Saturday, May 25 2019 | Time 04:53 Hrs(IST)
Entertainment Share

ರಾಜಕೀಯಕ್ಕೆ ಬರೋಲ್ವಂತೆ ಅಜಯ್ ದೇವಗನ್!

ಮುಂಬಯಿ, ಮೇ 15 (ಯುಎನ್ಐ) ತಾವೂ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಬಾಲಿವುಡ್ ನಟ ಅಜಯ್ ದೇವಗನ್ ತಿಳಿಸಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನ ಅನೇಕ ತಾರೆಯರು ಚಿತ್ರರಂಗದ ಹೊರತಾಗಿ ರಾಜಕೀಯಕ್ಕೂ ಪ್ರವೇಶಿಸುತ್ತಿದ್ದಾರೆ. ಈ ಕುರಿತು ಸುದ್ದಿಗಾರರು ಅಜಯ್ ಗೆ ಪ್ರಶ್ನಿಸಿದಾಗ, ''ನಾನ್ಯಾವತ್ತು ರಾಜಕೀಯ ಪ್ರವೇಶಿಸುವುದಿಲ್ಲ. ಜನರೊಂದಿಗೆ ಬೆರೆಯಲು ತುಂಬಾ ನಾಚಿಕೆ ಆಗುತ್ತದೆ. ರಾಜಕೀಯದಲ್ಲಿ ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲವೆಂದು ಭಾವಿಸುತ್ತೇನೆ. ತುಂಬಾ ಜನರೊಂದಿಗೆ ಬೆರೆಯುವುದು ನನಗೆ ಕಷ್ಟ. ಕ್ಯಾಮೆರಾ ಎದುರಿಗೆ ಸಹಜವಾಗಿದ್ದೇನೆ. ಆದರೆ, ನಾನು ಅಂತರ್ಮುಖಿ. ರಾಜಕೀಯದಲ್ಲಿ ಜನರೊಂದಿಗೆ ಬೆರೆಯುವ ಮೂಲಕ ವಿಶ್ವಾಸವಿಟ್ಟ ಜನತೆಯ ಜೊತೆ ಬೆರೆಯುವುದು ಅಗತ್ಯವಾಗಿದೆ. ಆದರೆ, ನಾನು ತುಂಬಾ ನಾಚಿಕೆ ಸ್ವಭಾವಯುಳ್ಳವನಾಗಿದ್ದರಿಂದ ಉತ್ತಮ ಮುಖಂಡನಾಗಲು ಸಾಧ್ಯವಿಲ್ಲ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಪಿಕೆ ಡಿಸಿ 1711
More News

ಇಥಿಯೋಪಿಯಾದಲ್ಲಿ ಅತಿಸಾರದಿಂದ 12 ಜನ ಸಾವು

23 May 2019 | 6:45 PM

 Sharesee more..

ಪ್ರತಿಭೆಯ ಭಂಡಾರವೇ ಆಲಿಯಾ : ಸಲ್ಮಾನ್ ಖಾನ್

23 May 2019 | 3:42 PM

 Sharesee more..

ಹಾಲಿವುಡ್ ಗೆ ಹಾರಿದ ಡಿಂಪಲ್ ಕಪಾಡಿಯಾ

23 May 2019 | 3:10 PM

 Sharesee more..

ಜೂಹಿ ಪುತ್ರನಲ್ಲಿ ನಟನಾಗುವ ಲಕ್ಷಣಗಳಿವೆಯಂತೆ

22 May 2019 | 5:24 PM

 Sharesee more..