ಇಂತಹ ಹಲವು ಗೀತೆಗಳೊಂದಿಗೆ ತನ್ನ ವಿಶಿಷ್ಟ ಗಾಯನದಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಮುಕೇಶ್ ಅವರ 96ನೇ ಜನ್ಮದಿನವನ್ನು ಸೋಮವಾರ ದೇಶಾದ್ಯಂತ ಆಚರಿಸುತ್ತಿದ್ದು, ಸಂಗೀತ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ

 Sharesee more..

ಈ ವಾರ ‘ಮಹಿರ’ ತೆರೆಗೆ

22 Jul 2019 | 4:17 PM

 Sharesee more..