Monday, Jul 22 2019 | Time 20:01 Hrs(IST)
 • ಸೋನಿಯಾ, ರಾಹುಲ್‌ ಕುರಿತು ಟೀಕೆ: ಸತ್‌ ಪಾಲ್‌ ವಿರುದ್ಧ ಬಾಲಿ ಆಕ್ರೋಶ
 • ಆರ್ ಟಿಐ ಮಸೂದೆಗೆ ಕಾಂಗ್ರೆಸ್ ವಿರೋಧ; ಹಿಂಪಡೆಯುವಂತೆ ಒತ್ತಾಯ
 • ಚಂದ್ರಯಾನ್-2ಕ್ಕೆ ಭಾರತೀಯ ಉಕ್ಕು ಪ್ರಾಧಿಕಾರದ ವಿಶೇಷ ಲೋಹ ಬಳಕೆ
 • ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಕಲ್ ರಾಜ್ ಮಿಶ್ರಾ ಪ್ರಮಾಣವಚನ
 • ವಿಧಾನಸಭೆಯಲ್ಲಿ ಲಿಂಬಾವಳಿ ಕಣ್ಣೀರು
 • ದಾಖಲೆ ನಿರ್ಮಿಸಿದ ಅಮರನಾಥ ಯಾತ್ರೆ; 22 ದಿನಗಳಲ್ಲಿ 2 85 ಲಕ್ಷ ಯಾತ್ರಿಕರ ಭೇಟಿ
 • ಪ್ರದರ್ಶನ ಅಥವಾ ರವಾನೆ ಸರಕುಗಳ ಮೇಲಿನ ಸಂಯೋಜಿತ ತೆರಿಗೆ ಐಜಿಎಸ್‌ಟಿ ರದ್ದು
 • ಕ್ರಿಪ್ಟೋ ಕರೆನ್ಸಿ ಮೇಲೆ ನಿಷೇಧ ವಿಧಿಸಲು ಸರ್ಕಾರ ನೇಮಿಸಿದ್ದ ಸಮಿತಿ ಸಲಹೆ
 • ಕಾಶ್ಮೀರದ ದೋಡಾದಲ್ಲಿ ಉಗ್ರರ ಅಡಗುದಾಣ ನಾಶ
 • ವಿಧಾನಸಭೆಯಲ್ಲಿ ಸದ್ದುಮಾಡಿದ ಝೀರೋ ಟ್ರಾಫಿಕ್
 • ಟಿವಿಎಸ್‌ ಮಾರಾಟ ಶೇ 7 8ರಷ್ಟು ಏರಿಕೆ
 • ಕಳೆದ 3 ವರ್ಷದಲ್ಲಿ ಭಾರತೀಯ ನೌಕಾ ಸಿಬ್ಬಂದಿ ಸಂಖ್ಯೆ ಜಾಗತಿಕವಾಗಿ ಶೇ 45ರಷ್ಟು ಏರಿಕೆ
 • ವಿಶ್ವಾಸಮತ ಯಾಚನೆಗೆ ಕಾಲಮಿತಿ ನಿಗದಿಪಡಿಸುವಂತೆ ಸ್ಪೀಕರ್ ಗೆ ನಿರ್ದೇಶನ ಕೋರಿ ಹೈಕೋರ್ಟ್ ಗೆ ಪಿಐಎಲ್
 • ಕ್ಸಿಯೋಮಿಯಿಂದ ರೆಡ್‌ಮಿ ಕೆ 20 ಸರಣಿ, ರೆಡ್‌ಮಿ 7 ಎ ಸ್ಮಾರ್ಟ್‌ಪೋನ್ ಬಿಡುಗಡೆ
 • ಸುಪ್ರಿಂಕೋರ್ಟ್ ತೀರ್ಪು ಬರುವತನಕ ವಿಶ್ವಾಸಮತ ಮುಂದೂಡಬೇಕು : ದಿನೇಶ್ ಗುಂಡೂರಾವ್
Health -Lifestyle Share

ರಾಜಕೀಯ ಬದಿಗೊತ್ತಿ ಕಲಾವಿದರನ್ನು ಭೇಟಿಯಾದ ಮೋದಿ

ನವದೆಹಲಿ, ಜುಲೈ 8 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಗುಜರಾತ್ ಜಾನಪದ ಗಾಯಕಿ ಗೀತಾ ರಾಬರಿ ಅವರನ್ನು ಭೇಟಿಯಾಗಿ ಅವರ ಪರಿಶ್ರಮ, ಸಾಧನೆಯನ್ನು ಅಭಿನಂದಿಸಿದರು.
ತವರು ರಾಜ್ಯದ ಕಲಾವಿದೆ ಗೀತಾ ಅವರನ್ನು ಭೇಟಿಯಾದ ನಂತರ ಟ್ವೀಟ್ ಮಾಡಿದ ಮೋದಿ, ಅವರ ಕೆಲಸಗಳು ವಿಶ್ವದಾದ್ಯಂತದ ಗುಜರಾತಿಗಳಿಗೆ ಸಂತಸ ತಂದಿದೆ. ಬಾಲ್ಯದಲ್ಲಿ ಅವರಿಗೆ ಹಾಡಲು ಪ್ರೋತ್ಸಾಹ ನೀಡಿದ್ದು ಇಂದಿಗೂ ನೆನಪಿದೆ. ಇಂದು ಅವರನ್ನು ಭೇಟಿಯಾಗಿ ಮಾತನಾಡುವ ಅವಕಾಶ ದೊರೆಯಿತು. ಅವರ ಅನುಭವವನ್ನು ಅರಿಯಲು ಸಂತಸವಾಯಿತು ಎಂದಿದ್ದಾರೆ.
ಗೀತಾ ರಾಬರಿಯಂತಹ ಜನರು ಸಮಾಜಕ್ಕೆ ಸ್ಫೂರ್ತಿಯಾಗಿದ್ದಾರೆ. ಅವರು ಏಕಾಗ್ರತೆಯಿಂದ ಗಾಯನವನ್ನು ಅಧ್ಯಯನ ಮಾಡಿದ್ದು, ಇಂದು ಅದರಲ್ಲಿ ಪರಿಣತಿ ಪಡೆದಿದ್ದಾರೆ. ಗುಜರಾತಿ ಜಾನಪದ ಸಂಗೀತವನ್ನು ಯುವ ಜನತೆಗೆ ಪರಿಚಯಿಸುವಲ್ಲಿ ಅವರ ಪ್ರಯತ್ನದಿಂದು ತಾವು ಪ್ರೇರೇಪಿತರಾಗಿದ್ದು, ಆಕೆಯ ಭವಿಷ್ಯದ ಯೋಜನೆಗಳಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ.
ಸಂಸತ್ತಿನಲ್ಲಿ ಪ್ರಧಾನಿಯನ್ನು ಭೇಟಿಯಾದ ನಂತರ, ಗೀತಾ ಅವರು ವಿಶೇಷ ಗೀತೆಯೊಂದನ್ನು ಪ್ರಸ್ತುತಪಡಿಸಿದರು.
ನಂತರ ಮೋದಿ, ಲೇಖಕ ಅಮೀಶ್ ತ್ರಿಪಾಠಿ ಅವರನ್ನು ಕೂಡ ಭೇಟಿ ಮಾಡಿ ಅವರ ಪುಸ್ತಕಗಳನ್ನು ಪಡೆದರು.
ಈ ಕುರಿತು ಟ್ವೀಟ್ ಮಾಡಿದ ಅವರು, 'ಅಮೀಶ್ ತ್ರಿಪಾಠಿ ಅವರನ್ನು ಭೇಟಿ ಮಾಡಿ ಉತ್ತಮ ಮಾತುಕತೆ ನಡೆಸಿದೆವು. ಅವರ ಪುಸ್ತಕಗಳು ದೇಶದ ಶ್ರೀಮಂತ ಇತಿಹಾಸ ಹಾಗೂ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲಿವೆ' ಎಂದಿದ್ದಾರೆ.
ಅಮೀಶ್ ಅವರ 'ದಿ ಇಮ್ಮೋರ್ಟಲ್ಸ್ ಆಫ್ ಮೆಲೂಹ', 'ದಿ ಸೀಕ್ರೆಟ್ ಆಫ್ ದಿ ನಾಗಾಸ್', 'ದಿ ವೋತ್ ಆಫ್ ವಾಯುಪುತ್ರಾಸ್' ಮತ್ತಿತರರ ಪುಸ್ತಕಗಳು ಜನಪ್ರಿಯವಾಗಿವೆ.
ಯುಎನ್ಐ ಎಸ್ಎಚ್ ವಿಎನ್ ಎಲ್ 2044
More News
ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

ಗರ್ಭಧಾರಣೆಯ ವೈದ್ಯಕೀಯ ಕಾಯ್ದೆ ಕುರಿತು ಪರಿಶೀಲನೆ: ಸುಪ್ರೀಂ ಕೋರ್ಟ್

15 Jul 2019 | 8:08 PM

ನವದೆಹಲಿ, ಜುಲೈ 15 (ಯುಎನ್‌ಐ) ಗರ್ಭಧಾರಣೆ ಆಯ್ಕೆ ಮಾಡುವ ಹಕ್ಕು ಮಹಿಳೆಯರಿಗೆ ಇದೆಯೇ ಎಂಬ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

 Sharesee more..
ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ರಾಜ್ಯಗಳ ಮೂಲಕ ಕೇಂದ್ರ ಸರ್ಕಾರದ ಸಹಕಾರ

14 Jul 2019 | 2:28 PM

ನವದೆಹಲಿ, ಜುಲೈ 14 (ಯುಎನ್ಐ) ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹದಿಹರಯದ ಹೆಣ್ಣುಮಕ್ಕಳ ಮಾಸಿಕ ಋತುಸ್ರಾವದ ಆರೋಗ್ಯಕ್ಕಾಗಿ ಸಹಕರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ

 Sharesee more..