Monday, Sep 16 2019 | Time 12:07 Hrs(IST)
 • ತ್ರಿಪುರಾದಲ್ಲಿ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ: ಮನೋಜ್ ಕಾಂತಿ ದೇಬ್
 • ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆ ಬಗ್ಗೆ ರಷ್ಯಾ ಪರಿಶೀಲನೆ-ರೋಸ್ಟೆಕ್ ಸಿಇಒ
 • ಕೆ ಎಸ್‍ ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‍ಡಿಪಿಐ
 • ಬಲವಂತದ ಭಾಷೆ ಹೇರಿಕೆ ಸಲ್ಲದು: ಸಿದ್ದರಾಮಯ್ಯ
 • ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ
 • ಪಂಕಜ್ ಅಡ್ವಾನಿಯ ಸ್ಥಿರ ಪ್ರದರ್ಶನ ಶ್ಲಾಘನೀಯ: ಮೋದಿ
 • ಬೇಗೂರು ಪೊಲೀಸರಿಂದ ರೌಡಿ ಶೀಟರ್ ಓಣಿ ಶ್ರೀಧರ್ ಕಾಲಿಗೆ ಗುಂಡೇಟು
 • ಪಾಕಿಸ್ತಾನದಲ್ಲಿ ಭದ್ರತೆ ಪರಿಶೀಲಿಸಿದ ನಂತರ ಪಂದ್ಯದ ಅಧಿಕಾರಿಗಳ ನೇಮಕ: ಐಸಿಸಿ
 • 47 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್ ಸರಣಿ ಡ್ರಾ
 • ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌
 • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ
Sports Share

ಯಾರ್ಕ್‌ಶೈರ್‌ ಡೈಮಂಡ್ಸ್‌ಗೆ ಸಹಿ ಮಾಡಿದ ಜೆಮಿಮಾ ರೊಡ್ರಿಗಸ್‌

ನವದೆಹಲಿ, ಜೂ 12 (ಯುಎನ್‌ಐ) ಭಾರತ ಮಹಿಳಾ ಕ್ರಿಕೆಟ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮೆನ್‌ ಜೆಮಿಮಾ ರೊಡ್ರಿಗಸ್‌ ಅವರು ಇಂಗ್ಲೆಂಡ್‌ನ ಯಾರ್ಕ್‌ಶೈರ್‌ ಡೈಮಂಡ್ಸ್‌ 2019ರ ಆವೃತ್ತಿಗೆ ಸಹಿ ಮಾಡಿದ್ದು, ಇದರೊಂದಿಗೆ ಆಂಗ್ಲರ ನಾಡಿನಲ್ಲಿ ಕಿಯಾ ಸೂಪರ್‌ ಲೀಗ್‌ ಆಡುತ್ತಿರುವ ಭಾರತದ ಮೂರನೇ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾದರು.


ಈಗಾಗಲೇ ಭಾರತ ತಂಡದ ಸ್ಮೃತಿ ಮಂಧಾನ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಅವರು ಇಂಗ್ಲೆಂಡ್‌ನಲ್ಲಿ ನಡೆಯುವ ಟಿ-20 ಲೀಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಜೆಮಿಮಾ ರೊಡ್ರಿಗಸ್‌ ಅವರು ಮೂರನೇ ಭಾರತೀಯ ಆಟಗಾರ್ತಿಯಾಗಿದ್ದಾರೆ. ಮುಂದಿನ ಆವೃತ್ತಿಗೆ ಯಾರ್ಕ್‌ಶೈರ್‌ ಡೈಮಂಡ್ಸ್‌ ಮಂಗಳವಾರ ತನ್ನ ತಂಡದ 15 ಆಟಗಾರ್ತಿಯರನ್ನು ಪ್ರಕಟಿಸಿದೆ. ಇದರಲ್ಲಿ ಜೆಮಿಮಾ ರೊಡ್ರಿಗಸ್‌ ಸ್ಥಾನ ಪಡೆದಿದ್ದಾರೆ.


2018ರ ಫೆಬ್ರವರಿಯಲ್ಲಿ ಜೆಮಿಮಾ ರೊಡ್ರಿಗಸ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. 25 ಟಿ-20 ಪಂದ್ಯಗಳಲ್ಲಿ ಅವರು 123.57 ಸರಾಸರಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತನ್ನ ಅಮೋಘ ಬ್ಯಾಟಿಂಗ್‌ನಿಂದ ಎಲ್ಲರ ಗಮನ ಸೆಳೆದಿದ್ದರು. ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್‌ ಆಡಿ 81 ರನ್‌ ಗಳಿಸಿದ್ದರು. ಈ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿತ್ತು.


ಕಿಯಾ ಸೂಪರ್‌ ಲೀಗ್‌ನಲ್ಲಿ ಆರು ತಂಡಗಳು ಭಾಗವಹಿಸಲಿವೆ. ಆಗಸ್ಟ್‌ 6 ರಿಂದ ಈ ಟೂರ್ನಿ ಆರಂಭವಾಗಲಿದೆ.


ಯುಎನ್‌ಐ ಆರ್‌ಕೆ ಎಎಚ್‌ 1313