Tuesday, Jul 23 2019 | Time 00:14 Hrs(IST)
National Share

ರಕ್ತದ ಮಡುವಿನಲ್ಲಿ ವೃದ್ಧ ದಂಪತಿ; ಪೊಲೀಸರಿಂದ ತನಿಖೆ

ನವದೆಹಲಿ, ಜೂನ್ 23(ಯುಎನ್ಐ) ದಕ್ಷಿಣ ದೆಹಲಿಯ ವಸಂತ್ ವಿಹಾರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದ ವೃದ್ಧ ದಂಪತಿ ಹಾಗೂ ಮನೆ ಕೆಲಸದವಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ನೈರುತ್ಯ ದೆಹಲಿಯಲ್ಲಿರುವ ವಸಂತ ವಿವಾರ್ ಅಪಾರ್ ಮೆಂಟ್ ನಲ್ಲಿರುವ ನಿವೃತ್ತ ಸರ್ಕಾರಿ ಅಧಿಕಾರಿಗಳ ವಸತಿ ಸಮುಚ್ಚಯದಲ್ಲಿನ ನಿವೃತ್ತ ಸರ್ಕಾರಿ ಅಧಿಕಾರಿಯ ಮನೆಯ ಬಾಗಿಲ ಕೆಳಗೆ ರಕ್ತವನ್ನು ಗಮನಿಸಿದ ಅಲ್ಲಿನ ಕೆಲವು ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಕಾರ ಇವರನ್ನು ವಿಷ್ಣು ಮಾಥುರ್, ಶಶಿ ಮಾಥುರ್ ಮತ್ತು ಮನೆಕೆಲಸದ ಖುಷ್ಬೂ ಎಂದು ಗುರುತಿಸಲಾಗಿದ್ದು, ಗಂಟಲು ಸೀಳಿಕೊಂಡ ರೀತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇಲ್ನೋಟಕ್ಕೆ ದರೋಡೆಕೋರರು ಕೃತ್ಯ ಎಸಗಿರಬಹುದೆಂದು ತಿಳಿದುಬಂದರೂ, ಇತರ ಆಯಾಮಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುಎನ್ಐ ಡಿಸಿ ಎಎಸ್ 1723